HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು ನ್ಯಾಯಾಲಯದ ವಠಾರದಲ್ಲಿ ಹೊರಟ ಕೋವಿಡ್ -19 ಜಾಗೃತಿ ಅಭಿಯಾನಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1
  • ಸರಕಾರ, ಆರೋಗ್ಯ ಇಲಾಖೆ ನಿಯಮ ಪಾಲಿಸಿ ಆರೋಗ್ಯವಂತರಾಗಿ – ರುಡೊಲ್ಫ್ ಪಿರೇರಾ
  • ತಮ್ಮ, ಸಮಾಜದ ಆರೋಗ್ಯ ಕಾಪಾಡಬೇಕು – ಮಂಜುನಾಥ್
  • ದಂಡ ತೆತ್ತು ಆರೋಗ್ಯ ಕಾಪಾಡುವ ಬದಲು ಮಾಸ್ಕ್ ಧರಿಸಿ – ಮನೋಹರ್ ಕೆ.ವಿ

ಪುತ್ತೂರು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೋವಿಡ್-೧೯ ಅಭಿಯಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಅ.೧೭ರಂದು ಪುತ್ತೂರು ನ್ಯಾಯಾಲಯದಲ್ಲಿ ಚಾಲನೆ ನೀಡಲಾಯಿತು.

ಸರಕಾರ, ಆರೋಗ್ಯ ಇಲಾಖೆ ನಿಯಮ ಪಾಲಿಸಿ ಆರೋಗ್ಯವಂತರಾಗಿ:
೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರುಡೊಲ್ಫ್ ಪಿರೇರಾ ಹಸಿರು ನಿಶಾನೆ ತೋರಿಸುವ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಮಹಾಮಾರಿ ಕೋವಿಡ್‌ಗೆ ಯಾವುದೇ ಔಷಧಿ ಕಂಡುಹಿಡಿಯಲಾಗಿಲ್ಲ. ಇದರಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕಾದರೆ ಮುಂಜಾಗ್ರತಾ ಕ್ರಮವಾಗಿ ನಿಮಯಗಳನ್ನು ಪಾಲಿಸುವುದೊಂದಿಗೆ ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ, ಆರೋಗ್ಯ ಇಲಾಖೆ ನಿಯಮ ಪಾಲಿಸಿ ಆರೋಗ್ಯವಂತರಾಗಿ ಎಂದು ಹೇಳಿದರು.

ತಮ್ಮ, ಸಮಾಜದ ಆರೋಗ್ಯ ಕಾಪಾಡಬೇಕು:
ಕರಪತ್ರ ಬಿಡುಗಡೆ ಮಾಡಿದ ಪ್ರಧಾನ ಹಿರಿಯ ವ್ಯವಹಾರಿಕ, ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಾಧೀಶ ಮಂಜುನಾಥ ಅವರು ಮಾತನಾಡಿ, ವೈರಸ್‌ನಿಂದ ರಕ್ಷಿಸಿಕೊಳ್ಳಲು ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಸ್ಯಾನಿಟೈಸರ್ ಬಳಕೆ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಜೊತೆಗೆ ಸಮಾಜದ ಅರೋಗ್ಯವನ್ನೂ ಕಾಪಾಡಬೇಕೆಂದು ಹೇಳಿದರು.

ದಂಡ ತೆತ್ತು ಆರೋಗ್ಯ ಕಾಪಾಡುವ ಬದಲು ಮಾಸ್ಕ್ ಧರಿಸಿ:
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ಕೊರೋನಾ ವೈರಸ್ ಸೋಂಕು ಬಂದಾಗಿನಿಂದ ಒಂದು ರೀತಿಯ ಭಯ ಇದೆ. ಆದರೆ ವೈರಸ್ ಬಣ್ಣ ಯಾವುದು, ಅದು ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆಯೋ, ಗಾಳಿಯಿಂದ ಹರಡುತ್ತದೆಯೋ ನಮಗೆ ಇನ್ನೂ ಸ್ಪಷ್ಟ ತಿಳುವಳಿಕೆ ಇಲ್ಲ. ಇದರ ಜೊತೆಗೆ ಇನ್ನೂ ಲಸಿಕೆ ಬರದ ಬಾರದ ಆದಷ್ಟು ನಮ್ಮ ಆರೋಗ್ಯ ಕಾಪಾಡುವ ಮೂಲಕ ಸಾಮಾಜಿಕ ಆರೋಗ್ಯ ಕಾಪಾಡುವ ಜವಾಬ್ದಾರಿ ನಮ್ಮಲ್ಲಿ ಇದೆ. ಇಂತಹ ಸಂದರ್ಭಲ್ಲಿ ಮಾಶ್ಕ್ ಧರಿಸುವುದು ಮತ್ರವಲ್ಲ ಮಾಸ್ಕ್‌ನ್ನು ಸರಿಯಾಗಿ ಧರಿಸುವುದು ಅತೀ ಅಗತ್ಯ. ಆದರೆ ಬಹಳಷ್ಟು ಮಂದಿ ಮಾಸ್ಕ್ ಸರಿಯಾಗಿ ಧರಿಸದೆ ಇದ್ದಾಗ ಶಿಕ್ಷೆ ಕೊಡುವ ಮೂಲಕವಾದರೂ ಜಾಗೃತಿ ಕೊಡುವ ಕೆಲಸ ಆಗುತ್ತಿದೆ. ಆದರೆ ನಮ್ಮ ಆರೋಗ್ಯ ಕಾಪಾಡಲು ದಂಡ ತೆರುವುದು ತುಂಬಾ ದೊಡ್ಡ ವಿಚಾರ. ಹಾಗಾಗಿ ದಂತ ತೆತ್ತು ಆರೋಗ್ಯ ಕಾಪಾಡುವ ಬದಲು ಮಾಸ್ಕ್ ಧರಿಸಿ ಆರೋಗ್ಯ ಕಾಪಾಡಿಕೊಳ್ಳುವ ಎಂದು ಹೇಳಿದರು. ೨ನೇ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ವೆಂಕಟೇಶ್ ಅವರು ಮಾಸ್ಕ್ ವಿತರಿಸಿ ಜಾಗೃತಿ ನೀಡಿದರು. ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ಮತ್ತು ಪ್ರಥಮದಜೆ ನ್ಯಾಯಿಕ ದಂಡಾಧಿಕಾರಿಯಗಿರುವ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಪ್ರಕಾಶ್ ಪಿ.ಎಮ್ ಅವರು ಪ್ರಮಾಣ ವಚನ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ತಹಶೀಲ್ದಾರ್ ಟಿ.ರಮೇಶ್ ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಲೀಗಲ್ ಅಡ್ವೈಸರ್ ಸದಸ್ಯೆ ರೋಹಿಣಿ ಆಚಾರ್ಯ ಭಾಗವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಎನ್.ಎಸ್ ವಂದಿಸಿದರು. ನ್ಯಾಯವಾದಿ ದೀಪಕ್ ಬೊಳುವಾರು ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.