HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನ್ಯಾಯವಾದಿ ಶೈಲಜಾ ಅಮರನಾಥ್ ನೇಮಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನ್ಯಾಯವಾದಿ ಶೈಲಜಾ ಅಮರನಾಥ್ ನೇಮಕಗೊಂಡಿದ್ದಾರೆ.


ಮಂಗಳೂರಿನಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ವಿಧಾನ ಪರಿಷತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ , ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಸುಬೋದಯ ಆಳ್ವ ಮುಂತಾದ ಪ್ರಮುಖರ ಸಮ್ಮುಖದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ಸ್ ಸಮಿತಿ ದ.ಕ. ಘಟಕದ ಉಪಾಧ್ಯಕ್ಷರಾಗಿ ಶೈಲಜಾ ಅಮರನಾಥರವರನ್ನು ಆಯ್ಕೆ ಮಾಡಲಾಯಿತು.ಈ ವೇಳೆ ಮಾತನಾಡಿದ ಶೈಲಜರವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವೇ ಸೆಕ್ಯುಲರ್ ಆಲೋಚನೆ ಹಾಗೂ ಸೆಕ್ಯುಲರ್ ಆಲೋಚನೆಯೇ ನಿಜವಾದ ದೇಶ ಪ್ರೇಮವೆಂದು ಹೇಳಿದರು. ನನ್ನ ಸಾಮಾಜಿಕ ಚಿಂತನೆಯನ್ನು ಗುರುತಿಸಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ವಿನಯರಾಜ್ ಎ.ಸಿ.ಮತ್ತು ಪುತ್ತೂರು ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ದುರ್ಗಾಪ್ರಸಾದ್ ರೈ ಹಾಗೂ ಸದಸ್ಯರಿಗೆ ಶೈಲಜ ಅಮರನಾಥ್ ಧನ್ಯವಾದಗಳನ್ನು ತಿಳಿಸಿದರು. ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶೈಲಜರವರು ಬಪ್ಪಳಿಗೆ ನಿವಾಸಿ, ಉದ್ಯಮಿ ಅಮರನಾಥ ಬಿ.ಕೆ.ರವರ ಪತ್ನಿ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.