HomePage_Banner
HomePage_Banner
HomePage_Banner

ಮರಿಕೆ ಸಾವಯವ ಮಳಿಗೆಯಲ್ಲಿ ಗ್ರಾಮರಾಜ್ಯ ಉತ್ಪನ್ನಗಳ ವಿಸ್ತೃತ ಮಳಿಗೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು : ಕಳೆದ ಮೂರು ವರುಷಗಳಿಂದ ಸಾವಯವ ಉತ್ಪನ್ನಗಳನ್ನು ಪುತ್ತೂರಿನ ಜನತೆಗೆ ಒದಗಿಸುತ್ತಿರುವ ಏಳ್ಮುಡಿಯ ಮರಿಕೆ ಸಾವಯವ ಮಳಿಗೆಯಲ್ಲಿ, ಹೊಸನಗರ ಶ್ರೀರಾಮಚಂದ್ರಾಪುರ ಮಠದ ಅಧೀನ ಸಂಸ್ಥೆ ಗ್ರಾಮರಾಜ್ಯದ ಉತ್ಪನ್ನಗಳ ಶ್ರೇಣಿಯ ವಿಸ್ತೃತ ಮಳಿಗೆ ಅ.21ರಂದು ಶುಭಾರಂಭಗೊಂಡಿತು. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಳಿಗೆಯನ್ನು ಉದ್ಘಾಟಿಸಿದರು.

ಮರಿಕೆ ಸಾವಯವ ಮಳಿಗೆಯಲ್ಲಿ ಗ್ರಾಮರಾಜ್ಯ ಉತ್ಪನ್ನಗಳ ವಿಸ್ಕೃತ ಮಳಿಗೆ ಉದ್ಘಾಟಿಸಿ ಮಾತನಾಡಿ “ಸಾವಯವ ನಮ್ಮ ಸಂಸ್ಕೃತಿಯಲ್ಲಿ, ವೇದಗಳಲ್ಲಿ, ಋಷಿಮುನಿಗಳು ಕಲಿಸಿಕೊಟ್ಟ ಪದ್ಧತಿ. ಇದರಿಂದಾಗಿ ನಮ್ಮ ಆರೋಗ್ಯ, ಮನಸ್ಸು, ದೇಹ ಪರಿಸ್ಥಿತಿ ಉತ್ತಮವಾಗಿರುತ್ತೆ. ಕಾಲಾನುಭಾಗವಾಗಿ ಇದೀಗ ವ್ಯತ್ಯಾಸವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯದ ದೃಷ್ಠಿಯಿಂದ ಪುತ್ತೂರಿನಲ್ಲಿ ಗ್ರಾಮರಾಜ್ಯ ಮಳಿಗೆಯ ಕಲ್ಪನೆ ಹಿತಕರವಾಗಿದೆ. ಸಾವಯವ ಉತ್ಪನ್ನ ಬಳಕೆಯಿಂದ ಭವಿಷ್ಯದ ಜನಾಂಗ ಉತ್ತಮ ರೀತಿಯಲ್ಲಿ ಆರೋಗ್ಯದಿಂದರಲು ಸಾಧ್ಯ. ಹಾಗಾಗಿ ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕಿದೆ‌. ಈ ಪ್ರಕ್ರಿಯೆ ನಮ್ಮಿಂದ ಸಮಾಜದಿಂದ ಆಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 
ಮುಳಿಯ ಜ್ಯುವೆಲ್ಲರ್ಸ್‍ನ ಎಂ.ಡಿ ಕೃಷ್ಣ ನಾರಾಯಣ ಮುಳಿಯ ಮಾತನಾಡಿ ರಾಸಾಯನಿಕದ ಮಧ್ಯೆ ಸಹಜ ಕೃಷಿ ಮರೆಯಾಗಿದೆ.ರಾಸಾಯನಿಕದಲ್ಲಿ ಖರ್ಚು ಕಮ್ಮಿಯಾದ್ರಿಂದ ಬೆಲೆಯೂ ಕಮ್ಮಿ ಆದರೆ ಸಾವಯವ ಆಹಾರ ಪದಾರ್ಥಗಳ ಬೆಲೆ ಹೆಚ್ಚಿದ್ದರೂ ಆರೋಗ್ಯವುತವಾದ ಆಹಾರ ಲಭ್ಯ.ಪುತ್ತೂರಿನಲ್ಲಿ ಅತ್ಯುತ್ತಮ ಪ್ರಾಡಕ್ಟ್ ಗಳಿಗೆ ಮರಿಕೆ ಸಾವಯವ ಮಳಿಗೆ ಪ್ರಸಿದ್ದಿ ಪಡೆದಿದೆ ಸಂಸ್ಥೆಯು ಹೆಚ್ಚಿನ ಪ್ರಸಿದ್ದಿ ಪಡೆಯಲಿ ಎಂದರು. ಪುತ್ತೂರು ಜೆ.ಸಿ.ಐ ಅಧ್ಯಕ್ಷ ವೇಣುಗೋಪಾಲ್ ಎಸ್.ಜೆ, ಗ್ರಾಮರಾಜ್ಯದ ಸಂಯೊಜಕ ಕೃಷ್ಣ ಪ್ರಸಾದ್ ಅಮ್ಮಂಕಲ್ ಮಾತನಾಡಿ ಶುಭ ಹಾರೈಸಿದ್ರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಹವ್ಯಕ ಮಂಡಲ ಅಧ್ಯಕ್ಷ ಹೇರಂಭ ಶಾಸ್ತ್ರಿ, ಪುತ್ತೂರು ವಲಯ ಅಧ್ಯಕ್ಷ ಈಶ್ವರ ಭಟ್ ಪುಳು, ಅಡಿಕೆ ಪತ್ರಿಕೆ ಉಪಸಂಪಾದಕ ನಾ.ಕಾರಂತ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಸುಹಾಸ್ ಮರಿಕೆ ಸ್ವಾಗತಿಸಿ,ಕೃಷಿಕ ಎ.ಪಿ ಸದಾಶಿವ ವಂದಿಸಿದರು. ಶಿವಸುಬ್ರಹ್ಮಣ್ಯ ಪೆಲತ್ತಡ್ಕ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.