HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸರಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ವಿನೂತನ ಪ್ರಯತ್ನ! ರೆಂಜಿಲಾಡಿ; ರೈಲು ಬೋಗಿಯಾಗಿ ಬದಲಾದ ಮೀನಾಡಿ ಸ.ಕಿ.ಪ್ರಾ. ಶಾಲೆ

Puttur_Advt_NewsUnder_1
Puttur_Advt_NewsUnder_1

ಕಡಬ: ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಳಗೊಳಿಸಲು ವಿವಿಧ ಪ್ರಯತ್ನಗಳು ನಡೆಯುತ್ತಲೇ ಇವೆ. ಇಲ್ಲೊಂದು ಗ್ರಾಮೀಣ ಭಾಗದ ಸರಕಾರಿ ಶಾಲೆಯ ಗೋಡೆಗೆ ರೈಲು ಬೋಗಿಯ ಮಾದರಿಯ ಬಣ್ಣ ಬಳಿದು ಆಕರ್ಷಕ ರೀತಿಯಲ್ಲಿ ಶಾಲೆಯನ್ನು ಬದಲಾಯಿಸಲಾಗಿದೆ.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಮೀನಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಕರ್ಷನೀಯ ಭಾರತೀಯ ರೈಲು ಬೋಗಿಯಾಗಿ ಬದಲಾಗಿದೆ.

ವಜ್ರಮಹೋತ್ಸವ ಸಿದ್ಧತೆ;
೧ರಿಂದ ೫ನೇ ತರಗತಿ ಇರುವ ಮೀನಾಡಿ ಶಾಲೆ ೩.೮೯ಎಕ್ರೆ ಜಾಗಹೊಂದಿದ್ದು, ೧೯೬೦-೬೧ರಲ್ಲಿ ಸ್ಥಾಪನೆಗೊಂಡು, ೨೦೧೦ರಲ್ಲಿ ಸುವರ್ಣ ಸಂಭ್ರಮವನ್ನು ಆಚರಿಸಲಾಗಿತ್ತು. ಇದೀಗ ೬೦ ವರ್ಷ ಪೊರೈಸಿರುವ ಈ ಶಾಲೆಯು ವಜ್ರಮಹೋತ್ಸವ ಸಂಭ್ರಮ ಸಿದ್ಧತೆಯಲ್ಲಿದೆ. ಅಂದುಕೊಂಡಂತೆ ನಡೆಯುತ್ತಿದ್ದರೇ ಈಗಾಗಲೇ ಕಾರ್ಯಕ್ರಮ ನಡೆದಿರಬೇಕಾಗಿತ್ತು. ಆದರೆ ಕೊರೊನಾ ಕಾರಣದಿಂದ ಕಾರ್ಯಕ್ರಮ ಮುಂದೂಡಲ್ಪಟ್ಟಿದ್ದು, ಇಲಾಖೆ ಅನುಮತಿ ನೀಡಿದ ತಕ್ಷಣ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮ ನಡೆಸಲಾಗುವುದು ಎನ್ನುತ್ತಾರೆ ಮುಖ್ಯಶಿಕ್ಷಕರು.

ಮೀನಾಡಿ ಎಕ್ಸ್‌ಪ್ರೆಸ್ಸ್;
ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿದೆ. ಶಾಲೆಗೆ ಬಣ್ಣ ಬಳಿಯುವ ಸಂದರ್ಭದಲ್ಲಿ ಆಕರ್ಷನೀಯ ರೀತಿಯಲ್ಲಿ ಬಣ್ಣ ಬಳಿಯುವ ಉದ್ದೇಶದಿಂದ ಶಾಲಾ ಗೋಡೆಗೆ ಭಾರತೀಯ ರೈಲು ಬೋಗಿಯ ಮಾದರಿ ಬಣ್ಣ ಬಳಿಯಲಾಗಿದೆ. ಅದಕ್ಕೆ ಮೀನಾಡಿ ಎಕ್ಸ್‌ಪ್ರೆಸ್ ಎಂದು ಹೆಸರಿಡಲಾಗಿದ್ದು, ಎಂಜಿನ್‌ನಲ್ಲಿ ಎಜುಕೇಶನ್ ಎಕ್ಸ್‌ಪ್ರೆಸ್ ಎಂದು ಬರೆಯಲಾಗಿದೆ. ಜತೆಗೆ ಒಂದೊಂದು ಬೋಗಿಗೆ ತರಗತಿಯ ಸಂಖ್ಯೆ ಹಾಕಲಾಗಿದೆ. ಶಾಲೆಯ ಡಿಐಎಸ್‌ಇ ಕೋಡ್‌ನ್ನು ಕೂಡ ಬರೆಯಲಾಗಿದೆ. ಒಂದು ಬದಿಯಿಂದ ರೈಲು ಎಂಜಿನ್ ಪ್ರಾರಂಭಗೊಂಡು, ಬೋಗಿಗಳು, ಕಿಟಕಿಗಳು ಸೇರಿದಂತೆ ರೈಲು ಬೋಗಿಯ ಮಾದರಿಯಲ್ಲಿಯೇ ಚಿತ್ರ ಬರೆದು ಬಣ್ಣ ಬಳಿಯಲಾಗಿದ್ದು, ಇದೀಗ ಶಾಲೆಯು ರೈಲು ಬೋಗಿಯಂತೆ ಕಂಗೊಳಿಸುತ್ತಿದೆ. ಕಡಬದ ಲಕ್ಷ್ಮೀ ಆರ್ಟ್ಸ್‌ನ ಲಕ್ಷ್ಮೀಶ ಹಾಗೂ ಮಾದವ ಎಂಬವರ ಕೈಚಳಕದಿಂದ ಮೀನಾಡಿ ಎಕ್ಸ್‌ಪ್ರೆಸ್ಸ್ ಮೂಡಿಬಂದಿದೆ.

ಶಾಲೆಯನ್ನು ಮೀನಾಡಿ ಎಕ್ಸ್‌ಪ್ರೆಸ್ಸ್ ಮಾದರಿಯಲ್ಲಿ ಬದಲಾಯಿಸುವುದರ ಹಿಂದೆ ಸರಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶವನ್ನಿಡಲಾಗಿದೆ. ಪುಟ್ಟಮಕ್ಕಳು ಆಕರ್ಷನೀಯ ವಸ್ತುಗಳಿಗೆ ಸೆಳೆಯುತ್ತಾರೆ. ಅದರಂತೆ ಸರಕಾರಿ ಶಾಲೆಗೆ ರೈಲು ಬೋಗಿ ಮಾದರಿ ಬಣ್ಣ ಬಳಿಯಲಾಗಿದೆ. ಇದೀಗ ಶಾಲೆಗೆ ಬೇಟಿ ನೀಡುವ ಮಂದಿ ರೈಲು ಬೋಗಿಯ ಬಳಿ ತಮ್ಮ ಪೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಮೀನಾಡಿ ಸರಕಾರಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಶಾಲೆಯು ಉತ್ತಮ ಕಲಿಕಾ ಕೊಠಡಿ, ಶೌಚಾಲಯ, ಅಕ್ಷರ ದಾಸೋಹ ಕಟ್ಟಡ ಹೊಂದಿದೆ. ಶಾಲಾ ಅಂಗಲಕ್ಕೆ ಇಂಟರ್‌ಲಾಕ್ ಅಳವಡಿಕೆ, ಉದ್ಯಾನವನ ರಚನೆ, ಕಂಪ್ಯೂಟರ್ ಅಳವಡಿಕೆ, ಸ್ಮಾರ್ಟ್ ಕ್ಲಾಸ್ ಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಮುಂತಾದ ಅಭಿವೃಧ್ಧಿ ಕೆಲಸಗಳು ಆಗಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೊಠಡಿಯೊಳಗೂ ಕೈಚಳಕ;
ಶಾಲೆಯ ಗೋಡೆಗೆ ಆಕರ್ಷನೀಯ ಬಣ್ಣ ಬಳಿಯಲಾಗಿದ್ದು, ತರಗತಿ ಕೊಠಡಿಯೊಳಗೂ ಮಕ್ಕಳ ಮನಸ್ಸಿಗೊಪ್ಪುವ ಭಾವನಾತ್ಮಕ ಕಲೆಗಳನ್ನು ಚಿತ್ರಿಸಲಾಗಿದ್ದು, ಶೈಕ್ಷಣಿಕವಾಗಿ ಹೊಂದಿಕೆಯಾಗುವಂತಹ ಚಿತ್ರಣ, ಬರಹಗಳನ್ನು ಗೋಡೆಯಲ್ಲಿ ಚಿತ್ರಿಸಲಾಗಿದೆ.

ಮೀನಾಡಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಈ ಭಾಗದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಬೇಕೆಂಬ ಉದ್ದೇಶದಿಂದ ಈಗಾಗಲೇ ಶಾಲೆಗೆ ಆಕರ್ಷನೀಯ ರೈಲು ಬೋಗಿ ಮಾದರಿ ಬಣ್ಣ ಬಳಿಯಲಾಗಿದೆ – ಪುತ್ತುಕುಂಞಿ ಎಸ್‌ಡಿಎಂಸಿ ಅಧ್ಯಕ್ಷರು ಸ.ಕಿ.ಪ್ರಾ.ಶಾಲೆ ಮೀನಾಡಿ

ಶಾಲೆಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಕೇರಳ ಶಾಲೆಯೊಂದಕ್ಕೆ ರೈಲು ಬೋಗಿ ಮಾದರಿ ಬಣ್ಣ ಹಾಕಿದ ಬಗ್ಗೆ ಫೇಸ್‌ಬುಕ್‌ನಲ್ಲಿ ತಿಳಿದು, ನಮ್ಮ ಮೀನಾಡಿ ಶಾಲೆಗೂ ಅದೇ ಮಾದರಿಯ ಯೋಜನೆ ರೂಪಿಸಿ, ಮಕ್ಕಳನ್ನು ಸೆಳೆಯುವ ಪ್ರಯತ್ನ ನಡೆಸಲಾಗಿದೆ – ಗೋವಿಂದ ನಾಯಕ್  ಮುಖ್ಯ ಶಿಕ್ಷಕರು ಮೀನಾಡಿ ಶಾಲೆ

ಸಹಕಾರ ಅಗತ್ಯ;
ಈ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚಾಗಿದ್ದು, ಕಡುಬಡತನದಿಂದ ಕೂಲಿ ಕಾರ್ಮಿಕರಾಗಿದ್ದಾರೆ. ಇದೀಗ ಶಾಲೆಗೆ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು, ಮೊದಲನೆ ಹಂತದಲ್ಲಿ ಶಾಲೆಯನ್ನು ಅಭಿವೃಧ್ಧಿ ಜತೆಗೆ ಆಕರ್ಷಕಗೊಳಿಸಲಾಗಿದೆ.ವಿದ್ಯಾಭಿಮಾನಿಗಗಳು ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕಿದೆ – ಮಂಜುನಾಥ ಭಂಡಾರಿ ಗೌರವಾಧ್ಯಕ್ಷರು ವಜ್ರಮಹೋತ್ಸವ ಸಮಿತಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.