HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು ಜಗದೀಶ್ ಆಚಾರ್ಯರ ಆಂಜನೇಯ ಸ್ವಾಮಿಯ ಭಕ್ತಿಗೀತೆ ವಿಡಿಯೋ ಆಲ್ಬಮ್ ಸಾಂಗ್ ಆಸ್ಟ್ರೇಲಿಯಾದಲ್ಲಿ ಬಿಡುಗಡೆ – ಪ್ರೇಕ್ಷಕರಿಂದ ಮೆಚ್ಚುಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಕ್ತಿ ಸಂಗೀತ ಲೋಕದಲ್ಲಿ ಪುತ್ತೂರಿನ ಕೀರ್ತಿಗೆ ಕಾರಣಿಭೂತರಾಗಿರುವ ಪುತ್ತೂರಿನ ಜಗದೀಶ್ ಆಚಾರ್ಯ ಅವರ ನೂತನ ಭಕ್ತಿಗೀತೆ ಪ್ರದಾನವಾದ ವಿಡಿಯೋ ಆಲ್ಬಮ್ ಸಾಂಗ್ ಅ.18ರಂದು ಆಸ್ಟ್ರೇಲಿಯಾದ ಸಿಡ್ನಿ ವೆಂಕಟಕೃಷ್ಣ ವೃಂದಾವನದಲ್ಲಿ ಬಿಡುಡೆಗೊಂಡಿದೆ.

 

ಜಗದೀಶ್ ಆಚಾರ್ಯ ಅವರು ನಿರ್ದೇಶಿಸಿ, ಸಂಗೀತ ನಿರ್ದೇಶನ ಮತ್ತು ಗಾಯನದೊಂದಿಗೆ ಶ್ರೀ ಕ್ಷೇತ್ರ ವಜ್ರದೇಹಿ ಪ್ರಸಾದ ಧ್ವನಿಸುರುಳಿಯಲ್ಲಿ ಮೂಡಿ ಬಂದ ಆಂಜನೇಯ ಸ್ವಾಮಿ ಸತತ ಭಜನಾ ನಿರತ ಭಕ್ತಿಗೀತೆ ವಿಡಿಯೋ ಆಲ್ಬಮ್ ಬಿಡುಗಡೆಯ ಕೆಲವೇ ಗಂಟೆಗಳಲ್ಲಿ ಯೂ ಟ್ಯೂಬ್‌ನಲ್ಲಿ ಸಾವಿರಾರರು ಮಂದಿ ವೀಕ್ಷಿಸಿ ಲೈಕ್ ಕೊಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಾಡಿನ ಚಿತ್ರೀಕರಣ ಕಾರಿಂಜದಲ್ಲಿ ಮಾಡಿದ್ದು, ಭಕ್ತಿ ಪ್ರದಾನವಾದ ಆಲ್ಬಮ್‌ನಲ್ಲಿ ಬೇಬಿ ಚೈತನ್ಯ ಬಿ ಎನ ಉರುವಲು(ರಾಮ), ಲಾಸ್ಯ ಎಕ್ಕೂರು ಮಂಗಳೂರು(ಬಾಲ ಹನುಮಂತ), ನಿಶ್ಮಾ ಎಸ್ ಶೆಟ್ಟಿ ಮಂಗಳೂರು(ಸೀತೆ), ಚುಕ್ಕಿ ವಿಟ್ಲ (ಲಕ್ಷ್ಮಣ), ತ್ರಿಶೂಲ್ ಪಿ ಹೆಗ್ಡೆ ಮೂಡಬಿದ್ರೆ(ಹನುಮಂತ) ಮತ್ತು ಪುಟಾಣಿ ಮಕ್ಕಳು ಪಾತ್ರವಹಿಸಿದ್ದಾರೆ.

ಅರುಣ್ ರೈ ಮತ್ತು ವಗ್ಗ ನಾಗೇಶ್ ಅವರ ಕ್ಯಾಮರಾ ಕೈ ಚಲಕ, ಜೆ.ಪಿ ಬಂದ್ಯೋಡ್ ಅವರು ಸಂಕಲನ, ಪ್ರೇಮ್ ರಾಜ್ ಆರ್ಲಪದವು ವಸ್ತ್ರವಿನ್ಯಾಸ ಕಲೆಯಲ್ಲಿ ಸಹಕರಿಸಿದ್ದಾರೆ. ಜಗದೀಶ್ ಆಚಾರ್ಯ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪುರಸ್ಕೃತ, ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಹಾಡು ಕರ್ನಾಟಕ ಹಾಡು ಖ್ಯಾತಿಯನ್ನು ಪಡೆದಿದ್ದರು.

ವಿಡಿಯೋ ಆಲ್ಬಮ್ ಸಾಂಗ್ ಯೂಟ್ಯೂಬ್ ಲಿಂಕ್‌ 

👇🏻

https://youtu.be/whlYjPLGV6M

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.