HomePage_Banner
HomePage_Banner
HomePage_Banner
HomePage_Banner
HomePage_Banner

ವಿದ್ಯುತ್ ತಂತಿ, ಕಂಬಗಳ ಮೇಲೆ ಬೀಳುವ ಸಾಧ್ಯತೆಗಳಿರುವ ಮರಗಳ ಗೆಲ್ಲು ತೆರವು | ಕೊಂಬೆಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಇಲಾಖಾಧಿಕಾರಿಗಳಿಗೆ ಸೂಚನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊಂಬೆಟ್ಟು ತಾಲೂಕು ಕ್ರೀಡಾಂಗಣಕ್ಕೆ ಹೋಗುವ ಬಳಿ ರಸ್ತೆಗಳ ಪಕ್ಕದಲ್ಲಿರುವ ಅಪಾಯಕಾರಿ ಮರಗಳು ವಿದ್ಯುತ್ ತಂತಿ, ಕಂಬಗಳ ಮೇಲೆ ಜೋತು ಬೀಳುತ್ತಿದ್ದು, ತಕ್ಷಣ ಅಪಾಯ ಸಂಭವಿಸುವ ಮುನ್ನ ಅದನ್ನು ತೆರವು ಗೊಳಿಸುವ ಕೆಲಸ ಮಾಡಬೇಕೆಂದು ಶಾಸಕ ಸಂಜೀವ ಮಠಂದೂರು ಅವರು ಮೆಸ್ಕಾಂ ಮತ್ತು ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಕೊಂಬೆಟ್ಟು ನಿವಾಸಿಗಳ ಮತ್ತು ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ಅವರು ನೀಡಿದ ಮಾಹಿತಿಯಂತೆ ಅ.16ರಂದು ಅವರು ಕೊಂಬೆಟ್ಟು ರಸ್ತೆಯಲ್ಲಿ ಅಪಾಯಕಾರಿ ಮರಗಳಿರುವ ಸ್ಥಳದಲ್ಲಿ ಪರಿಶೀಲಿಸಿ ಸ್ಥಳಕ್ಕೆ ಇಲಾಖಾಧಿಕಾರಿಗಳನ್ನು ಕರೆಸಿ ಮರಗಳ ಗೆಲ್ಲುಗಳ್ನು ತೆರವು ಗೊಳಿಸುವಂತೆ ಸೂಚನೆ ನೀಡಿದರು. ಕೊಂಬೆಟ್ಟು ರಸ್ತೆಯಲ್ಲಿ ವಿದ್ಯುತ್ ತಂತಿಗಳಿಗೆ ರೆಂಬೆಗಳು ಸವರುವ ಕಾರಣ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು ಇತರ ಕಡೆಗಳಲ್ಲೂ ಇದೇ ರೀತಿಯ ದೂರುಗಳಿವೆ. ಈ ಕುರಿತು ಅಧಿಕಾರಿಗಳು ಪರಿಶೀಲಿಸಬೇಕೆಂದು ಹೇಳಿದರು. ಬಕೆಟ್ ಕ್ರೈನ್ ಮೂಲಕ ಕೊಂಬೆಟ್ಟು ರಸ್ತೆಯಲ್ಲಿರುವ ಮರದ ರೆಂಬೆಗಳನ್ನು ತೆರವುಗೊಳಿಸುವಂತೆ ಶಾಸಕರು ಸ್ಥಳದಲ್ಲಿಯೇ ಸೂಚನೆ ನೀಡಿ ಮರ ತೆರವು ಕಾರ್ಯವಿದ್ದರೆ ಅರಣ್ಯ ಇಲಾಖೆಯವರು ಅದನ್ನು ನಿರ್ವಹಿಸಬೇಕು. ರಸ್ತೆಯನ್ನು ಕಾಮಗಾರಿ ಅವಧಿಯಲ್ಲಿ ಬ್ಲಾಕ್ ಮಾಡಿ ಏಕ ಕಾಲದಲ್ಲಿ ಅರಣ್ಯ ಇಲಾಖೆ ಮತ್ತು ಮೆಸ್ಕಾಂನವರು ಕಾರ್ಯನಿರ್ವಹಿಸಬೇಕು. ಇತರ ಕಡೆಗಳಲ್ಲೂ ಇದೇ ರೀತಿ ಕಾಮಗಾರಿ ನಡೆಸಬೇಕು. ರಸ್ತೆ ಬ್ಲಾಕ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಇನ್ಸ್‌ಪೆಕ್ಟರ್ ಅವರ ಸಹಕಾರ ಪಡೆಯುವಂತೆ ಹೇಳಿದರು. ಮೆಸ್ಕಾಂ ನಗರ ಪ್ರದೇಶದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿಲ್ಪಾ ಶೆಟ್ಟಿ, ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಆಚಾಂii ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶಾಸಕರ ಸೂಚನೆಗೆ ಸಂಬಂಧಿಸಿ ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ನಗರಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್. ಶೆಟ್ಟಿ, ಬಿಜೆಪಿ ರೈತ ಮೋರ್ಚಾದ ಸುರೇಶ್ ಆಳ್ವ, ಶಾಸಕರ ಆಪ್ತ ಸಹಾಯಕರಾದ ವಸಂತ ವೀರಮಂಗಲ, ಜೀವನ್ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.