HomePage_Banner
HomePage_Banner
HomePage_Banner
HomePage_Banner
HomePage_Banner

ಬಾಲವನದಲ್ಲಿ ತ್ರಿಭಾವ ನೃತ್ಯ ರೂಪಕ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಡಾ. ಶಿವರಾಮ ಕಾರಂತರ ಬಾಲವನದ ವಾರದ ಆನ್‌ಲೈನ್ ಕಾರ್ಯಕ್ರಮದಲ್ಲಿ ಅ.16ರಂದು ರಂಗದೀಪ ಪುತ್ತೂರು ಇದರ ಸದಸ್ಯರಿಂದ `ತ್ರಿಭಾವ ನೃತ್ಯ ರೂಪಕ’ ಕಾರ್ಯಕ್ರಮ ನಡೆಯಿತು.
ಸಹಾಯಕ ಆಯುಕ್ತರ ಕಚೇರಿಯ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ರಂಗದೀಪದ ಪುತ್ತೂರು ಇದರ ಸದಸ್ಯರಾದ ದೀಕ್ಷಾ ಬಿ.ಎನ್, ಮೀರಾ ಎಂ ಮತ್ತು ವೈಷ್ಣವಿ ಆರ್ ಚಂದ್ರ ಅವರು ವಿಭಿನ್ನ ನೃತ್ಯ ಪ್ರಾಕಾರಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮ ಬಾಲನವ ಫೇಸ್‌ಬುಕ್, ವಾಟ್ಸಪ್ ಗ್ರೂಪ್, ಸುದ್ದಿ ಮಲ್ಟಿಮೀಡಿಯಾ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರಗೊಂಡಿತು. ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ. ಸುಂದರ್ ಕೇನಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಡಾ. ರಾಜೇಶ್ ಬೆಜ್ಜಂಗಳ ನಿರೂಪಿಸಿದರು. ಅಶೋಕ ಮಣಿಯಾಣಿ ವಂದಿಸಿದರು. ಇತ್ತೀಚೆಗೆ ನಿಧನರಾದ ಕಲಾವಿದ ಮೋಹನ್ ಸೋನಾ ಅವರನ್ನು ಇದೇ ಸಂದರ್ಭದಲ್ಲಿ ನೆನಪಿಸಲಾಯಿತು. ರಂಗ ನಿರ್ದೇಸಕ ಜೀವನ್ ರಾಂ ಸುಲ್ಯ, ರಂಗದೀಪದ ಸದಸ್ಯರಾದ ಶಶಿಧರ ಬಿ.ಎನ್, ವಸಂತ ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.