HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಹಿರಿಯ E&T ತಜ್ಞರಾದ ಡಾ. ಅಶೋಕ್ ಪಾದಕಣ್ಣಾಯ ಉಷಾ ಪಾಲಿ ಕ್ಲಿನಿಕ್ ನಲ್ಲಿ ಸೇವೆಗೆ ಲಭ್ಯ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: MBBS, DLO, MRCS(ENT)DOHNS, F-EORL ಪದವೀಧರರಾಗಿರುವ ಇವರು ಕಿವಿ ಮೂಗು ಹಾಗೂ ಗಂಟಲು ತಜ್ಞರು ತಲೆ ಹಾಗೂ ಕುತ್ತಿಗೆ ಶಸ್ತ್ರಚಿಕಿತ್ಸಾ ತಜ್ಞರು . ಇವರು ಅಲರ್ಜಿ, ಪದೇ ಪದೇ ಕಾಡುವ ತಲೆನೋವು, ಸೀನು, ಮೈಗ್ರೇನ್, ನಿದ್ರಾಹೀನತೆ, ಗೊರಕೆ,ಕಿವಿ ಸೋರುವ, ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡುತ್ತಾರೆ ಹಾಗೂ ಎಂಡೋಸ್ಕೋಪಿ ಹಾಗೂ ಕಿವಿ ಶಸ್ತ್ರಚಿಕಿತ್ಸಾ ತಜ್ಞರು ಆಗಿರುತ್ತಾರೆ

ಇವರು ಕಾಸರಗೋಡಿನ ಕುಂಜಾತುರ್ ಸರಕಾರಿ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶ್ರೀಯುತ ರಾಮಚಂದ್ರ ಪದಕಣ್ಣಾಯ ಅವರ ಸುಪುತ್ರರಾಗಿರುತ್ತಾರೆ.

ಇವರು ತಮ್ಮ ಪ್ರೌಢ ಶಿಕ್ಷಣ ಹಾಗೂ ಪಿಯುಸಿಯನ್ನು ಮಂಗಳೂರಿನ ಕೆನರಾ ಹೈಸ್ಕೂಲ್ ಹಾಗೂ ಕಾಲೇಜಿನಲ್ಲಿ ಪೂರೈಸಿ ಬಳಿಕ MBBS ಪದವಿಯನ್ನು ಮೈಸೂರು ಮೆಡಿಕಲ್ ಕಾಲೇಜಿನಲ್ಲೂ, DLO ಅನ್ನು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ, MRCS ಅನ್ನು ಐರ್ಲ್ಯಾಂಡ್ ನ ರಾಯಲ್ ಕಾಲೇಜಿನಲ್ಲಿ, MRCS ENT ಹಾಗೂ DOHNS ಅನ್ನು UK ಯ ಗ್ಲಾಸ್ಕೋ ದಲ್ಲಿರುವ ಪ್ರತಿಷ್ಠಿತ ರಾಯಲ್ ಕಾಲೇಜಿನಲ್ಲಿ, F-EORL ಪದವಿಯನ್ನು UK ಯ ಯುರೋಪಿಯನ್ ಬೋರ್ಡ ಆಫ್ ವೋಟರ್ಇನ್ಗೊಲಾಜಿ ಯಲ್ಲಿ ಪೂರೈಸಿದ್ದಾರೆ.

ಬಳಿಕ 13 ವರ್ಷಗಳ ಕಾಲ ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯಲ್ಲಿ ENT ಸ್ಪೆಷಲಿಸ್ಟ್ ಆಗಿ ಸೇವೆಯನ್ನು ನೀಡಿರುತ್ತಾರೆ. ಮೂರು ವರ್ಷಗಳ ಕಾಲ ಬಳ್ಳಾರಿಯಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ.

ಪ್ರಸ್ತುತ ಇವರು ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹಾಗೂ ಮಂಗಳೂರಿನಲ್ಲಿ ಡಾಕ್ಟರ್ಸ್ ಲಾಂಜ್ ಎಂಬ ಸ್ವಂತ ಪಾಲಿಕ್ಲಿನಿಕ್ ಅನ್ನು ನಡೆಸುತ್ತಿದ್ದು, ಇದೀಗ ದರ್ಬೆಯ ಪಾಲಿಕ್ಲಿನಿಕ್ ಉಷಾ ಪಾಲಿಕ್ಲಿನಿಕ್ ಇಲ್ಲಿ ಪ್ರತಿ ಮಂಗಳವಾರ ಸಂಜೆ 5 ರಿಂದ 7 ರ ತನಕ ಸೇವೆಗೆ ಲಭ್ಯರಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.