ಅ.16- 24: ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ | 9 ದಿನಗಳ ಕಾಲ 18 ಭಜನಾ ತಂಡಗಳಿಂದ ಭಜನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ ಅ.16ರಿಂದ 24 ರತನಕ ನವರಾತ್ರಿ ಉತ್ಸವ ನಡೆಯಲಿದೆ. ನವರಾತ್ರಿ ಪ್ರಯುಕ್ತ ಅ.16 ರಿಂದ 24 ರತನಕ ಸಂಜೆ 6 ರಿಂದ 7  ರತನಕ ಭಜನಾ ಕಾರ್‍ಯಕ್ರಮ ಜರಗಲಿದೆ. 9 ದಿನಗಳ ಕಾಲ 18 ಭಜನಾ ತಂಡಗಳು ಭಜನೆ ನಡೆಸಿಕೊಡಲಿದ್ದಾರೆ.

ಭಾಗವಹಿಸುವ ಭಜನಾ ತಂಡಗಳು:
ಪೆರುವಾಜೆ ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ, ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ, ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಶಾಂತಿಮೊಗರು ಕುದ್ಮಾರು, ಶ್ರೀ ರಾಮ ಭಜನಾ ಮಂಡಳಿ ಕಲ್ಮಡ್ಕ, ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು, ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕಲ್ಲಗದ್ದೆ ಕೊಡಿಯಾಲ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಮುಗೇರು ಸವಣೂರು, ಶ್ರೀ ಆದಿಶಕ್ತಿ ಭಜನಾ ಮಂಡಳಿ ಪೆರಿಯಡ್ಕ ಸವಣೂರು, ಶ್ರೀ ಮಹಾಮಯಿ ಭಜನಾ ಮಂಡಳಿ ಮಠತ್ತಡ್ಕ ಪೆರುವಾಜೆ, ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ನಾವೂರು, ಶ್ರೀ ವಿಷ್ಣುಪ್ರಿಯ ಮಹಿಳಾ ಭಜನಾ ಮಂಡಳಿ ಸವಣೂರು, ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಅಜಪಿಲ, ಶ್ರೀ ದೇವಿ ಬಳಗ ಚೊಕ್ಕಾಡಿ, ಶ್ರೀ ಶಾರದಾಂಬ ಭಜನಾ ಮಂಡಳಿ ಕೆಳಗಿನಕೇರಿ ಕೊಪ್ಪ, ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ, ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ, ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆ ಮುಂಡುಗಾರು ಹಾಗೂ ಶ್ರೀ ಕೇಸರಿ ಭಜನಾ ಸಂಘ ಮಿತ್ತಡ್ಕ ಬೆಟ್ಟಂಪಾಡಿಯ ಭಜನಾ ತಂಡಗಳು ಭಾಗವಹಿಸಿ, ಭಜನೆಯನ್ನು ನಡೆಸಿಕೊಡಲಿದೆ. ನವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರದ ರಂಗಪೂಜೆ, ಭಕ್ತಾಧಿಗಳ ಸಾಮೂಹಿಕ ರಂಗಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅ. 25 ರಂದು ದೇವಾಲಯದಲ್ಲಿ ವಿಜಯದಶಮಿ ಪ್ರಯುಕ್ತ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಅವಕಾಶ ಇದೆ. ಶ್ರೀ ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಉತ್ಸವ ಸಂದರ್ಭದಲ್ಲಿ ಸರಕಾರದ ನಿರ್ದೇಶನದಂತೆ ಭಕ್ತಾಧಿಗಳು ಮಾಸ್ಕ್ ಧರಿಸುವುದು ಮತ್ತು ಅಂತರ ಕಾಯ್ದು ಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಶ್ರೀ ಜಲದುರ್ಗಾದೇವೀ ದೇವಸ್ಥಾನದ ಆಡಳಿತಾಧಿಕಾರಿ ಪದ್ಮನಾಭ ಕೆ. ನೆಟ್ಟಾರು, ಕೇತ್ರದ ತಂತ್ರಿ ಬ್ರಹ್ಮಶ್ರೀ ನಾಗೇಶ ತಂತ್ರಿ ಕೆಮ್ಮಿಂಜೆ, ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ ಹಾಗೂ ಅರ್ಚಕ ಶ್ರೀನಿವಾಸ ಹೆಬ್ಬಾರ್‌ರವರುಗಳು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.