HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಯಾರಿಗೆ ಹೇಳೋಣ ನಮ್ ಪ್ರಾಬ್ಲೆಂ?: ಮೊಟ್ಟೆತ್ತಡ್ಕ ರಸ್ತೆಯ ಇಕ್ಕೆಲಗಳಲ್ಲಿ ಪೊದೆಗಳ ರಾಶಿ – ಪಾದಚಾರಿಗಳು ಬೀದಿಗೆ!

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಲವು ಕಡೆ ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿಗಳಿಗೆ ನಿರ್ಭೀತಿಯಿಂದ ನಡೆದಾಡಲು ಉತ್ತಮ ಫುಟ್‌ಪಾತ್‌ನ ವ್ಯವಸ್ಥೆ ಇರುತ್ತದೆ. ಆದರೆ ಇಲ್ಲಿ ಪಾದಚಾರಿಗಳು ನಡೆಯಲು ರಸ್ತೆಯನ್ನೇ ಫುಟ್‌ಪಾತ್ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ. ಯಾರಿಗೆ ಹೇಳೋಣ ನಮ್ ಪ್ರಾಬ್ಲೆಂ ಎಂದು ಪಾದಚಾರಿಗಳು ಸದಾ ಗುಣುಗುಡುತ್ತಿರುವುದು ಮಾಮಾಲಾಗಿದೆ.

ಹೌದು, ಇದು ಬೇರೆ ಎಲ್ಲಿಯೂ ಅಲ್ಲ. ಪುತ್ತೂರು ನಗರಸಭಾ ವ್ಯಾಪ್ತಿಯ ಮೊಟ್ಟೆತ್ತಡ್ಕ ಎಂಬಲ್ಲಿ ಈ ದೃಶ್ಯ ಕಾಣ ಸಿಗುತ್ತದೆ. ಮಳೆಗಾಲದ ಸಂದರ್ಭ ಈ ಭಾಗದ ರಸ್ತೆಯ ಇಕ್ಕೆಲಗಳಲ್ಲಿ ಆಕಾಶದೆತ್ತರಕ್ಕೆ ಗಿಡ ಪೊದರುಗಳು ಬೆಳೆದು ನಿಂತಿರುತ್ತದೆ. ವಾಹನಗಳು ನಿತ್ಯ ಈ ರಸ್ತೆಯಲ್ಲಿ ಸಂಚರಿಸುವಾಗ ಪಾದಚಾರಿಗಳು ಕೂಡ ಭಯದಿಂದ ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕಾಗುತ್ತದೆ.

ಕಾಡು ಪ್ರಾಣಿಗಳು, ವಿಷ ಜಂತುಗಳು ಅಡಗಿಕೊಂಡರೂ ಯಾರಿಗೂ ಗೊತ್ತಾಗೋದಿಲ್ಲ ಈ ಗಿಡ ಪೊದರುಗಳ ರಾಶಿಯಿಂದ. ಹತ್ತಿರದಲ್ಲಿಯೇ ಸುಂದರವಾದ ಪಾರ್ಕ್ ಕೂಡ ಇದ್ದು, ಇಲ್ಲಿನ ಗಿಡ ಪೊದರುಗಳ ರಾಶಿಯಿಂದಾಗಿ ಪಾರ್ಕ್‌ನ ಸೌಂದರೀಕರಣಕ್ಕೆ ಹಿನ್ನೆಡೆಯಾಗಿರುವುದು ಸುಳ್ಳಲ್ಲ.

ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲದಿರುವುದರಿಂದ ನೀರು ರಸ್ತೆಯ ಮೂಲಕವೇ ಹರಿದುಹೋಗುವ ಪ್ರಸಂಗ ಎದುರಾಗಿದೆ. ಮುಖ್ಯರಸ್ತೆಯ ಇಕ್ಕೆಲಗಳ ಪರಿಸ್ಥಿತಿಯೇ ಈಗಾದರೆ ಇನ್ನು ಒಳ ರಸ್ತೆಗಳ ಪರಿಸ್ಥಿತಿ ಏನಾಗಬೇಡ ಎಂದು ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದಾರೆ.

ಸ್ವಲ್ಪ ದಿನದ ಹಿಂದೆಯಷ್ಟೇ ನಗರಸಭಾ ವತಿಯಿಂದ ಪೌರ ಕಾರ್ಮಿಕರು ರಸ್ತೆ ಬದಿಯಲ್ಲಿ ಬೆಳೆದ ಹುಲ್ಲುಗಳನ್ನು ತೆಗೆಯಲು ಇದೇ ಪಾರ್ಕ್‌ನ ಬಳಿಯಿಂದ ಶುರು ಮಾಡಿದ್ದರು. ಆದರೆ ಅಲ್ಲಿಯೇ ಪಕ್ಕದಲ್ಲಿ ಇರುವ ಬಾನೆತ್ತರಕ್ಕೆ ಬೆಳೆದ ಗಿಡ ಪೊದರುಗಳ ರಾಶಿ ಬಗ್ಗೆ ಗಮನ ಹರಿಸದಿರುವುದು ವಿಷಾದನೀಯ. ಪಾರ್ಕ್ ಹಾಗೂ ಅದರಾಚೆಯ ಜಾಗ ಪುತ್ತೂರು ನಗರಸಭೆಗೆ ಒಳಪಟ್ಟಿಇರುವುದು ಮಾತ್ರ ಸತ್ಯ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.