HomePage_Banner
HomePage_Banner
HomePage_Banner

ಅ.22: ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 10ನೇ ಶಾಖೆ | ಮೆಲ್ಕಾರ್ ಜನಾರ್ದನ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದಕ್ಷಿಣ ಕನ್ನಡ ಉಡುಪಿ, ಕೊಡಗು ಚಿಕ್ಕಮಂಗಳೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ೧೦ ನೇ ಶಾಖೆಯು ಮೆಲ್ಕಾರ್-ಪಾಣೆ ಮಂಗಳೂರು ಜನಾರ್ದನ ಕಾಂಪ್ಲೆಕ್ಸ್‌ನಲ್ಲಿ ಅ.22ರಂದು ಉದ್ಘಾಟನೆಗೊಳ್ಳಲಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಮುಜರಾಯಿ, ಮೀನುಗಾರಿಕೆ ಹಾಗೂ ಬಂದರುಗಳು ಮತ್ತುಒಳನಾಡು ಜಲ ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನೂತನ ಶಾಖಾ ಕಚೇರಿಯನ್ನು ಉದ್ಘಾಟಿಸಲಿರುವರು. ಶ್ರೀ ಕ್ಷೇತ್ರ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳವರು ದೀಪೋಜ್ವಲನ ಮಾಡಲಿರುವರು. ಕುಂಬಾರಿಕೆ ಮಾರಾಟ ಮಳಿಗೆ ಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿರುವರು. ಭದ್ರತಾ ಕೋಣೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇವರು ಉಧ್ಟಾಟಿಸಲಿರುವರು. ಗಣಕಯಂತ್ರವನ್ನು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಇವರು ಉದ್ಘಾಟಿಸಲಿರುವರು. ಶಾಖೆಯ ಪ್ರಥಮ ಠೇವಣಿ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಅದ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಇವರು ಬಿಡುಗಡೆಗೊಳಿಸಲಿರುವರು. ಅದೇ ರೀತಿ ಪಾಲು ಪ್ರಮಾಣ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಉಪಾದ್ಯಕ್ಷೆ ಕಸ್ತೂರಿ ಪಂಜ ಇವರು ಬಿಡುಗಡೆಗೊಳಿಸಲಿರುವರು. ಮುಖ್ಯ ಅಥಿತಿಗಳಾಗಿ ಮೈಸೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್ ರಾವ್, ಮೆಸ್ಕಾ ನ ಮುಖ್ಯ ಅಭಿಯಂತರ ಮಂಜಪ್ಪ , ಬಿರ್ವ ಸೆಂಟರ್ ಮೆಲ್ಕಾರು ಇದರ ಮಾಲಕ ಸಂಜೀವ ಪೂಜಾರಿ, ಪುರಸಭೆ ಬಂಟ್ವಾಳ ಇದರ ಸದಸ್ಯರಾದ ಗಾಯತ್ರಿ ಪ್ರಕಾಶ್, ಜೆಸಿಂತಾ ಡಿ ಸೋಜಾ, ಅಬುಬಕ್ಕರ್ ಸಿದ್ದೀಕ್, ಕ್ಷೇತ್ರ ಪಣೋಲಿಬೈಲು ಇದರ ಪ್ರಧಾನ ಅರ್ಚಕ ರಮೋಶ ಮೂಲ್ಯ, ಕುಲಾಲ ಸಂಘ ಬಂಟ್ವಾಳ ಇದರ ಅಧ್ಯಕ್ಷೆ ಜಯಂತಿ ಟೀಚರ್, ಮೆಲ್ಕಾರ್‌ನ ಜನಾರ್ದನ ಕಾಂಪ್ಲೆಕ್ಸ್‌ನ ಮಾಲಕ ಜಗನ್ನಾಥ ಪೈ, ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ಇದರ ಅಧ್ಯಕ್ಷ ಸತೀಶ್ ಜಕ್ರಿಬೆಟ್ಟು ಇವರು ಭಾಗವಹಿಸಲಿರುವರು ಎಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ತಿಳಿಸಿದ್ದಾರೆ. ಸಹಕಾರ ಸಂಘವು ಗ್ರಾಮೀಣ ಜನರ ಅಭಿವೃದ್ದಿಗೆ ಸಹಕಾರಿಯಾಗುವಂತೆ ಕಾರ್ಯಯೋಜನೆಯನ್ನು ಹಾಕಿ ದುಡಿಯುತ್ತಿದ್ದು, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ ಅವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.