ಉಪ್ಪಿನಂಗಡಿ ಇಂದ್ರಪ್ರಸ್ಥ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿಭಾಗದ ಪೋಷಕರ ಸಭೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೊರೋನಾ ಸಂಬಂಧಿಸಿ ಸರಕಾರದ ನಿಲುವು ಏನೇ ಇರಲಿ ಶಾಲೆಗೆ ಹೋಗಿಯೇ ಕಲಿಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಸುರಕ್ಷತಾ ವಿಧಾನಗಳೊಂದಿಗೆ ಶಾಲೆಯಲ್ಲಿಯೇ ಕಲಿಯುವ ಅವಕಾಶ ಒದಗಿಸಿ ಎಂದು ಪೋಷಕರು ಬಹುಮತದೊಂದಿಗೆ ಅಗ್ರಹಿಸಿದ್ದಾರೆ.

ಶನಿವಾರದಂದು ನಡೆದ ಉಪ್ಪಿನಂಗಡಿ ಇಂದ್ರಪ್ರಸ್ಥ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿಭಾಗದ ಪೋಷಕರ ಸಭೆಯಲ್ಲಿ ಈ ಆಗ್ರಹ ಕೇಳಿ ಬಂತು. ಆನ್ ಲೈನ್ ತರಗತಿಗಳಿಂದ ಆರ್ಥಿಕ ಸಮಸ್ಯೆ ಕಾಡುತ್ತಿದ್ದರೆ , ಇನ್ನು ಕೆಲವರಿಗೆ ಕಣ್ಣಿನ ಸಮಸ್ಯೆ ಕಾಡುತ್ತಿದೆ. ಮತ್ತೆ ಕೆಲವರು ಮೊಬೈಲ್ ದುರ್ಬಳಕೆ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಆನ್ ಲೈನ್ ಶಿಕ್ಷಣ ನಿರೀಕ್ಷಿತ ಫಲಿತಾಂಶ ಒದಗಿಸದ ಕಾರಣ ಆಸಕ್ತ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿಯೇ ಪಾಳಿಯಾಧಾರಿತವಾಗಿಯಾದರೂ ಪಾಠ ಪ್ರವಚನಗಳನ್ನು ನೀಡಬೇಕೆಂದೂ, ಈ ಸಂಬಂಧ ಯಾವುದೇ ಸೂಕ್ಶ್ಮತೆ ಉಂಟಾದರೂ ಪೋಷಕರಾದ ನಾವುಗಳೇ ಹೋಣೆಗಾರರಾಗುತ್ತೇವೆ ಎಂದೂ , ಯಾವುದಾದರೂ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಬರಲು ಕೊರೋನಾ ಭೀತಿ ಕಾಡಿದರೆ ಅಂತಹ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣವನ್ನು ಮುಂದುವರೆಸಬಹುದೆಂದು ಪೋಷಕರು ಅಗ್ರಹಿಸಿದರು.

ಸಭೆಯಲ್ಲಿ ಇಂದ್ರಪ್ರಸ್ಥ ಪಿಯು ಕಾಲೇಜಿನ ಪ್ರಾಂಶುಪಾಲ ಹೆಚ್ ಕೆ ಪ್ರಕಾಶ್ , ಸಾಧಕ ವಿದ್ಯಾರ್ಥಿಗಳಾದ ಸುಹಾಸ್ ಎಂ ಕೆ ಮತ್ತು ನಿಹಾಲ್ ನೂಜಿಬೈಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.