ವೀರಮಂಗಲದಲ್ಲಿ ಎಸ್ಕೆಎಸ್ಸೆಸ್ಸೆಫ್ ಸವಣೂರು ಕ್ಲಸ್ಟರ್ ವಿಖಾಯ ಡೇ ಆಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್‌ಕೆಎಸ್‌ಎಸ್‌ಎಫ್ ಸವಣೂರು ಕ್ಲಸ್ಟರ್ ವಿಖಾಯ ಸಮಿತಿ ಹಾಗೂ ಕ್ಯಾಂಪಸ್ ವಿಂಗ್ ಇದರ ವತಿಯಿಂದ ಲೀಡರ್ಸ್ ಲ್ಯಾಡರ್ ನಾಮದೊಂದಿಗೆ ಕಾರ್ಯಕರ್ತರ ಸಂಗಮ ಹಾಗೂ ಸನ್ಮಾನ ಕಾರ್ಯಕ್ರಮ ಎರಡು ಸೆಷನ್‌ಗಳಾಗಿ ನಡೆಯಿತು. ಪ್ರಥಮ ಸೆಷನ್ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಅಝ್ಹರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಳೀಯ ಖತೀಬ್ ಉಮರ್ ದಾರಿಮಿ ಸಭೆ ಉದ್ಘಾಟಿಸಿದರು. ಕೋವಿಡ್ 19ಧಫನ ಕಾರ್ಯದಲ್ಲಿ ನಿಸ್ವಾರ್ಥ ಸೇವೆಗೈದವರನ್ನು ಸನ್ಮಾನಿಸಲಾಯಿತು. ನಂತರ ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಸಮಿತಿ ಸದಸ್ಯರಾದ ಇಕ್ಬಾಲ್ ಬಾಳಿಲ ವಿಷಯ ಮಂಡಿಸಿದರು. ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ರಹ್ಮಾನಿ ಸ್ವಾಗತಿಸಿದರು. ಅಜ್ಜಿಕಟ್ಟೆ ಖತೀಬ್ ಎ ಎಂ ರಶೀದ್ ದಾರಿಮಿ ವಂದಿಸಿದರು.

ಎರಡನೇ ಸೆಷನ್:
ನಂತರ ಕ್ಯಾಂಪಸ್ ವಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸೆಲ್ಯೂಟ್ ಎಂಬ ಹೆಸರಿನ ಎರಡನೇ ಸೆಷನ್‌ನಲ್ಲಿ ಇಕ್ಬಾಲ್ ಬಾಳಿಲ ಮಾತನಾಡಿ ಮಕ್ಕಳಲ್ಲಿ ಧಾರ್ಮಿಕ ಚೈತನ್ಯ ನೆಲೆ ನಿಲ್ಲಲು ಬೇಕಾದ ಮಾರ್ಗರೇಖೆಗಳ ಬಗ್ಗೆ ವಿವರಿಸಿದರು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ರಿಯಾಝ್ ಫೈಝಿ ಪಟ್ಟೆಸ್ವಾಗತಿಸಿ ವಂದಿಸಿದರು. ಸ್ಥಳೀಯ ಅಧ್ಯಾಪಕರಾದ ಅಬ್ದುಲ್ ರಹಿಮಾನ್ ಮೌಲವಿ, ಕ್ಲಸ್ಟರ್ ಕೋಶಾಧಿಕಾರಿ ಶಮೀರ್ ವೀರಮಂಗಲ, ವೀರಮಂಗಲ ಮಸೀದಿ ಅಧ್ಯಕ್ಷ ಖಾಸಿಂ ಹಾಜಿ, ಎಸ್ಕೆಎಸ್ಸೆಸ್ಸೆಫ್ ಪುತ್ತೂರು ವಲಯ ಕೋಶಾಧಿಕಾರಿ ಅಶ್ರಫ್ ಮುಕ್ವೆ, ವಿಖಾಯ ಸಮಿತಿ ಜಿಲ್ಲಾ ಕನ್ವೀನರ್ ಆಸಿಫ್ ಕಬಕ, ಸವಣೂರು ಕ್ಲಸ್ಟರ್ ವಿಖಾಯ ಕಾರ್ಯದರ್ಶಿ ಜಮಾಲ್ ಸವಣೂರು, ಕನ್ವೀನರ್ ಅಶ್ರಫ್ ವೀರಮಂಗಲ, ಸವಣೂರು ಶಾಖಾ ವಿಖಾಯ ಉಸ್ತುವಾರಿ ನಝೀರ್ ಮುಂಡತ್ತಡ್ಕ, ವಲಯ ಸಮಿತಿ ವಿಖಾಯ ಚೇರ್‌ಮೆನ್ ಮನ್ಸೂರ್ ಮೌಲವಿ, ಕನ್ವೀನರ್ ಇಬ್ರಾಹಿಂ ಕಡವ, ವೀರಮಂಗಲ ಮಸೀದಿ ಕಾರ್ಯದರ್ಶಿ ರಝಾಕ್ ವಿ ಎಂ, ಕೋಶಾಧಿಕಾರಿ ರಫೀಕ್ ಆನಾಜೆ, ಪರಣೆ ಶಾಖೆ ಅಧ್ಯಕ್ಷ ಅಬಾಬೀಲ್, ವೀರಮಂಗಲ ಶಾಖಾ ಪ್ರ.ಕಾರ್ಯದರ್ಶಿ ಫಾರೂಕ್ ವಿ ಎಂ, ವಿಖಾಯ ಕಾರ್ಯದರ್ಶಿ ಉನೈಸ್, ಟ್ರೆಂಡ್ ವಲಯ ಸಮಿತಿ ಕಾರ್ಯದರ್ಶಿ ಯೂಸುಫ್ ಮುಂಡೋಳೆ, ಪುತ್ತೂರು ವಲಯ ಕ್ಯಾಂಪಸ್‌ವಿಂಗ್ ಕನ್ವೀನರ್ ಝಹಝ್ ಸವಣೂರು, ಸವಣೂರು ಕ್ಲಸ್ಟರ್ ಕ್ಯಾಂಪಸ್ ವಿಂಗ್ ಚೇರ್‌ಮೆನ್ ರಿಯಾಝ್ ಕಣಿಮಜಲು, ನರಿಮೊಗರು ಪ್ರಾ.ಕೃ.ಪ ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ಉಪಸ್ಥಿತರಿದ್ದರು. ರಿಯಾಝ್ ಫೈಝಿ ಪಟ್ಟೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.