ಕಬಕ:ಕೊರೋನಾ ಜಾಗೃತಿ ಬೀದಿ ನಾಟಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಕೊರೋನಾ ಜಾಗೃತಿ ಬೀದಿ ನಾಟಕವು ಅ.೧೮ರಂದು ಕಬಕ ಪೇಟೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಗರ ಠಾಣಾ ಎ.ಎಸ್.ಐ ಬೆಳಿಯಪ್ಪ ಗೌಡ ಉದ್ಘಾಟಿಸಿ ಜನರಲ್ಲಿ ಕೊರೋನದ ಬಗ್ಗೆ ಜಾಗೃತಿ ಮೂಡಿಸುವು ಬೀದಿ ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿದ್ದ ಯೋಜನೆಯ ಮೇಲ್ವಚಾರಕಿ ಪಾವನ ಮಾತನಾಡಿ, ಕೊರೋನಾ ಮುಕ್ತ ಸಮಾಜ ನಿರ್ಮಾಣಲ್ಲಿ ನಮ್ಮೆಲ್ಲರ ಪಾತ್ರ ಬಹುಮುಖ್ಯ. ಅದರ ಕುರಿತಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಜನರಿಗೆ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸುವುದೇ ನಾಟಕದ ಉದ್ದೇಶವಾಗಿದೆ ಎಂದರು.

ತಾ.ಪಂ ಸದಸ್ಯೆ ದಿವ್ಯಾ ಪುರುಷೋತ್ತಮ ಅಧ್ಯಕ್ಷತೆ ವಹಿಸಿದ್ದರು. ಆಟೋ ರಿಕ್ಷಾ ಚಾಲಕ ಮ್ಹಾಲಕ ಸಂಘದ ಅಧ್ಯಕ್ಷ ಮೂಸೆ ಕುಂಞಿ, ಗೌರವಾಧ್ಯಕ್ಷ ಚಂದ್ರಶೇಖರ ಗೌಡ, ಕಬಕ ಗ್ರಾ.ಪಂ ಮಾಜಿ ಸದಸ್ಯ ಶಾಬಾ, ಕಿರಿಯ ಆರೋಗ್ಯ ಸಹಾಯಕಿ ಶೋಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ಪದ್ಮಾವತಿ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶೃತಿ ಸಾಂಸ್ಕೃತಿಕ ಕಲಾ ತಂಡದ ನಾಯಕ ವೆಂಕಟೇಶ್ ಬಳಗದವರಿಂದ ೧ ಗಂಟೆಗಳ ಕಾಲ ಬೀದಿ ನಾಟಕ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.