HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ವಿಶೇಷ ಪ್ರಕರಣಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು- ಬೊಳುವಾರು ಅಗ್ನಿ ಅವಘಡ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಅ.15ರ ನಸುಕಿನ ಜಾವ ಬೊಳುವಾರಿನಲ್ಲಿರುವ ಹ್ಯಾರಿಂಗ್ ಸ್ಟುಡಿಯೊ ಸೆಲೂನ್, ಡಿ.ಕೆ.ಮೊಬೈಲ್ ಮತ್ತು ತರಕಾರಿ ಅಂಗಡಿಗಳಿಗೆ, ಎರಡು ಹೊಟೇಲ್‌ಗಳಿಗೆ ಬೆಂಕಿ ಹತ್ತಿಕೊಂಡಿರುವ ಘಟನಾ ಸ್ಥಳಕ್ಕೆ ಅ.16ರಂದು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.


ವಿಶೇಷ ಪ್ರಕರಣಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು:
ಅಗ್ನಿ ಅವಘಡ ಉಂಟಾದ ಸ್ಥಳದಲ್ಲಿ ನಷ್ಟಗೊಂಡಿರುವ ಅಂಗಡಿ ಮಾಲಕರೊಂದಿಗೆ ಮತ್ತು ಸವಿತಾ ಸಮಾಜದ ಪದಾಧಿಕಾರಿಗಳೊಂದಿಗೆ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸರಕಾರದಿಂದ ವಿಶೇಷ ಪ್ರಕರಣವೆಂದು ಪರಿಹಾರ ಕೊಡಲು ಅವಕಾಶವಿದ್ದರೆ ಸಂಬಂಧಪಟ್ಟ ತಹಶೀಲ್ದಾರ್ ಮತ್ತು ಸಹಾಯಕ ಕಮೀಷನರ್ ಮೂಲಕ ವರದಿ ಮಾಡಿ ಸರಕಾರಕ್ಕೆ ಸಲ್ಲಿಸಿ ಸಂಬಂಧಪಟ್ಟ ಕಂದಾಯ ಸಚಿವರಲ್ಲಿ ಮಾತನಾಡಿ ಪ್ರಯತ್ನ ಮಾಡುವ ಸಂಗತಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಪೌರಾಯುಕ್ತೆ ರೂಪಾ ಶೆಟಿ, ಸಹಾಯಕ ಕಾರ್ಯಪಾಲ ಅಭಿಯಂತರ ಅರುಣ್, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ, ಸುರೇಶ್ ಆಳ್ವ, ಸವಿತಾ ಸಮಾಜದ ಪದಾಧಿಕಾರಿಗಳು, ಅಂಗಡಿ ಮತ್ತು ಹೊಟೇಲ್‌ಗಳ ಮಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.