HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅಧಿಕೃತ ಏಜೆನ್ಸಿ ಕೋಡ್ ಬಳಸಿ ನಕಲಿ ವಾಹನ ವಿಮೆ ಆರೋಪ ಮೌಖಿಕ ದೂರು-ಆರ್‌ಟಿಒ ಮಧ್ಯವರ್ತಿಯ ವಿಚಾರಣೆ ನಡೆಸಿದ ಪೊಲೀಸರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಅಧಿಕೃತ ಏಜೆನ್ಸಿಗಳ ಕೋಡ್ ಬಳಸಿ ನಕಲಿ ವಾಹನ ವಿಮೆ ನೀಡಿರುವುದಾಗಿ ಆರೋಪಿಸಿ ಅಧಿಕೃತ ಏಜೆಂಟ್ ನೀಡಿದ ಮೌಖಿಕ ದೂರಿನನ್ವಯ ಪುತ್ತೂರು ನಗರ ಠಾಣಾ ಪೊಲೀಸರು ಆರ್‌ಟಿಒ ಮಧ್ಯವರ್ತಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರ ವಿಚಾರಣೆ ವೇಳೆ ಮಧ್ಯವರ್ತಿ ಅಶ್ಪಕ್ ಎಂಬವರು ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.ಅಬ್ದುಲ್ ಖಾದರ್ ಎಂಬವರು ಜಲೀಲ್ ಎಂಬವರಿಗೆ ಅಟೋ ರಿಕ್ಷಾವೊಂದನ್ನು ಮಾರಾಟ ಮಾಡಿದ್ದರು.ಜಲೀಲ್ ಅವರು ಅ.೧೨ರಂದು ಪುತ್ತೂರು ವಿಮಾ ಕಚೇರಿಗೆ ಬಂದು ರಿಕ್ಷಾದ ವಿಮೆಯನ್ನು ತನ್ನ ಹೆಸರಿಗೆ ಬದಲಾಯಿಸಲೆಂದು ಅಲ್ಲಿನ ಸಿಬಂದಿಗಳಲ್ಲಿ ಹೇಳಿದ ಸಂದರ್ಭ ಇದು ಬೆಳಕಿಗೆ ಬಂದಿದೆ.ಆರ್‌ಸಿ ಬದಲಾವಣೆಗೆ ಆರ್‌ಟಿಒ ಕಚೇರಿಗೆ ವಾಹನದ ವಿಮಾ ಪ್ರತಿ ಸಲ್ಲಿಸಬೇಕು.ಇದಕ್ಕಾಗಿ ನಕಲಿ ವಿಮಾ ಪಾಲಿಸಿ ಮಾಡಿ ನೀಡಲಾಗಿದೆ.ಇಲ್ಲಿ ಅಶ್ಪಕ್ ಅವರು ಖಾದರ್ ಅವರಿಗೆ ಆರ್‌ಸಿ ಬದಲಾವಣೆ ಸಂದರ್ಭ ಅಧಿಕೃತ ಸಂಸ್ಥೆಯ ಏಜೆನ್ಸಿ ಕೋಡ್ ಬಳಸಿ ಖಾದರ್ ಹೆಸರಿನಲ್ಲಿ ವಿಮೆ ನೀಡಿದ್ದಾರೆ.ಇದು ನಕಲಿ ಅನ್ನುವ ವಿಚಾರ ಖಾದರ್ ಅವರ ಗಮನಕ್ಕೂ ಬಂದಿರಲಿಲ್ಲ.ಅವರು ಅಸಲಿ ವಿಮೆಯೆಂದೇ ಭಾವಿಸಿ ವಿಮೆ ಸಹಿತ ಜಲೀಲ್‌ರವರಿಗೆ ಅಟೋ ಮಾರಾಟ ಮಾಡಿದ್ದರು.ವಿಮೆ ನಕಲಿಯೆಂದು ತಿಳಿದಾಗ ಅಧಿಕೃತ ಸಂಸ್ಥೆಯ ಏಜೆಂಟ್ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.ಆದರೆ ಪೊಲೀಸರು ದೂರು ಸ್ವೀಕರಿಸದೆ ವಾಹನದ ಮಾಲಕನನ್ನು ಕರೆಸಿ ವಿಚಾರಿಸಿ ಬಳಿಕ ಅವರು ನೀಡಿದ ಮಾಹಿತಿಯಾಧರಿಸಿ, ಅವರಿಗೆ ವಿಮೆ ಮಾಡಿಸಿಕೊಟ್ಟ ದಲ್ಲಾಳಿ ಅಶ್ಪಕ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಕಾರಣ?: ಆರ್‌ಸಿ ಬದಲಾವಣೆ ಸಂದರ್ಭ ಆ ವಾಹನದ ವಿಮೆ ಪ್ರತಿಯನ್ನು ಆರ್‌ಟಿಒ ಕಚೇರಿಗೆ ಸಲ್ಲಿಸಬೇಕು.ಆರ್‌ಟಿಒ ಅಧಿಕಾರಿಗಳು ಇದನ್ನು ಪೂರ್ಣವಾಗಿ ಪರಿಶೀಲಿಸದೆ ವಿಮೆ ಪಾಲಿಸಿ ಪತ್ರದಲ್ಲಿ ವಾಹನದ ಮಾಹಿತಿ ಮತ್ತು ದಿನಾಂಕ ಮಾತ್ರ ನೋಡಿ ಒಪ್ಪಿಗೆ ನೀಡುತ್ತಿದ್ದಾರೆ.ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲವೊಂದು ಅನಧಿಕೃತ ದಲ್ಲಾಳಿಗಳು ಆರ್‌ಸಿ ವರ್ಗಾವಣೆಗೆ ವಿಮೆ ಕಟ್ಟುವ ಹೆಸರಿನಲ್ಲಿ ವಾಹನ ಮಾಲಕರಿಂದ ಹಣ ವಸೂಲಿ ಮಾಡಿ, ಅನಂತರ ನಕಲಿ ವಿಮೆ ಸೃಷ್ಟಿಸುತ್ತಾರೆ.ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ರೀತಿಯಾಗಲು ಸಾಧ್ಯ ಎನ್ನುವ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

ಕ್ಯುಆರ್ ಕೋಡ್ ಸ್ಕ್ಯಾನ್:ತಾನು ಹೊಂದಿರುವ ವಿಮೆ ನಕಲಿಯೋ? ಅಥವಾ ಅಸಲಿಯೋ ಎಂದು ಅರಿಯಲು ಸ್ಮಾರ್ಟ್ ಫೋನ್ ಹೊಂದಿರುವ ವಿಮಾದಾರರು ವಿಮಾ ಪ್ರತಿಯಲ್ಲಿರುವ ಕ್ಯುಆರ್‌ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಖಾತರಿ ಆಗುತ್ತದೆ.ಆದರೆ ಈ ಕಾರ್ಯವನ್ನೂ ಕೆಲವು ಅಧಿಕಾರಿಗಳು ಮಾಡುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.

ದೂರು ನೀಡಿಲ್ಲ -ಎಸ್.ಐ:
ವಿಮಾ ಕಂಪೆನಿಯ ಏಜೆಂಟ್ ಬಂದು  ವಿಚಾರ ತಿಳಿಸಿದ್ದಾರೆ.ಆದರೆ ದೂರು ನೀಡಿಲ್ಲ.ಮೇಲ್ನೊಟದಲ್ಲಿ ವಿಚಾರಣೆ ನಡೆಸಿದ್ದು, ಏಜೆಂಟ್‌ದಾರರು ದೂರು ನೀಡಿದರೆ ವಿಚಾರಣೆ ನಡೆಸಿ ದೂರು ದಾಖಲು ಮಾಡಬಹುದು –  ಜಂಬುರಾಜ್ ಮಹಾಜನ್, ಎಸ್.ಐ. ಪುತ್ತೂರು ನಗರ ಪೊಲೀಸ್ ಠಾಣೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.