HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಶ್ರೀ ರಾಮಕೃಷ್ಣ ಪ್ರೌಢಶಾಲೆ ಮರೆಯಲಾಗದ ಅನರ್ಘ್ಯ ಕಲಾರತ್ನ- ಶ್ರೀ ಮೋಹನ ಸೋನ

Puttur_Advt_NewsUnder_1
Puttur_Advt_NewsUnder_1

ಸುಮಾರು 30 ವರ್ಷಗಳ ಹಿಂದಿನ ದಿನಗಳು, ಸಂಸ್ಥೆಯ ಹೆಣ್ಮಕ್ಕಳಲ್ಲಿ ನಾಟಕದ ಕುರಿತಾದ ಒಲವು,ಅತೀವ ಆಸಕ್ತಿ,ಪ್ರೀತಿಗಳುಅರಳುವ, ಅವುಗಳಿಗೆ ಒಂದು ಅಮೂರ್ತ ರೂಪ ಕೊಡುವ ನಿಟ್ಟಿನಲ್ಲಿ ಸಂಸ್ಥೆಗೆ ಪ್ರವೇಶವಾಯಿತು ಒಂದು ಅದ್ಭುತ ಕಲಾ ಶಕ್ತಿ. ಅಂದಿನ ಮುಖ್ಯಗುರುಗಳ ಪ್ರೀತಿಯ ಆಮಂತ್ರಣಕ್ಕೆ ಓಗೊಟ್ಟು ಆಗಮಿಸಿದ ಶ್ರೀ ಸೋನರನ್ನು ಇತ್ತೀಚಿನವರೆಗೂ ಸಂಸ್ಥೆಯ ಜೊತೆಗೆ ಇರುವ ಬಾಂಧವ್ಯದ ಬೆಸುಗೆಯನ್ನು ಗಟ್ಟಿಯಾಗುವಂತೆ ಮಾಡಿತ್ತು.

ಸೋನರ ವ್ಯಕ್ತಿತ್ವವೇ ಅಂತಹುದು. ನಿರಾಡಂಬರ, ನಿರಹಂಕಾರಿ, ನಿಗರ್ವಿ, ನಿಷ್ಕಪಟ , ಸರಳ ಸಜ್ಜನ-ಸದ್ಗುಣಗಳ ಆಗರ. ಇವೆಲ್ಲವೂ ಅರಿವಿಗೆ ಬರುವುದು ಅವರೊಂದಿಗಿನ ಒಡನಾಟದ ಕ್ಷಣಗಳಲ್ಲಿ.ಕಲಾಪ್ರಪಂಚದ ಅನುಭಾವಿಯಾದ ಸೋನರವರು ಮಕ್ಕಳ ರಂಗಭೂಮಿಯಲ್ಲಿ ನಾಟಕಗಳಿಗಾಗಿ ತಮ್ಮನ್ನೇ ಸಮರ್ಪಿಸಿಕೊಂಡವರು. ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ “ಕೆರೆಗೆ ಹಾರ” ನಾಟಕಕ್ಕೆ ಪ್ರಥಮ ಬಹುಮಾನ, ದೊಡ್ಡಬಳ್ಳಾಪುರದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ “ಮಳೆಹಕ್ಕಿ” ನಾಟಕಕ್ಕೆ ಪ್ರಥಮ ಸ್ಥಾನ. ಶ್ರೀ ಮೋಹನ ಸೋನರವರ ನಾಟಕಗಳು ಪರಿಪೂರ್ಣತೆಯನ್ನು ಸಾಧಿಸುತ್ತವೆ ಎಂಬುದಕ್ಕೆ ಜ್ವಲಂತ ಸಾಕ್ಷಿ.

ಸಂಸ್ಥೆಯ ಮಕ್ಕಳು ಪಾಲ್ಗೊಂಡ ಸುಮಾರು 40 ನಾಟಕಗಳು ವಿವಿಧ ವೇದಿಕೆಯಲ್ಲಿ ಪ್ರದರ್ಶಿಸಲ್ಪಟ್ಟಿವೆ. ಹಸಿರು ಮನೆ ಪರಿಣಾಮ, ಜಡೆ ಹೆಣೆದಳು ಪಾಂಚಾಲಿ,ನಾಯ ನಡತೆ,ಮಧ್ಯಮ ಪಾಂಡವ,ಐನ್ ಸ್ಟೈನ್ , ಮಾಯಾ ಕುದುರೆ, ಬಿದಿರ ಬೆಟ್ಟ,ಹಕ್ಕಿ -ಬೆಕ್ಕು, ಮಾರಿಭೂತ -ಕೊಳ್ಳಿ ದೆವ್ವ, ಬುಲ್ ಬುಲ್ ಹಕ್ಕಿ, ಉಡುಗೊರೆ, ಬಿಳಿ ಕರಿಯ ಕೂಗು…….. ಹೀಗೆ ಹಲವಾರು ನಾಟಕಗಳು ಜಿಲ್ಲಾಮಟ್ಟದಲ್ಲಿ ನಾಡಿನ ವಿವಿಧ ರಂಗ ವೇದಿಕೆಗಳಲ್ಲಿ ಪ್ರದರ್ಶಿಸಲ್ಪಟ್ಟು ಜನರ ಪ್ರೀತಿಯನ್ನು ಗಳಿಸಿತು. ನಿರ್ದೇಶಕರು ಯಾರೇ ಇರಲಿ ;ನಾಟಕ ಯಾವುದೇ ಇರಲಿ ;ಆ ನಾಟಕಕ್ಕೆ ಫೈನಲ್ ಟಚ್ ( ಅಂತಿಮ ಸ್ಪರ್ಶ)
ಶ್ರೀ ಸೋನರವರಿಂದ ಆಗಲೇಬೇಕು. ಇಲ್ಲವಾದಲ್ಲಿ ಅದೇನೋ ಕೊರಗು; ಅದ್ಯಾವೊದೋ ರೀತಿಯ ನೋವು. ಆ ಮಹಾನ್ ಕಲಾವಿದರ ಮನಸ್ಸಿನಲ್ಲಿ ಸೃಷ್ಟಿಗೊಂಡು ವಿವಿಧ ದೃಷ್ಟಿಕೋನಗಳಿಂದ ಮೂಡಿಬರುವ ಅದ್ಭುತ ಆಯಾಮಗಳು ;ಅವುಗಳನ್ನು ಮಕ್ಕಳಿಂದಲೇ ಹೊರಹೊಮ್ಮುವಂತೆ ಮಾಡುವಲ್ಲಿ ತನ್ಮಯತೆ, ತಮ್ಮ ಮನದಲ್ಲಿ ಆ ಪಾತ್ರ ಯಾವ ರೀತಿ ಬಿಂಬಿಸಲ್ಪಟ್ಟಿದೆ; ಅದಕ್ಕನುಗುಣವಾಗಿ ಮಕ್ಕಳು ಭಾವನೆಗಳನ್ನು ವ್ಯಕ್ತಪಡಿಸಿ ಪಾತ್ರಕ್ಕೆ ಜೀವ ತುಂಬಿದಾಗ ಅವರಿಗಾಗುತಿದ್ದ ಸಂತೋಷ,ತೃಪ್ತಿ (ಓಡಿಹೋಗಿ ಆ ಮಗುವನ್ನು ತಬ್ಬಿಕೊಳ್ಳುತ್ತಿದ್ದ ರೀತಿ ) ಬಹುಶ: ಸೋನರಿಂದ ಮಾತ್ರ ಸಾಧ್ಯ.
ವ್ಯಂಗ್ಯವಿಲ್ಲದ , ಅಪಹಾಸ್ಯವಿಲ್ಲದ, ಪರಿಶುದ್ಧ ಪ್ರೀತಿಯನ್ನು ಸೂಸುವ ಮಾತುಗಳು ನಿರ್ಮಲ ಹೃದಯದಿಂದ ಹೊರಹೊಮ್ಮುವ ಭಾವನೆಗಳನ್ನು ವ್ಯಕ್ತಪಡಿಸುವ ಆ ಕಾಂತಿಪೂರ್ಣ ಕಣ್ಣುಗಳು,ಹಿತಮಿತವಾದ ನಲ್ನುಡಿಗಳು ಎಂದೆಂದಿಗೂ ಅಮರ.

ಬರಹ: ಅಕ್ಷತಾ ಜೈನ್
ಶಿಕ್ಷಕಿ
ರಾಮಕೃಷ್ಣ ಹೈಸ್ಕೂಲ್ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.