HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೃಷಿ ಮಸೂದೆ, ರೈತ ಉತ್ಪಾದಕ ಸಂಸ್ಥೆಗಳ ಪಾತ್ರದ ಬಗ್ಗೆ ವಿಚಾರಗೋಷ್ಟಿ

Puttur_Advt_NewsUnder_1
Puttur_Advt_NewsUnder_1
ನೂತನ ಕೃಷಿ ಮಸೂದೆಯಿಂದ ರೈತರ ಆರ್ಥಿಕತೆ ಸ್ಥಿರತೆ ಸಾಧ್ಯ- ಡಾ.ಶ್ರೀಪತಿ ಕಲ್ಲೂರಾಯ

ಪುತ್ತೂರು: ದೇಶದ ಕೃಷಿಕರ ಮೂಲಭೂತ ಸಮಸ್ಯೆಗಳ ಪರಿಹಾರ ಇದುವರೆಗೂ ಸಾಧ್ಯವಾಗಿಲ್ಲ. ದೇಶದ ಕೃಷಿ ವಿಸ್ತಾರವಾಗಿದೆ, ಆದರೆ ಅದೇ ಪ್ರಮಾಣದಲ್ಲಿ  ಕೃಷಿ ಜಿಡಿಪಿ ಏರಿಕೆಯಾಗಿಲ್ಲ, ಆದರೆ ವಿಸ್ತಾರ ಕಂಡಿದೆ.ಇದಕ್ಕೆ ಹಲವಾರು ಕಾರಣಗಳು ಇವೆ. ಆದರೆ ಈಗ ಬಂದಿರುವ ನೂತನ ಕೃಷಿ ಮಸೂದೆಯ ಮೂಲಕ ರೈತರ ಆರ್ಥಿಕ ಸ್ಥಿರತೆ ಸಾಧ್ಯವಿದೆ ಎಂದು ಹಿರಿಯ ಅರ್ಥಶಾಸ್ತ್ರಜ್ಞ ಡಾ.ಶ್ರೀಪತಿ ಕಲ್ಲೂರಾಯ ಹೇಳಿದರು.

ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ವತಿಯಿಂದ ಇಲ್ಲಿನ ಸಣ್ಣ ಕೈಗಾರಿಕಾ ಸಂಸ್ಥೆಯ ಹಾಲ್ ನಲ್ಲಿ ನಡೆದ ನೂತನ ಕೃಷಿ ಮಸೂದೆ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಎಂಬ ವಿಚಾರಗೋಷ್ಠಿಯಲ್ಲಿ  ಮಾತನಾಡಿದರು.ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೃಷಿ ಆರ್ಥಿಕತೆಯ ಪ್ರಗತಿ ಮತ್ತು ಬದಲಾವಣೆ ಹಾಗೂ ಈಗಿನ ಹೊಸ ಆಯಾಮಗಳನ್ನು ಅವರು ವಿವರಿಸಿದರು.
ಕೃಷಿ ಕಾನೂನುಗಳು ಸಾಮಾನ್ಯ ಕೃಷಿಕರಿಗೆ ಹೇಗೆ ಅನುಕೂಲ ಮತ್ತು ಸಂಘಟನಾತ್ಮಕ ವ್ಯವಸ್ಥೆಯ ಬಗ್ಗೆ ಭಾರತೀಯ ಕಿಸಾನ್‌ ಸಂಘದ ಪ್ರಾಂತ ಸಮಿತಿ ಸದಸ್ಯ ಸತ್ಯನಾರಾಯಣ ಉಡುಪ ಅವರು ಮಾತನಾಡಿ ವೈಜ್ಞಾನಿಕ ಕೃಷಿ ಪದ್ದತಿ ಇಂದು ಅಗತ್ಯವಾಗಿದೆ. ಅದರ ಜೊತೆಗೆ ಕೃಷಿ ಉತ್ಪಾದಕತೆ ಹೆಚ್ಚಳವಾಗಲು ರೈತ ಸ್ನೇಹಿಯಾದ ಕಾನೂನು ಅಗತ್ಯವಾಗಿದೆ ಎಂದರು.
ರೈತ ಉತ್ಪಾದಕ ಸಂಸ್ಥೆಯ ಕಾರ್ಯವ್ಯಾಪ್ತಿ, ಸವಾಲುಗಳ ಮತ್ತು ಸರಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮಕಿಶೋರ ಮಂಚಿ, ಕೃಷಿ ಮಸೂದೆಯು ಕೃಷಿಕರಿಗೆ ಹೇಗೆ ಪೂರಕ ಮತ್ತು ಅಭಿವೃದ್ಧಿಗೆ ಹೇಗೆ ಸಹಕಾರಿ ಎಂಬುದರ ಬಗ್ಗೆ  ಗ್ರಾಮಜನ್ಯ ಸಂಸ್ಥೆಯ ನಿರ್ದೇಶಕ ರಾಮಕೃಷ್ಣ ಭಟ್ ನೂತನ ಮಸೂದೆ ರೈತರಿಗೆ ಅನುಕೂಲಕರವಾದ ವಾತಾವರಣ  ಸೃಷ್ಟಿ ಮಾಡಲಿದೆ ಎಂದು ವಿವರಿಸಿದರು.
ಕೃಷಿ ಮಸೂದೆ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಅಗತ್ಯತೆ ಹಾಗೂ ರಚನೆಯ ಬಗ್ಗೆ ಕಂಪನಿ ಸೆಕ್ರೆಟರಿ  ವಿವೇಕ್ ಹೆಗಡೆ ಮಾತನಾಡಿದರು. ಮಹೇಶ್ ಪುಚ್ಚಪ್ಪಾಡಿ ವಿಚಾರಗೋಷ್ಠಿಯನ್ನು ನಡೆಸಿದರು. ಗ್ರಾಮಜನ್ಯದ ಸಲಹಾ ಮಂಡಳಿಯ ಸದಸ್ಯರುಗಳಾದ ನ್ಯಾಯವಾದಿ ಚಿದಾನಂದ ಬೈಲಾಡಿ ಮತ್ತು ಸಹಕಾರಿ ಧುರೀಣ ವಸಂತ ಕುಮಾರ್ ಪೆರ್ಲಂಪಾಡಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಗ್ರಾಮಜನ್ಯದ ನಿರ್ದೇಶಕರಾದ ಮೂಲಚಂದ್ರ ಕೆ.  ಸ್ವಾಗತಿಸಿದರು. ಗ್ರಾಮಜನ್ಯ ನಿರ್ದೇಶಕ ಯದುನಂದನ ಗ್ರಾಮಜನ್ಯದ ಕಾರ್ಯಪರಿಚಯನ್ನು ಮಾಡಿದರು. ಗ್ರಾಮಜನ್ಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್‌ ವಂದಿಸಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.