HomePage_Banner
HomePage_Banner
HomePage_Banner
HomePage_Banner
HomePage_Banner

ತ್ಯಾಜ್ಯ ಹಲಸಿನ ಹಣ್ಣಿನಿಂದ ಪರ್ಯಾಯ ಇಂಧನ – ಶ್ರೀ ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ- ಶೆಲ್ ಕಂಪನಿಯಿಂದ ಅಂತಾರಾಷ್ಟ್ರೀಯ ಮನ್ನಣೆ

Puttur_Advt_NewsUnder_1
Puttur_Advt_NewsUnder_1
‌                                                              ಪ್ರಖ್ಯಾತ್ ವೈ ಬಿ
                                                                         ಪ್ರಣವ್ ವೈ ಬಿ

ಪುತ್ತೂರು: ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ಉತ್ತುಂಗದಲ್ಲಿರುವ ಅಂತಾರ್ರಾಷ್ರ್ಟೀಯ ಶೆಲ್ (Shell) ಕಂಪೆನಿಯು ಕಳೆದ ವರ್ಷ ಬೆಂಗಳೂರಿನಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ (LLF ) ನೊಂದಿಗೆ ನಡೆಸಿದ ರಾಷ್ರ್ಟಮಟ್ಟದ ವಿಜ್ಞಾನ ಸಮಾವೇಶ”NXplorer 19-20”ರಲ್ಲಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಪ್ರಖ್ಯಾತ್ ವೈ ಬಿ ಮತ್ತು ಪ್ರಣವ್ ವೈ ಬಿ ಭಾಗವಹಿಸಿ“Biofuel  and Jaggery from waste Jackfruit “ ಎಂಬ ಯೋಜನಾ ವರದಿಯನ್ನು ಮಂಡಿಸಿ , ಬಹುಮಾನ ಪಡೆದಿರುವುದಲ್ಲದೆ , ಅಂತಾರ್ರಾಷ್ರ್ಟೀಯ ಸಮಾವೇಶದ ಆಯ್ಕೆಗೆ ಅರ್ಹತೆ ಪಡೆದಿದ್ದರು.

ಅದರ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದ್ದು, ಪ್ರಪಂಚದ 20 ದೇಶಗಳಿಂದ ಆಯ್ಕೆಯಾದ ಒಟ್ಟು 6 ಪ್ರಾಜೆಕ್ಟ್ ಗಳಲ್ಲಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಪ್ರಖ್ಯಾತ್ ವೈ ಬಿ ಮತ್ತು ಪ್ರಣವ್ ವೈ ಬಿ ( ಯತೀಶ್ಚಂದ್ರ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರರು) ಯವರ ಪ್ರಾಜೆಕ್ಟ್ ಭಾರತದಿಂದ ಆಯ್ಕೆಯಾದ ಏಕೈಕ ಯೋಜನಾ ವರದಿಯಾಗಿರುತ್ತದೆ. ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಂತಾರ್ರಾಷ್ರ್ಟೀಯ ಶೆಲ್ ( Shell) ಕಂಪೆನಿಯು ಕಳೆದ ಕೆಲವು ವರ್ಷಗಳಿಂದ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ (LLF ) ನೊಂದಿಗೆ ಭಾರತವೂ ಸೇರಿ ಪ್ರಪಂಚದಾದ್ಯಂತ ಸುಮಾರು 20 ದೇಶಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಸಂಶೋಧನಾ ಕ್ಷೇತ್ರದ ಕಡೆಗೆ ಒಲವು ಮೂಡಿಸುವ ಕಾರ್ಯವನ್ನು ಹಮ್ಮಿಕೊಂಡಿದೆ. ಈ ಉದ್ದೇಶದಿಂದ ಆಹಾರ, ನೀರು ಮತ್ತು ಶಕ್ತಿ( food, water and Energy) ಗಳ ಬಗ್ಗೆ ವಿವಿಧ ತಂತ್ರ( tools) ಗಳ ಮೂಲಕ NXplorer  ಎಂಬ 2 ದಿನಗಳ ಕಾರ್ಯಾಗಾರವನ್ನು 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ. ತರಭೇತಿ ಪಡೆದ ಮಕ್ಕಳು ತಯಾರಿಸಿದ ಪ್ರಾಜೆಕ್ಟಗಳಿಗೆ ಜಿಲ್ಲೆ, ರಾಜ್ಯ, ಮತ್ತು ರಾಷ್ರ್ಟಮಟ್ಟದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸುತ್ತಿದೆ.

ಈ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿದ ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಇಂದು NXplorer science expoದಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಶಾಲೆಯಾಗಿ ಮೂಡಿಬಂದಿದೆ.

ಮಾರಕ ಕೋವಿಡ್-19 ರಿಂದಾಗಿ  ಅಂತಾರ್ರಾಷ್ರ್ಟೀಯ ಸಮಾವೇಶವು  ಅಸಾಧ್ಯವಾದ ಕಾರಣ,ಶೆಲ್ ಕಂಪೆನಿಯ ಅಂತಾರ್ರಾಷ್ರ್ಟೀಯ ವೆಬ್ ಸೈಟ್( https://www.shell.com/sustainability/communities/education/india-case-study.html)

ನಲ್ಲಿ ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧವು ವಿವರವಾಗಿ ಪ್ರಕಟಗೊಂಡಿದೆ. ವಿದ್ಯಾರ್ಥಿಗಳ ಪ್ರಾಜೆಕ್ಟ ತಯಾರಿಕೆಯಲ್ಲಿ ಅವರ ಸಹಪಾಠಿಗಳಾದ ರೋಹನ್, ನಿಶಾನ್ ಮತ್ತು ನಿಶಿತ್ ಸಹಕರಿಸಿರುತ್ತಾರೆ.. ಮುಖ್ಯವಾಗಿ LLF ನ ಮ್ಯಾನೇಜರ್ ಹಾನಾ ಮುರುಗನ್ ನಿರಂತರ ಮಾರ್ಗದರ್ಶನ ನೀಡಿರುತ್ತಾರೆ. ಶಿಕ್ಷಕಿ ಸಂಗೀತ ಮತ್ತು ನಿವೃತ್ತ ವಿಜ್ಞಾನ ಶಿಕ್ಷಕಿ ವಸಂತಿ ಕೆದಿಲ ಸಹಕರಿಸಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮತ್ತು ಮುಖ್ಯಶಿಕ್ಷಕಿ ರೂಪಕಲಾ ತಿಳಿಸಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.