HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಫಿಲೋಮಿನಾದ ಉಪನ್ಯಾಸಕ ರಾಧಾಕೃಷ್ಣ ಗೌಡರವರಿಗೆ ಡಾಕ್ಟರೇಟ್ ಪದವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನಲ್ಲಿ ವ್ಯವಹಾರ ಆಡಳಿತ ನಿರ್ವಹಣಾ ವಿಭಾಗದ ಮುಖ್ಯಸ್ಥರಾಗಿರುವ ಉಪನ್ಯಾಸಕ ರಾಧಾಕೃಷ್ಣ ಗೌಡ ವಿ.ರವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.


ತಮಿಳುಬಾಡು ಕೊಯಂಬತ್ತೂರಿನ ಭಾರತೀಯಾರ್ ವಿಶ್ವವಿದ್ಯಾನಿಲಯವು ಬೆಂಗಳೂರಿನ ಸರಕಾರಿ ಆರ್.ಸಿ ಕಾಲೇಜಿನ ಪ್ರೊ/ಡಾ/ಪ್ರಮೋದ್ ಗೋಚ್ಕಾರ್ ರವರ ಮಾರ್ಗದರ್ಶನದಲ್ಲಿ ರಾಧಾಕೃಷ್ಣ ಗೌಡರವರು ಮಂಡಿಸಿದ “Dalith Enterpreneurship-oppurtunites and challenges with special reference to dakshina Kannada district of Karnataka” ಮಹಾ ಪ್ರಬಂಧಕ್ಕೆ ಡಾಕ್ಟರೇಟ್(Ph.D) ಪದವಿ ನೀಡಿ ಗೌರವಿಸಿದೆ. ರಾಧಾಕೃಷ್ಣ ಗೌಡರವರು ತಮ್ಮ ಎಂಕಾಂ ಶಿಕ್ಷಣವನ್ನು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ, ಎಂಫಿಲ್ ಅನ್ನು ಅಳಗಪ್ಪ ವಿಶ್ವವಿದ್ಯಾನಿಲಯ ಕಾರಕ್ಕುಡಿಯಲ್ಲಿ ಪೂರೈಸಿರುತ್ತಾರೆ. ಮಡಂತ್ಯಾರು ಕಾಲೇಜಿನಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ ಪ್ರಸ್ತುತ ಫಿಲೋಮಿನಾ ಕಾಲೇಜಿನಲ್ಲಿ ಕಳೆದ ಹದಿನೆಂಟು ವರ್ಷದಿಂದ ಉಪನ್ಯಾಸಕ ವೃತ್ತಿಯನ್ನು ರಾಧಾಕೃಷ್ಣ ಗೌಡರು ನಿರ್ವಹಿಸುತ್ತಿದ್ದಾರೆ. ಕಾಲೇಜಿನಲ್ಲಿ ಎನ್ಎಸ್ಎಸ್ ಅಧಿಕಾರಿಯಾಗಿ, ಪ್ರಸ್ತುತ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ(ksou)ದ ಕೋಆರ್ಡಿನೇಟರ್ ಆಗಿ ಮತ್ತು ಕಾಲೇಜಿನ ವಿವಿಧ ವಿಭಾಗಗಳಲ್ಲಿ ಸೇವೆಯನ್ನು ನೀಡಿರುತ್ತಾರೆ.

ರಾಧಾಕೃಷ್ಣ ಗೌಡರವರು ದಿ.ತುಕ್ರಪ್ಪ ಗೌಡ ಹಾಗೂ ಪೊಡಿಯಮ್ಮ ದಂಪತಿ ಪುತ್ರರಾಗಿದ್ದು, ಪತ್ನಿ ಪ್ರಿಯಶ್ರಿ, ಮಕ್ಕಳಾದ ಶ್ರೀಯಾ ಆರ್.ವಿ, ದಿಯಾ ಆರ್.ವಿರವರನ್ನು ಹೊಂದಿದ್ದು, ಪ್ರಸ್ತುತ ಕೆದಿಲ ಗ್ರಾಮದ ವಳಂಕುಮೇರಿ ಎಂಬಲ್ಲಿ ವಾಸಿಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.