ಪರ್ಲಡ್ಕ ವಾರ್ಡ್ 19ರಲ್ಲಿ ರಾಷ್ಟ್ರೀಯ ಹೆಣ್ಣುಮಗು ದಿನಾಚರಣೆ, ಕೈತೊಳೆಯುವ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಪರ್ಲಡ್ಕ ವಾರ್ಡ್ 19ರ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಹೆಣ್ಣುಮಗು ದಿನಾಚರಣೆ, ಕೈತೊಳೆಯುವ ದಿನಾಚರಣೆ ಕಾರ್ಯಕ್ರಮವು ಆ.16ರಂದು ಬೆಳಿಗ್ಗೆ ನಡೆಯಿತು. ಪುಟಾಣಿ ಮಕ್ಕಳು ದೀಪ ಬಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ಥಳೀಯ ನಗರಸಭಾ ಸದಸ್ಯೆ ವಿದ್ಯಾ ಆರ್. ಗೌರಿ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಕೈ ತೊಳೆಯುವ ಮುಖ್ಯ ವಿಧಾನಗಳ ಬಗ್ಗ್ಗೆ ಮಾಹಿತಿ ನೀಡಿದರು. ನಂತರ ರಕ್ತ ಪರೀಕ್ಷೆ, ಡಯಾಬಿಟೀಸ್ ಪರೀಕ್ಷೆ ನಡೆಸಲಾಯಿತು. ಅಂಗನವಾಡಿ ಸಮಿತಿ ಅಧ್ಯಕ್ಷೆ ಶ್ರೀಮತಿ ನಂದಿನಿ ಅಧ್ಯಕ್ಷತೆ ವಹಿಸಿದ್ದರು. ಡೇನಲ್ಮಾ ರೋಜ್‌ಗಾರ್ ಯೋಜನೆ ಅಧ್ಯಕ್ಷೆ ಯಮುನಾ, ಆಶಾ ಕಾರ್ಯಕರ್ತೆ ವೀಣಾ ಆಚಾರ್ಯ, ಸುನಂದ, ಶಿಕ್ಷಕಿ ಸುಮಿತ್ರಾ, ಪುಣಾಣಿಗಳು, ಪೋಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.