HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕಾಲಸ್ಥಿತಿಗೆ ಅನುಗುಣವಾಗಿ ಪುತ್ತೂರು ದಸರಾ ಮಹೋತ್ಸವಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1

ಕೋವಿಡ್ ಮುಕ್ತವಾಗಿ ಮುಂದಿನ ವರ್ಷ ಗತ ವೈಭವ ಮರುಕಳಿಸಲಿ- ಸಂಜೀವ ಮಠಂದೂರು

ಪುತ್ತೂರು: ನವದುರ್ಗಾರಾಧನಾ ಸಮಿತಿ ಪುತ್ತೂರು ಸಹಯೋಗದೊಂದಿಗೆ ವರ್ಷಂಪ್ರತಿ ವಿಜೃಂಭಣೆಯಿಂದ ನಡೆಯುವ ೧೮ನೇ ವರ್ಷದ ಪುತ್ತೂರು ದಸರಾ ಮಹೋತ್ಸವ ಕಾಲಸ್ಥಿತಿಗೆ ಅನುಗುಣವಾಗಿ ಸರಳ ರೀತಿಯಲ್ಲಿ ಸಂಪ್ಯ ಉದಯಗಿರಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ಅ.೧೭ರಂದು ಚಾಲನೆ ನೀಡಲಾಯಿತು. ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಗಣಪತಿ ಸಹಿತ ನವ ದುರ್ಗೆಯರ ವಿಗ್ರಹ ಪೂಜೆ ನೆರವೇರಿಸಿದರು.

 

12 ದಿನಗಳು ನಡೆಯುವ ಪುತ್ತೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕೇವಲ ದೇವಿಯ ಆರಾಧನೆಗೆ ಸಂಬಂಧಿಸಿ ಸಂಪ್ರದಾಯ ಕಟ್ಟುಕಟ್ಟಲೆ ನಡೆಯಲಿದ್ದು, ಶಾಸಕ ಸಂಜೀವ ಮಠಂದೂರು ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ ಆರೋಗ್ಯ ದೃಷ್ಟಿಯಿಂದ ನವರಾತ್ರಿ ಉತ್ಸವ ಸಾಂಕೇತಿಕವಾಗಿ ದೇವಿಯರ ಅರಾಧನೆಗೆ ಮಾತ್ರ ಸೀಮಿತವಾಗಿದೆ. ಧಾರ್ಮಿಕ ಆಚರಣೆಗಳು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅಗತ್ಯ. ಎಲ್ಲವೂ ಕೋವಿಡ್ ನಿಯಮಾನುಸರ ನಡೆಯಬೇಕು. ಕೋವಿಡ್ ಮುಕ್ತವಾದ ಬಳಿಕ ಮುಂದಿನ ವರ್ಷ ಮತ್ತೊಮ್ಮೆ ಗತ ವೈಭವ ಮರುಕಳಿಸಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಪಿ ಜಿ ಜಗನಿವಾಸ ರಾವ್‌, ಕೆಡಿಪಿ ನಾಮನಿರ್ದೇಶಿತ ಸದಸ್ಯ ವಿಜಯ ಬಿ.ಎಸ್, ಸೀತಾರಾಮ ರೈ ಕಂಬಳತಡ್ಡ, ಶಿಕ್ಷಕ ಉದಯ ರೈ, ಬಿಜೆಪಿ ಮುಖಂಡ ಸುರೇಶ್ ಆಳ್ವ, ಶಾಸಕರ ಆಪ್ತ ಸಹಾಯಕ ವಸಂತ ವೀರಮಂಗಲ ಸೇರಿದಂತೆ ಅರ್ಚಕರು, ಊರವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.