HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸಂಕಷ್ಟದ ಜೀವನ ಸಾಗಿಸುತ್ತಿರುವ ಉಸ್ತಾದರುಗಳಿಗೆ ನೆರವಾದ ಎಸ್ಸೆಸ್ಸೆಫ್ | ಆಯ್ದ ಉಸ್ತಾದರುಗಳಿಗೆ ಪುತ್ತೂರಿನಲ್ಲಿ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
  • ಸೇವಾ ಕ್ಷೇತ್ರದಲ್ಲಿ ಎಸ್ಸೆಸ್ಸೆಫ್ ಸಕ್ರಿಯವಾಗಿದೆ- ಅಡ್ವೊಕೇಟ್ ಶಾಕಿರ್ ಹಾಜಿ

ಪುತ್ತೂರು: ಎಸ್ಸೆಸ್ಸೆಫ್ ಸಂಘಟನೆಯು ಸಾಮಾಜಿಕ, ಧಾರ್ಮಿಕ ಹಾಗೂ ಸೇವಾ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು ಬಡವರ, ಕಷ್ಟದಲ್ಲಿರುವವರ ಕಣ್ಣೀರೋರೆಸುವ ಕಾರ್ಯವನ್ನು ಮಾಡುತ್ತಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು ಹೇಳಿದರು.

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ 200ನೇ ಕ್ಯಾಂಪ್ ಪ್ರಚಾರಾರ್ಥವಾಗಿ ಕಷ್ಟಕರ ಜೀವನ ಸಾಗಿಸುತ್ತಿರುವ ಆಯ್ದ ಉಸ್ತಾದರುಗಳಿಗೆ ದ.ಕ ಜಿಲ್ಲಾ ಸಮಿತಿ ವತಿಯಿಂದ ಪುತ್ತೂರಿನ ಸುನ್ನೀ ಸೆಂಟರ್‌ನಲ್ಲಿ ಅ.16ರಂದು ನಡೆದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲಾ ಬ್ಲಡ್ ಸೈಬೋ ಇದರ 200ನೇ ಬೃಹತ್ ಕ್ಯಾಂಪ್ ಮುಂದಿನ ತಿಂಗಳು ನಡೆಯಲಿದ್ದು ಆ ಪ್ರಯುಕ್ತ ಇಂದು ಕಿಟ್ ವಿತರಿಸುವ ಕಾರ್ಯ ನಡೆದಿದೆ ಎಂದು ಅವರು ಹೇಳಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಸದಸ್ಯ ಆರಿಫ್ ಝುಹ್‌ರಿ ಮುಕ್ಕ ಮಾತನಾಡಿ ಕೊರೋನಾ ಲಾಕ್‌ಡೌನ್ ಆದ ಬಳಿಕ ಉಸ್ತಾದರು ಬಹಳ ತೊಂದರೆಗೆ ಸಿಲುಕಿದ್ದು ಅವರಿಗೆ ನೆರವಾಗುವುದು ಪುಣ್ಯದ ಕಾರ್ಯವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಅಝೀಝ್ ಮದನಿ ತಿಂಗಳಾಡಿ, ತೌಸೀಫ್ ಸುರತ್ಕಲ್, ಸಹದ್ ತಿಂಗಳಾಡಿ ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ತಾಲೂಕು ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ನ.8ಕ್ಕೆ 200ನೇ ಕ್ಯಾಂಪ್
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ನಿರಂತರ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು 200ನೇ ಬೃಹತ್ ರಕ್ತದಾನ ಶಿಬಿರ ನವೆಂಬರ್ 8ರಂದು ಮಿತ್ತೂರು ಕೆಜಿಎನ್‌ನಲ್ಲಿ ನಡೆಯಲಿದೆ. ಅದರ ಪ್ರಚಾರಾರ್ಥ ಭಾಗವಾಗಿ ಕಿಟ್ ಕೊಡುವ ಕಾರ್ಯಕ್ರಮ ಹಮ್ಮಿಕೊಂಡು ಅರ್ಹ ಉಸ್ತಾದರುಗಳಿಗೆ ಕಿಟ್ ಕೊಡುವ ಮೂಲಕ ನೆರವಾಗಿದ್ದೇವೆ.
-ಇಮ್ರಾನ್ ರೆಂಜಲಾಡಿ, ಪ್ರ.ಕಾರ್ಯದರ್ಶಿ ಎಸ್ಸೆಸ್ಸೆಫ್ ಪುತ್ತೂರು ತಾಲೂಕು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.