HomePage_Banner
HomePage_Banner
HomePage_Banner
HomePage_Banner
HomePage_Banner

ಅ.17 ರಿಂದ 26: ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಾಲಯದಲ್ಲಿ ನವರಾತ್ರಿ ಉತ್ಸವ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇಲ್ಲಿ ಎರಡನೇ ವರ್ಷದ ನವರಾತ್ರಿ ಉತ್ಸವ ಅ.17 ರಿಂದ 26 ರವರೆಗೆ ವಿವಿಧ ಧಾರ್ಮಿಕ ವಿಧಿ ವಿದಾನಗಳೊಂದಿಗೆ  ಪ್ರಧಾನ ಅರ್ಚಕ ರಾಜೇಂದ್ರ ಭಟ್ ನೇತೃತ್ವದಲ್ಲಿ ನಡೆಯಲಿದೆ.

ಅ.17 ರಂದು ಬೆಳಿಗ್ಗೆ 8 ಕ್ಕೆ ಮಹಾಗಣಪತಿ ಹೋಮ, ಗಂಟೆ 10 ಕ್ಕೆ ವಿಶ್ವೇಶ್ವರ ಭಟ್ ಕುಕ್ಕುಪುಣಿ ದೀಪ ಬೆಳಗಿಸಿ ಉತ್ಸವಕ್ಕೆ ಚಾಲನೆ ನೀಡಲಿರುವರು.ನಂತರ ಭಜನಾ ಕಾರ್ಯಕ್ರಮ. ರಾತ್ರಿ  7 ರಿಂದ ಮಹಾಪೂಜೆ  ಶ್ರೀ ದೇವರಿಗೆ ವಿಶೇಷ ರಂಗಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ. ಅ.18: ಬೆಳಿಗ್ಗೆ ನಿತ್ಯಪೂಜೆ ನಂತರ ಭಜನಾ ಕಾರ್ಯಕ್ರಮ ರಾತ್ರಿ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ. ಅ.19: ಬೆಳಿಗ್ಗೆ ನಿತ್ಯಪೂಜೆ ನಂತರ ಭಜನಾ ಕಾರ್ಯಕ್ರಮ. ರಾತ್ರಿ 7 ರಿಂದ ವಿಶೇಷ ಅಲಂಕಾರ ಪೂಜೆ, ಪ್ರಸಾದ ವಿತರಣೆ. ಅ.20: ಬೆಳಿಗ್ಗೆ ನಿತ್ಯಪೂಜೆ, ನಂತರ ಭಜನಾ ಕಾರ್ಯಕ್ರಮ. ಸಂಜೆ 6.30 ರಿಂದ ಭಜನಾ ಕಾರ್ಯಕ್ರಮ. ರಾತ್ರಿ 7 ರಿಂದ ವಿಶೇಷ ಅಲಂಕಾರ ಪೂಜೆ, ಪ್ರಸಾದ ವಿತರಣೆ. ಅ.21: ಬೆಳಿಗ್ಗೆ ನಿತ್ಯಪೂಜೆ, ಗಂಟೆ 9 ರಿಂದ ಸಾಮೂಹಿಕ ಚಂಡಿಕಾ ಹೋಮ ಮಧ್ಯಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ. ರಾತ್ರಿ 7 ರಿಂದ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ. ಅ.22: ನಿತ್ಯ ಪೂಜೆ, ಭಜನಾ ಕಾರ್ಯಕ್ರಮ. ರಾತ್ರಿ 7 ರಿಂದ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ. ಅ.23: ಬೆಳಿಗ್ಗೆ ನಿತ್ಯಪೂಜೆ ನಂತರ ಭಜನಾ ಕಾರ್ಯಕ್ರಮ. ಸಂಜೆ 6 ರಿಂದ ಕುಣಿತ ಭಜನಾ ಕಾರ್ಯಕ್ರಮ. ರಾತ್ರಿ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ

 ಅ.24: ಬೆಳಿಗ್ಗೆ ನಿತ್ಯಪೂಜೆ, ನಂತರ ಭಜನಾ ಕಾರ್ಯಕ್ರಮ ರಾತ್ರಿ 7 ರಿಂದ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ.
ಅ.25: ಬೆಳಿಗ್ಗೆ ನಿತ್ಯಪೂಜೆ, ಗಂಟೆ 9 ರಿಂದ ವಿಶೇಷ ಆಯುಧ ಪೂಜೆ ಆರಂಭ.ಗಂಟೆ 10 ರಿಂದ ಭಜನಾ ಕಾರ್ಯಕ್ರಮ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ರಾತ್ರಿ ಮಹಾನವಮಿ  ಪ್ರಯುಕ್ತ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ.
ಅ.26: ಬೆಳಿಗ್ಗೆ ನಿತ್ಯಪೂಜೆ, ಕದಿರು ತುಂಬಿಸುವುದು, ಅಕ್ಷರಾಭ್ಯಾಸ ಮಧ್ಯಾಹ್ನ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಕೊವಿಡ್-19 ನಿಯಮಗಳನ್ನು ಪಾಲಿಸುವುದು ಮಾಸ್ಕ್ ಕಡ್ಡಾಯ. ಸಾಮಾಜಿಕ ಅಂತರ ಕಡ್ಡಾಯ ಎಂದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ನವರಾತ್ರಿ ಉತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.