HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬೆಂಕಿಗೆ ಆಹುತಿಯಾದ ಬೊಳ್ವಾರು ಹೇರ್ ಸ್ಟುಡಿಯೋ ಮೆನ್ಸ್ ಪಾರ್ಲರ್ ಮಾಲಕರಿಗೆ ಪರಿಹಾರ ನೀಡುವಂತೆ ಶಾಸಕರಿಗೆ, ನಗರಸಭೆ ಪೌರಾಯುಕ್ತರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು : ಇತ್ತೀಚೆಗೆ ಬೆಂಕಿಗೆ ಆಹುತಿಯಾದ ಬೊಳ್ವಾರು ಹೇರ್ ಸ್ಟುಡಿಯೋ ಮೆನ್ಸ್ ಪಾರ್ಲರ್ ಮಾಲಕರಿಗೆ ಸರಕಾರದಿಂದ ಪರಿಹಾರ ಧನ ಒದಗಿಸಿಕೊಡಬೇಕೆಂದು ಪುತ್ತೂರು ತಾಲೂಕು ಸವಿತಾ ಸಮಾಜದ ವತಿಯಿಂದ ಶಾಸಕ ಸಂಜೀವ ಮಠಂದೂರು ಮತ್ತು ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಬೊಳುವಾರಿನ ಕಿರಣ್ ಶೆಟ್ಟಿ ಮಾಲಕತ್ವದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೇರ್ ಸ್ಟುಡಿಯೋ ಮೆನ್ಸ್ ಪಾರ್ಲರ್ ಆಕಸ್ಮಿಕ ಬೆಂಕಿ ಅವಘಡಕ್ಕೆ ತುತ್ತಾಗಿ ಅಪಾರ ನಷ್ಟವುಂಟಾಗಿರುತ್ತದೆ. ಆದುದರಿಂದ ತಾವು ಸರಕಾರದಿಂದ ಪರಿಹಾರ ಒದಗಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ನಗರಸಭೆಗೆ ಮನವಿ : ಸವಿತಾ ಸಮಾಜದ ವತಿಯಿಂದ ಪುತ್ತೂರು ನಗರಸಭಾ ಪೌರಾಯುಕ್ತರಿಗೂ ಮನವಿ ಸಲ್ಲಿಸಿ ನಗರಸಭೆಯಿಂದ ಪರಿಹಾರ ದೊರಕಿಸುವಂತೆ ತಿಳಿಸಲಾಗಿದೆ. ಮನವಿ ನೀಡುವ ಸಂದರ್ಭದಲ್ಲಿ ಸವಿತಾ ಸಮಾಜದ ಅಧ್ಯಕ್ಷ ಜಿ.ಬಿ.ವೆಂಕಟೇಶ್ ಭಂಡಾರಿ, ಖಜಾಂಜಿ ಪ್ರವೀಣ್ ಸಂಪ್ಯ, ಕಾರ್ಯದರ್ಶಿ ರಾಜೇಶ್ ಎಪಿಎಂಸಿ, ಜಿಲ್ಲಾ ಪ್ರತಿನಿಧಿ ರಮೇಶ್ ಮುರ, ಪ್ರದೀಪ್ ನಗರ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. ಸುದರ್ಶನ್

    ದುರಸ್ತಿ,ನಿರ್ವಹಣೆ ಇಲ್ಲದ ಹಳೇ ಕಟ್ಟಡ ಮತ್ತು ರಸ್ತೆ ಮಾರ್ಜಿನ್ ನಲ್ಲಿರುವ ಕಟ್ಟಡಗಳಲ್ಲಿ ಮತ್ತೆ ಮತ್ತೆ ವ್ಯಾಪಾರ ಪರವಾಣಿಗೆ ನೀಡುತ್ತಿರುವುದೇ ಇಂತಹ ದುರಂತಗಳಿಗೆ ಕಾರಣ. ಹೀಗಿರುವಾಗ ಸರಕಾರ ಹೇಗೆ ಪರಿಹಾರ ನೀಡುತ್ತದೆ.ನಗರಸಬೆ ಯಾಕೆ ಅನುಮತಿ ನೀಡುತ್ತಿದೆ. ಶಾಸಕರು ಯಾಕೆ ಬೆಂಬಕದ ಭರವಸೆ ನೀಡುತ್ತಿದ್ದಾರೆ. ಆ ಅಂಗಡಿ ಲೈನ್ ರಸ್ತೆ ಅಗಲೀಕರಣಕ್ಕೆ ನಗರಸಭೆ ಮುಟ್ಟುಗೋಳು ಹಾಕತಕ್ಕದ್ದು. ಮತ್ತೆ ಮತ್ತೆ ವ್ಯಾಪಾರಕ್ಕೆ ಅನುಮತಿ,ಪ್ರೊತ್ಸಾಹ ನೀಡಬಾರದು. ಹೀಗಾದರೆ ಪುತ್ತೂರು ಅಭಿವೃದ್ಧಿ ಹೇಗೆ ಸಾದ್ಯ.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.