HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪೊಲೀಸ್ ಠಾಣೆಗಳ ಸಂಖ್ಯೆ ಹೆಚ್ಚಾದ ಹಾಗೆ ಅಲ್ಲಲ್ಲಿ ತಪಾಸಣೆ ಆರೋಪ | ಠಾಣೆಗಳೊಳಗೆ ಹೊಂದಾಣಿಕೆ ಮಾಡಿಕೊಳ್ಳಿ – ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಪೊಲೀಸ್ ಠಾಣೆಗಳು ಹೆಚ್ಚಾದ ಹಾಗೆ ಪೊಲೀಸರಿಗೆ ದಂಡ ಹಾಕುವ ಗುರಿಯ ಒತ್ತಡ ಹೆಚ್ಚಿದೆ. ಇದರಿಂದ ಪೊಲೀಸರು ಕೂಡಾ ಅಲ್ಲಲ್ಲಿ ಮೋಟಾರು ವಾಹನ ಕಾಯ್ದೆ ಉಲ್ಲಂಘಸಿದವರಿಗೆ ದಂಡ ಹಾಕುವುದು ಸರಿ. ಆದರೆ ಒಂದೆ ರಸ್ತೆಯಲ್ಲಿ ನಾಲ್ಕೈದು ಕಡೆ ವಾಹನ ತಪಾಸಣೆ ಮಾಡುವ ಬದಲು ನಿರ್ದಿಷ್ಟ ರಸ್ತೆ ಆಯ್ಕೆ ಮಾಡಿ ಎಂದು ಶಾಸಕ ಸಂಜೀವ ಮಠಂದೂರು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ಒಂದೇ ರಸ್ತೆಯಲ್ಲಿ ನಾಲ್ಕಾರು ಕಡೆ ವಾಹನ ತಪಾಸಣೆ ಮಾಡುತ್ತಿರುವ ಬಗ್ಗೆ ಜನರಿಂದ ದೂರು ಬಂದಿರುವ ಕುರಿತು ಸಂಚಾರ ಪೊಲೀಸರೊಂದಿಗೆ ಪುತ್ತೂರು ಪ್ರವಾಸಿ ಮಂದಿರದಲ್ಲಿ ಅ.17 ರಂದು ಸಭೆ ನಡೆಸಿದ ಶಾಸಕರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಪುತ್ತೂರು ನಗರದಲ್ಲಿ ಠಾಣೆಗಳ ಸಂಖ್ಯೆ ಹೆಚ್ಚಾಗಿದೆ. ಟ್ರಾಫಿಕ್, ನಗರ, ಮಹಿಳಾ ಠಾಣೆ, ಎಎಸ್ಪಿ ಕಚೇರಿಗಳಿವೆ. ಜತೆಗೆ ಹೆದ್ದಾರಿ ಗಸ್ತು ವಾಹನ ಪಡೆಯು ನಿರತವಾಗಿದೆ. ಕೆಲವು ಬಾರಿ ಒಂದೇ ರಸ್ತೆಗಳಲ್ಲಿ ನಾಲ್ಕೈದು ಕಡೆ ದಾಖಲೆ ತಪಾಸಣೆ ನಡೆಸುತ್ತಿರುವ ಕಾರಣ ಸರಿಯಾದ ದಾಖಲೆ ಇದ್ದ ಸವಾರರಿಗೂ ಸಮಸ್ಯೆ ಉಂಟಾಗಿದೆ. ಇದು ಪೊಲೀಸರಿಗೂ ಅನಗತ್ಯ ಕೆಲಸ. ಹೀಗಾಗಿ ರೂಟ್ ನಿಯಮ ಜಾರಿ ಮಾಡಿ ಜವಬ್ದಾರಿ ಹಂಚುವಂತೆ ಶಾಸಕರು ಸೂಚಿಸಿದರು. ಸಂಚಾರ ಠಾಣೆಯ ಎಸ್.ಐ.ರಾಮನಾಯ್ಕ ಮಾತನಾಡಿ, ದಂಡ ವಿಧಿಸಲು ಗುರಿ ನಿಗದಿಪಡಿಸಲಾಗಿದೆ. ಹೀಗಾಗಿ ತಪಾಸಣೆ ಕಡ್ಡಾಯ. ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಹೆಡ್‌ಕಾನ್‌ಸ್ಟೇಬಲ್ ಶಿವಪ್ರಸಾದ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.