HomePage_Banner
HomePage_Banner
HomePage_Banner

ವಿಟ್ಲದಲ್ಲಿ ಬೆಂಕಿ ಅವಘಡ | ಹಾರ್ಡ್‌ವೇರ್, ಬೇಕರಿ ಬೆಂಕಿಗಾಹುತಿ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಸಮೀಪವಿರುವ ಕೆ.ಜೆ. ಟವರ್ಸ್ ನ ಎರಡು ಅಂಗಡಿ ಬೆಂಕಿಗಾಹುತಿಯಾದ ಘಟನೆ ಅ.20ರಂದು ಮುಂಜಾನೆ ವೇಳೆ ನಡೆದಿದೆ.
 

ಆರಂಭದಲ್ಲಿ ಪಿ.ಎಂ.ಹಾರ್ಡ್ ವೇರ್ & ಅಗ್ರೋ ಸಪ್ಲಾಯರ್ಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಅಂಗಡಿ ಮಾಲಕರಿಗೆ ಮಾಹಿತಿ ನೀಡಿದರು ಮಾತ್ರವಲ್ಲದೆ ಬೆಂಕಿ ನಂದಿಸುವ ಪ್ರಯತ್ನವನ್ನು ಮಾಡಿದ್ದರು. ಆದರೆ ಬೆಂಕಿ ಕಡಿಮೆಯಾಗದೆ ಪಕ್ಕದಲ್ಲಿದ್ದ ಬೇಕರಿಗೂ ಆವರಿಸಿತ್ತು.


ಬಳಿಕ ನಾಗರಿಕರು ಅಗ್ನಿ ಶಾಮಕದಳದವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸಿದ್ದಾರೆ. ಘಟನೆಯಿಂದಾಗಿ ಎರಡೂ ಅಂಗಡಿಗಳೂ ಸುಟ್ಟು ಕರಕಲಾಗಿದೆ.

ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.