HomePage_Banner
HomePage_Banner
HomePage_Banner

ನಗರಸಭೆ ವಿವಿಧ ನಿಧಿಯಡಿ ಫಲಾನುಭವಿಗಳಿಂದ ಅರ್ಜಿ ಆಹ್ವಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಸಭೆಯ ಶೇ.24.10 ರಲ್ಲಿ ಪ.ಜಾತಿ, ಪ.ಪಂಗಡದ ಬಡ ಜನರಿಗೆ, ಶೇ. 7.25ರ ನಿಧಿಯಡಿ ಇತರ ಜಾತಿಯವರಿಗೆ ಮತ್ತು ಶೇ.೫ರಲ್ಲಿ ವಿಕಲ ಚೇತನರಿಗೆ ವಿವಿಧ ಸವಲತ್ತುಗಳಿಗಾಗಿ ಸಹಾಯಧನ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದ್ದಾರೆ.

ಶೇ.24.10ರ ನಿಧಿಯಡಿಯಲ್ಲಿ ಮನೆ ದುರಸ್ಥಿಗಾಗಿ, ವೈದ್ಯಕೀಯ ನೆರವು, ನಳ್ಳಿ ನೀರಿನ ಜೋಡಣೆ, ಶೌಚಾಲಯ ರಚನೆಗೆ, ವಿದ್ಯುತ್ ಜೋಡಣೆಗೆ, ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ, ಶೇ. 7.25 ನಿಧಿಯಡಿಯಲ್ಲಿ ಮನೆ ದುರಸ್ಥಿ, ವೈದ್ಯಕೀಯ ಸಹಾಯಧನ ಮತ್ತು ಶೇ.೫ ನಿಧಿಯಡಿಯಲ್ಲಿ ವಿಕಲ ಚೇತನರಿಗೆ ಪೋಷಣ ಭತ್ಯೆ ನೀಡಲಾಗುವುದು. ಅರ್ಹ ಫಲಾನುಭವಿಗಳು 7 ದಿನಗಳ ಒಳಗಾಗಿ ಅರ್ಜಿಯನ್ನು ನಗರಸಭೆ ಕಚೇರಿಗೆ ನೀಡಬೇಕು. ಅರ್ಜಿಯ ನಮೂನೆ ಮತ್ತು ಅರ್ಜಿಯ ಜೊತೆಗೆ ದಾಖಲಿಸಬೇಕಾದ ದಾಖಲೆಗಳ ಕುರಿತು ನಗರಸಭಾ ಕಚೇರಿಯ ಬಡತನ ನಿರ್ಮೂಲನ ಕೋಶ ಕಚೇರಿ ವೇಳೆಯಲ್ಲಿ ಸಂಪರ್ಕಸಬೇಕೆಂದು ಅವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.