HomePage_Banner
HomePage_Banner
HomePage_Banner

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಗಾಗಿ ಯೋಗಾಸನ ತರಬೇತಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಗಾಗಿ ಯೋಗಾಸನ ತರಬೇತಿ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದಯೋಗ ಶಿಕ್ಷಕ ಚಂದ್ರಶೇಖರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ ಯೋಗ ಎಂಬುದು ನಮ್ಮ ಜ್ಞಾನದ ಅಭಿವೃದ್ಧಿಗೆ ಪೂರಕಾವಾದಕ್ರಿಯೆ. ಯೋಗದಿಂದ ಏಕಾಗ್ರತೆ ಹೆಚ್ಚುವುದಲ್ಲದೆ ನಮ್ಮ ಮಾನಸಿಕ ಮತ್ತು ದೈಹಿಕ ಕ್ಷಮತೆ ಅಭಿವೃದ್ಧಿಯಾಗುತ್ತದೆ. ದೇಹದಲ್ಲಿರುವ ಸ್ನಾಯುಗಳು ಬಲವರ್ಧನೆಯಾಗಲು ಯೋಗ ಸಹಕಾರಿ.

ಚಂಚಲ ಮನಸ್ಸನ್ನು ಪ್ರಯತ್ನ ಪೂರ್ವಕವಾಗಿ ಒಂದೆಡೆಗೆ ತರಲು ಯೋಗವನ್ನು ಪ್ರತಿಯೊಬ್ಬರು ದಿನಂಪ್ರತಿ ಮಾಡಬೇಕು. ಇದರಿಂದ ಏಕಾಗ್ರತೆ ಬರುವುದರೊಂದಿಗೆ ಮನಸ್ಸನ್ನು ತಿಳಿಯಾಗಿರಿಸಲು ಸಾಧ್ಯ ಪರಿಪೂರ್ಣ ಜೀವನಕ್ಕೆಯೋಗ ಅತ್ಯಗತ್ಯ. ಯೋಗ ಸಂಸ್ಕೃತಿಯನ್ನು ಜಾಗೃತ ಪಡಿಸುವದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ನಂತರ ಉಪನ್ಯಾಸಕರಿಗೆ ವಿವಿಧ ಆಸನಗಳನ್ನು ಪ್ರದರ್ಶಿಸಿ ಅವುಗಳ ಪ್ರಾಮುಖ್ಯತೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ಸಂಸ್ಕೃತ ವಿಭಾಗದಉಪನ್ಯಾಸಕಜಯಗೋವಿಂದ ಶರ್ಮಾಕಾರ್ಯಕ್ರಮವನ್ನು ನಿರೂಪಿಸಿದರು.ಒಟ್ಟು ಮೂರು ದಿನ ಕಾಲೇಜಿನ ಸಭಾಂಗಣದಲ್ಲಿ ಯೋಗಾಭ್ಯಾಸ ಕಾರ್ಯಕ್ರಮವು ನಡೆಯಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.