HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

‘ಸಾತ್ವಿಕ, ತಾಮಸ, ರಾಜಸ ರೂಪದಲ್ಲಿ ಶ್ರೀ ದೇವಿಯ ಆರಾಧನೆಯ ಶುಭ ಪರ್ವ ನವರಾತ್ರಿ’: ಕೆಮ್ಮಿಂಜೆ ತಂತ್ರಿಯವರ ಶುಭ ನುಡಿ

Puttur_Advt_NewsUnder_1
Puttur_Advt_NewsUnder_1

‘ಯಾ ದೇವಿ ಸರ್ವ ಭೂತೇಷು, ಮಾತೃ ರೂಪೇಣ ಸಂಸ್ಥಿತಾ… ನಮಸ್ತಸೈ…, ನಮಸ್ತಸೈ…, ನಮಸ್ತಸೈ… ನಮೋ ನಮೋಃ’

ಶರದೃತುವಿನ ಆಶ್ವಯುಜ ಮಾಸದ ಶುಕ್ಲಪಕ್ಷದ ಪ್ರತಿಪತ್ತಿನಿಂದ ನವಮಿ ತಿಥಿಯವರೆಗೆ ಬರುವ ನವರಾತ್ರಿಯು, ಪ್ರಕೃತಿ ದೇವತೆ ಹಾಗೂ ಮಾತೃಶಕ್ತಿಯ ಉಪಾಸನೆಯ ಪರ್ವಕಾಲ.

ಜಗನ್ಮಾತೆಯು ದುಷ್ಟರನ್ನು ಸಂಹರಿಸಲು ಹಲವು ಅವತಾರಗಳನ್ನೆತ್ತಿದ್ದಾಳೆ. ಆ ಅವತಾರಗಳಲ್ಲಿ ದೇವಿಯ ಒಂಭತ್ತು ಅವತಾರಗಳನ್ನು ಪೂಜಿಸುವ ಪುಣ್ಯಕಾಲವೇ ಈ ನವರಾತ್ರಿ.

ನವರಾತ್ರಿಯ ಮೊದಲ ಮೂರು ದಿನಗಳಲ್ಲಿ ಸಾತ್ವಿಕ ರೂಪದಿಂದ, ಮತ್ತೆ ಮೂರು ದಿನ ತಾಮಸ ರೂಪದಿಂದ ಹಾಗೂ ಕೊನೆಯ ಮೂರು ದಿನಗಳಲ್ಲಿ ರಾಜಸ ಗುಣದಿಂದ ಜಗನ್ಮಾತೆಯು ಆರಾಧಿಸಲ್ಪಡುತ್ತಾಳೆ.

ಲೋಕ ಕಂಠಕರಾದ ಚಂಡ-ಮುಂಡ, ರಕ್ತಬೀಜ, ಮಹಿಷಾಸುರ, ರಕ್ತಬೀಜಾಸುರ ಸಹಿತ ಖಳ ಕೂಳರನ್ನು ಸಂಹರಿಸಿ ಜಗತ್ತಿನ ಉದ್ಧಾರವನ್ನು ಮಾಡಿ, ದರ್ಮವನ್ನು ರಕ್ಷಿಸಿದ್ದಾಳೆ ಈ ಮಹಾತಾಯಿ.

ಜಗನ್ಮಾತೆಯ ಮಕ್ಕಳಾಗಿರುವ ನಾವೂ ಕೂಡಾ, ಈ ನವರಾತ್ರಿಯ ಪುಣ್ಯ ಕಾಲದಲ್ಲಿ ಜಗನ್ಮಾತೆಯನ್ನು ಉಪಾಸನೆ ಮಾಡುವ ಮೂಲಕ ನಮ್ಮೊಳಗಿರುವ ಕಾಮ, ಕ್ರೋಧಾದಿ ವೈರಿಗಳನ್ನು ಸಂಹರಿಸಿ ಧರ್ಮದ ಮಾರ್ಗದಲ್ಲಿ ಜೀವನವನ್ನು ನಡೆಸಿದರೆ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ ಸಾರ್ಥಕ ಜೀವನವನ್ನು ನಡೆಸಬಹುದಾಗಿದೆ.

ನವರಾತ್ರಿಯ ಈ ಪುಣ್ಯಕಾಲದಲ್ಲಿ, ಇಂದು ನಮ್ಮ ಸಮಾಜ ಎದುರಿಸುತ್ತಿರುವ ಸಂಕಷ್ಟಗಳ, ಮಹಾಮಾರಿಯಂತಹ ರೋಗಗಳು, ಅಧರ್ಮಗಳು.. ಎಲ್ಲವೂ ಆ ದೇವಿಯ ಅನುಗ್ರಹದಿಂದ ದೂರವಾಗಿ ಲೋಕಕ್ಕೆ ಶಾಂತಿ-ನೆಮ್ಮದಿಯನ್ನಿತ್ತು, ವಿಶ್ವ ಕಲ್ಯಾಣವಾಗಲಿ ಎಂಬ ಪ್ರಾರ್ಥನೆಯೊಂದಿಗೆ, ಸರ್ವರಿಗೂ ನವರಾತ್ರಿಯ ಶುಭಾಶಯಗಳು.

‘ಸರ್ವೇ ಜನ ಸುಖಿನೋ ಭವಂತು… ಸಮಸ್ತ ಸನ್ಮಂಗಲಾನಿ ಭವಂತು…’


– ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.