HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅ.17ರಿಂದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.17ರಿಂದ ಅ.25ರ ವಿಜಯ ದಶಮಿಯವರೆಗೆ ನವರಾತ್ರಿ ಉತ್ಸವ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಪ್ರತೀ ದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆಯೊಂದಿಗೆ ನವರಾತ್ರಿ ಉತ್ಸವ ಜರಗಲಿದೆ.

ಅ.17ರಂದು ಸಂಜೆ ಭಜನಾ ಸೇವೆ, ರಾತ್ರಿ ಶ್ರೀ ದೇವಿಗೆ ರಂಗಪೂಜೆ, ಅ.18ರಂದು ಸಂಜೆ ಭಜನಾ ಸೇವೆ, ರಾತ್ರಿ ನವರಾತ್ರಿ ಪೂಜೆ, ಅ.19ರಂದು ಸಂಜೆ ಭಜನಾ ಸೇವೆ, ರಾತ್ರಿ ಶ್ರೀ ದೇವಿಯ ಅಲಂಕಾರ ಪೂಜೆ, ಅ.29ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಭಜನಾ ಸೇವೆ, ಸಂಜೆ ಭಜನಾ ಸೇವೆ, ರಾತ್ರಿ ಶ್ರೀ ದೇವಿಗೆ ವಿಶೇಷ ಹೂವಿನ ಪೂಜೆ, ಅ.21ರಂದು ಸಂಜೆ ಭಜನಾ ಸೇವೆ, ರಾತ್ರಿ ಶ್ರೀ ದೇವಿಗೆ ರಂಗಪೂಜೆ, ಅ.22ರಂದು ಸಂಜೆ ಭಜನಾ ಸೇವೆ, ರಾತ್ರಿ ಶ್ರೀ ದೇವಿಗೆ ಅಲಂಕಾರ ಪೂಜೆ, ಅ.23ರಂದು ಸಂಜೆ ಭಜನಾ ಸೇವೆ, ರಾತ್ರಿ ಶ್ರೀ ದೇವಿಗೆ ವಿಶೇಷ ರಂಗಪೂಜೆ-ದೀಪೋತ್ಸವ, ಅ.24ರಂದು ಸಂಜೆ ಭಜನಾ ಸೇವೆ, ರಾತ್ರಿ ಶ್ರೀ ದೇವಿಗೆ ವಿಶೇಷ ಪೂಜೆ, ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ‘ಶಾಂಭವೀ ವಿಜಯ’ ಯಕ್ಷಗಾನ, ಅ.25ರಂದು ಬೆಳಿಗ್ಗೆ ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಕ್ಷೀರಾಭಿಷೇಕ, ಲಲಿತಾ ಸಹಸ್ರನಾಮ ಪಾರಾಯಣ, ಶ್ರೀ ದೇವಿಗೆ ಮಹಾ ಅಲಂಕಾರ, ತ್ರಿಮಧುರ ನೈವೇದ್ಯ,ಕ್ಷೀರ ಪಾಯಸ ಸೇವೆ, ಅಕ್ಷರಾಭ್ಯಾಸ, ತುಲಾಭಾರ ಸೇವೆ, ಆಯುಧ ಪೂಜೆ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಮಧ್ಯಾಹ್ನ ಹೊಸ ಅಕ್ಕಿ ಊಟ ‘ಸಾಮೂಹಿಕ ಪುದ್ವಾರ್’, ಸಂಜೆ ಭಜನಾ ಸೇವೆ, ಶ್ರೀ ದುರ್ಗಾಪೂಜೆ, ರಾತ್ರಿ ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ ಎಂದು ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ, ಆಡಳಿತಾಧಿಕಾರಿ ಚಂದ್ರ ನಾಯಕ್, ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಮತ್ತು ನವರಾತ್ರಿ ಉತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.