HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬೆಂಗಳೂರಿನಲ್ಲಿ ಹತ್ಯೆಯಾಗಿದ್ದ ಮನೀಶ್ ಶೆಟ್ಟಿ ವಿರುದ್ಧ 2 ವರ್ಷದ ಹಿಂದೆ ಸಂಪ್ಯ ಠಾಣೆಯಲ್ಲಿ ಬೆದರಿಕೆ ಕರೆ ಪ್ರಕರಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಂಗಳೂರಿನಲ್ಲಿ ಹತ್ಯೆಗೀಡಾಗಿರುವ ಬನ್ನಂಜೆ ರಾಜಾ, ರವಿ ಪೂಜಾರಿ ಸಹಚರ, ಡುಯಟ್ ಲೇಡೀಸ್ ಬಾರ್ ಮಾಲೀಕ ಮನೀಶ್ ಶೆಟ್ಟಿ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ೨ ವರ್ಷದ ಹಿಂದೆ ಬೆದರಿಕೆ ಕರೆ ಪ್ರಕರಣ ದಾಖಲಾಗಿತ್ತು.

೨೦೧೮ರಲ್ಲಿ, ಕುಂಬ್ರ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅವರಿಗೆ ಫೋನ್ ಕರೆ ಮಾಡಿ ಅವರ ಬಾವನ ವ್ಯವಹಾರಕ್ಕೆ ಸಂಬಂಧಿಸಿ ಬೆದರಿಕೆಯೊಡ್ಡಿದ್ದ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬಳಿಕದ ಬೆಳವಣಿಗೆಯಲ್ಲಿ ಆತ ವಿಟ್ಲ ಠಾಣೆಯಲ್ಲಿ ತನ್ನ ಮೇಲೆ ದಾಖಲಾಗಿದ್ದ ಕೇಸಿಗೆ ಸಂಬಂಧಿಸಿ ಕೋರ್ಟ್ ಮೆಟ್ಟಲೇರಲು ಬರುತ್ತಿದ್ದ ಮಾಹಿತಿ ತಿಳಿದು ಸಂಪ್ಯ ಪೊಲೀಸರು ಆತನನ್ನು ಬಂಧಿಸಲು ಅಲ್ಲಿಗೆ ತೆರಳಿದ್ದರಾದರೂ ಆತ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ಅ.೧೫ರಂದು ಬೆಂಗಳೂರು ರೆಸ್ಟ್ ಹೌಸ್ ರಸ್ತೆಯಲ್ಲಿರುವ ತಮ್ಮ ಬಾರ್ ಮುಂದೆ ರಾತ್ರಿ ಸುಮಾರು ೯.೦೫ರ ಸುಮಾರಿಗೆ ನಿಂತಿದ್ದ ೪೫ ವರ್ಷ ವಯಸ್ಸಿನ ಮನೀಶ್ ಶೆಟ್ಟಿ ಅವರ ಮೇಲೆ ಬೈಕಿನಲ್ಲಿ ಬಂದಿದ್ದ ಅಪರಿಚಿತರು ಮೊದಲಿಗೆ ಚಾಕುವಿನಿಂದ ತಿವಿದಿದ್ದಾರೆ.ನಂತರ ಡಬ್ಬಲ್ ಬ್ಯಾರೆಲ್ ಗನ್ ಬಳಸಿ ಎರಡು ಸುತ್ತು ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದರು.ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮನೀಶ್ ಶೆಟ್ಟಿಯವರನ್ನು ತಕ್ಷಣವೇ ಸಮೀಪದ ಮಲ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಯತ್ನಿಸಲಾಗಿತ್ತು.ಆದರೆ, ಪಾಯಿಂಟ್ ಬ್ಲ್ಯಾಂಕ್‌ನಲ್ಲಿ ತಗುಲಿದ್ದ ಗುಂಡು ಮನೀಶ್ ಶೆಟ್ಟಿಯವರ ಪ್ರಾಣವನ್ನು ತೆಗೆದಿದೆ.

ಚಿಕ್ಕಮಗಳೂರಿನ ಕೊಪ್ಪ ಮೂಲದ ಮನೀಶ್ ಶೆಟ್ಟಿಗೆ ಭೂಗತ ಜಗತ್ತಿನ ನಂಟಿತ್ತು.ಮಂಗಳೂರು, ಬಾಂಬೆಯಲ್ಲಿ ಇವರ ವಿರುದ್ಧ ಹಲವು ಪ್ರಕರಣಗಳು ಇವೆ.ಅಂಡರ್ ವರ್ಲ್ಡ್ ಡಾನ್‌ಗಳಾಗಿದ್ದ ಬನ್ನಂಜೆ ರಾಜ, ರವಿ ಪೂಜಾರಿ ಆಪ್ತನಾಗಿಯೂ ಗುರುತಿಸಿಕೊಂಡಿದ್ದ.ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸಿದ್ದ ಬಾಣಸವಾಡಿಯ ಚೆಮ್ಮನೂರು ಜ್ಯುವೆಲ್ಲರಿ ಮಳಿಗೆಯ ದರೋಡೆ ಪ್ರಕರಣದಲ್ಲಿ ಮನೀಶ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ.

ಎರಡು ಬಾರಿ ಬೆದರಿಕೆ ಕರೆ
ಹತ್ಯೆಗೀಡಾದ ಮನೀಶ್ ಶೆಟ್ಟಿ ೨೦೧೮ರಲ್ಲಿ ನನಗೆ ಎರಡು ಬಾರಿ ಫೋನ್ ಮಾಡಿ ಬೆದರಿಕೆಯೊಡ್ಡಿದ್ದ.ಆರಂಭದಲ್ಲಿ ಫೋನ್ ಮಾಡಿ ನಿಮ್ಮ ಬಾವ ನನಗೆ ಹಣ ಕೊಡಬೇಕಾಗಿದೆ.ಅವರು ಕೊಡುತ್ತಿಲ್ಲ ಎಂದು ಹೇಳಿದ್ದರು.ಆಗ ನಾನು, ಇದರಲ್ಲಿ ನಾನೇನು ಭಾಗಿಯಾಗಿಲ್ಲ.ವ್ಯವಹಾರದ ವಿಚಾರ ನನಗೆ ಗೊತ್ತಿಲ್ಲ.ನನಗೆ ಫೋನ್ ಮಾಡುವ ಅಗತ್ಯವಿಲ್ಲ ಎಂದಿದ್ದೆ.ಕೆಲ ದಿನಗಳ ಬಳಿಕ ಮತ್ತೊಮ್ಮೆ ನನಗೆ ಕಾಲ್ ಮಾಡಿ ‘ನಾನು ನಿಮ್ಮ ಮನೆಗೆ ಬರುತ್ತೇನೆ’ ಎಂದಿದ್ದ.ನೀನು ಯಾರು ನನ್ನ ಮನೆಗೆ ನುಗ್ಗುವವ ಎಂದು ನಾನು ಆಗ ಜೋರು ಮಾಡಿದ್ದೆ.ಬಳಿಕ ಅವರಿಗೆ ಭೂಗತ ಲೋಕದ ಕೈವಾಡ ಇರುವ ಹಿನ್ನೆಲೆಯಲ್ಲಿ ಬೆದರಿಕೆ ಕರೆ ಕುರಿತು ಪೊಲೀಸರಿಗೆ ದೂರು ನೀಡಿದ್ದೆ – ಪ್ರಕಾಶ್ಚಂದ್ರ ರೈ ಕೈಕಾರ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.