HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ನೂಜಿಬಾಳ್ತಿಲದಲ್ಲಿ ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಕಡಬ: ನೂಜಿಬಾಳ್ತಿಲದಲ್ಲಿ ಬಿ ಜೆ ಪಿ ಕುಟುಂಬ ಮಿಲನ ಕಾರ್ಯಕ್ರಮ ಇತ್ತೀಚೆಗೆ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹರೀಶ್ ನಡುವಳಿಕೆರವರ ಮನೆಯಲ್ಲಿ ನಡೆಯಿತು.

ತಾಲೂಕು ಬಿಜೆಪಿ ಉಸ್ತುವಾರಿಯಾಗಿರುವ ಗುತ್ತಿಗಾರು ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ತಿಮ್ಮಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲರೂ ಮೋದಿಯವರ ಪರಿಕಲ್ಪನೆಯಂತೆ ಪ್ರತಿ ಗ್ರಾಮಗಳಲ್ಲಿ ಬಿಜೆಪಿಯಿಂದ ಕುಟುಂಬ ಮಿಲನ ಕಾರ್ಯಕ್ರಮ ನಡೆಸಲಾಗುತ್ತಿದ್ದು ನಾವೆಲ್ಲರೂ ಒಂದೇ ಕುಟುಂಬದವರಂತೆ ಸಹೋದರತೆಯಿಂದ ಈ ಊರಿನ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ವಿನಂತಿಸಿದ್ದಲ್ಲದೆ ಒಟ್ಟಾಗಿ ಕೆಲಸ ಮಾಡುವ ಮೂಲಕ ಪ್ರತಿ ಗ್ರಾಮಪಂಚಾಯಿತಿಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಿಸಬೇಕೆಂದರು. ಜಿಲ್ಲಾ ಬಿಜೆಪಿ ಮುಖಂಡ ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಮಾತನಾಡಿ ಬಿಜೆಪಿ ಪಕ್ಷದ ಸಿದ್ಧಾಂತ ಮತ್ತು ಜನಪರ ಕಾಳಜಿಯಿಂದ ಗ್ರಾಮ ಮಟ್ಟದಿಂದಲೇ ಪಕ್ಷ ಸಂಘಟನೆಯ ಮೂಲಕ ಜನಪರ ಕಾಳಜಿಯಿಂದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದು ಮತದಾರರು ನಮ್ಮ ಪಕ್ಷದ ಬಗ್ಗೆ ಅತ್ಯಂತ ಒಲವು ತೋರುತ್ತಿದ್ದಾರೆ. ಈಗ ಪ್ರಧಾನಿಯವರ ಮಹತ್ ಯೋಜನೆ ಕುಟುಂಬ ಮಿಲನ ಕಾರ್ಯಕ್ರಮದ ಮೂಲಕ ಎಲ್ಲರನ್ನು ಒಟ್ಟಾಗಿಸಿಕೊಂಡು ಶ್ರಮಿಸಲಾಗುವುದು ಎಂದರು.

ಕಡಬ ಮಹಾಶಕ್ತಿ ಕೇಂದ್ರ ದ ಅದ್ಯಕ್ಷ ಗಿರಿಶ್ ಎ ಪಿ ಅದ್ಯಕ್ಷ ತೆ ವಹಿಸಿದ್ದರು ಸುಳ್ಯ ಮಂಡಲ ಉಪಾದ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಯನ್ ಕೆ ಸುಳ್ಯ ಮಂಡಲ ಸದಸ್ಯ ನೂಜಿಬಾಳ್ತಿಲ ರೆಂಜಿಲಾಡಿ ಬಿ ಜೆ ಪಿ ಉಸ್ತುವಾರಿ ಚಂದ್ರ ಶೇಖರ ಹಳೆನೂಜಿ ಸುಳ್ಯ ಮಂಡಲ ಸದಸ್ಯ ಮರ್ದಾಳ ಉಸ್ತುವಾರಿ ಉಮೇಶ್ ಶೆಟ್ಟಿ ಸಾಯಿರಾಂ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದರು. ಕಡಬ ಸಿ ಎ ಬ್ಯಾಂಕ್ ನಿರ್ದೇಶಕ ರಾದ ಹರೀಶ್ ಚಂದ್ರ ಪೂಜಾರಿ ನಡುವಾಲ್ ಚಂದ್ರಾವತಿ ಎಳುವಾಲೆ ಸುಳ್ಯ ಮಂಡಲ ಯುವ ಮೋರ್ಚಾ ಉಪಾದ್ಯಕ್ಷ ಉಮೇಶ್ ಸಾಕೊಟೆಜಾಲು ಸುಳ್ಯ ಮಂಡಲ ಯುವ ಮೋರ್ಚಾ ಸದಸ್ಯ ಅನಿಲ್ ಕೆರ್ನಡ್ಕ ಹಿರಿಯ ಬಿಜೆಪಿ ಮುಖಂಡ ಮೋನಪ್ಪ ಗೌಡ ಅರಿಮಜಲು ಮೊದಲಾದ ವರು ಉಪಸ್ಥಿತರಿದ್ದರು ನೂಜಿಬಾಳ್ತಿಲ ಬಿಜೆ ಪಿ ಕಾರ್ಯ ದರ್ಶಿ ಲತೀಶ್ ಕಂಪ ಸ್ವಾಗತಿಸಿ ಹಿರಿಯ ಸದಸ್ಯ ಕುಶಾಲಪ್ಪ ಗೌಡ ನಡುವಳಿಕೆ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.