HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅ. 19: ಉಪ್ಪಿನಂಗಡಿಯಲ್ಲಿ ಸಿಟಿ ಸೆಂಟರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಜವಳಿ, ಪಾದರಕ್ಷೆ, ಗೃಹೋಪಯೋಗಿ ವಸ್ತುಗಳ ಅಮೋಘ ಸಂಗ್ರಹದ ಮಳಿಗೆ ಸಿಟಿ ಸೆಂಟರ್ 
ಅ.19ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿಟಿ ಸೆಂಟರ್ ಮಳಿಗೆಯನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ವತಿಯಿಂದ ಕೊಡಮಾಡಿದ ಸಾರ್ವಜನಿಕ ಕುಡಿಯುವ ನೀರಿನ ಘಟಕವನ್ನು ತಾಲ್ಲೂಕು ಪಂಚಾಯಿತಿ ಕಾರ್‍ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್. ಉದ್ಘಾಟಿಸಲಿದ್ದಾರೆ.

ಜವಳಿ ವಿಭಾಗದ ಪ್ರಥಮ ಖರೀದಿದಾರರಾಗಿ ರಾಜ್ಯ ದಾರಿಮಿ ಎಸೋಸಿಯೇಶನ್ ಅಧ್ಯಕ್ಷ ಎಸ್.ಬಿ. ಮಹಮ್ಮದ್ ದಾರಿಮಿ, ಪಾದರಕ್ಷೆ ವಿಭಾಗದ ಪ್ರಥಮ ಖರೀದಿದಾರರಾಗಿ ಕುಂಬ್ರ ದಾರುಲ್ ಉಲಮಾ ಮಹಿಳಾ ಶರೀಯತ್ ಕಾಲೇಜಿನ ಪ್ರಿನ್ಸಿಪಾಲ್ ಮುಹಮ್ಮದ್ ಸಹದಿ ಯು.ಕೆ., ಗೃಹೋಪಯೋಗಿ ವಿಭಾಗದ ಪ್ರಥಮ ಖರೀದಿದಾರರಾಗಿ ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಗಣೇಶ್ ಶೆಣೈ ಸಹಕರಿಸಲಿದ್ದಾರೆ.

ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರೋ. ಝೇವಿಯರ್ ಡಿ’ಸೋಜಾ, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಸುಬ್ಬಪ್ಪ ಕೈಕಂಬ, ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಉಪ್ಪಿನಂಗಡಿ ಹಿರಿಯ ವೈದ್ಯ ಡಾ| ಎಂ.ಆರ್. ಶೆಣೈ, ತುಂಗಾ ಮಲ್ಟಿ ಸ್ಪೆಶಾಲಿಟಿ ಡೆಂಟೋಕೇರ್‌ನ ಡಾ| ಸುಪ್ರೀತಾ ರೈ, ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಅಧ್ಯಕ್ಷ ಅತಾವುಲ್ಲಾ ಜೋಕಟ್ಟೆ, ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಶೀಫ್, ಉಪ್ಪಿನಂಗಡಿಯ ಉದ್ಯಮಿ ಇಸಾಕ್ ಮೇದರಬೆಟ್ಟು, ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಪ್ರಿನ್ಸಿಪಾಲ್ ಸಂಶಾದ್ ಬೇಗಂ, ರೋಟರಿ ಡಿಸ್ಟ್ರಿಕ್ಟ್ ಪ್ರೋಜೆಕ್ಟ್ ವೈಸ್ ಚೆಯರ್‌ಮೆನ್ ಅಝೀಝ್ ಬಸ್ತಿಕ್ಕಾರ್, ರಾಜ್ಯ ಇಂಟಕ್ ಕಾರ್‍ಯದರ್ಶಿ ಎಂ.ಬಿ. ನಝೀರ್ ಮಠ, ಪುತ್ತೂರು ರಾಜಸ್ಥಾನ ಸಮಾಜದ ಕಾರ್‍ಯದರ್ಶಿ ಹನವಂತ ಸಿಂಗ್, ಉಪ್ಪಿನಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಈರಯ್ಯ ಡಿ.ಎಸ್., ಉಪ್ಪಿನಂಗಡಿ ಸಲಫಿ ಮಸೀದಿ ಉಪಾಧ್ಯಕ್ಷ ಮಹಮ್ಮದ್ ಕೆಂಪಿ, ಪುತ್ತೂರು ತಾಲ್ಲೂಕು ಬಿಲ್ಲವ ಸಂಘದ ಸಂಚಾಲಕ ವಸಂತ ಪೂಜಾರಿ, ಉಪ್ಪಿನಂಗಡಿ ಹಸನ್ ಟವರ್ ಮಾಲಕ ಮಹಮ್ಮದ್ ಇಕ್ಬಾಲ್ ಕೆ.ಪಿ., ಪುತ್ತೂರು ನಯಾ ನಯಾ  ಚಪ್ಪಲ್ ಬಜಾರ್ ಮಾಲಕ ರಜಾಕ್ ಎಮ್.ಜಿ., ಡಾ| ಝಕಿಯಾ ಎಮ್.ಜಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.