HomePage_Banner
HomePage_Banner
HomePage_Banner

ಕೋಡಿಂಬಾಡಿ: ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿರುವ ಪ್ರಕರಣ – ಸುದ್ದಿ ವೆಬ್ ವರದಿಗೆ ತಕ್ಷಣವೇ ಸ್ಪಂದಿಸಿದ ಗ್ರಾ.ಪಂ

Puttur_Advt_NewsUnder_1
Puttur_Advt_NewsUnder_1
  • ಆಡಳಿತಾಧಿಕಾರಿ, ಪಿಡಿಓ ನಡೆಗೆ ಗ್ರಾಮಸ್ಥರ ಪ್ರಶಂಸೆ

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿರುವ ಕೋಡಿಂಬಾಡಿಯ ರಸ್ತೆ ಬದಿಯಲ್ಲಿ ಕಿಡಿಗೇಡಿಗಳು ಕಸ ಎಸೆದು ಹೋಗುತ್ತಿರುವ ಘಟನೆ ನಡೆಯುತ್ತಿರುವ ಬಗ್ಗೆ ಸುದ್ದಿ ವೆಬ್ ಸೈಟ್ ನಲ್ಲಿ ಅ.21ರಂದು ವರದಿ ಪ್ರಕಟಗೊಂಡ ತಕ್ಷಣವೇ ಕೋಡಿಂಬಾಡಿ ಗ್ರಾಮ ಪಂಚಾಯತ್ ಸ್ಪಂದಿಸಿದೆ. ರಸ್ತೆ ಬದಿಯಲ್ಲಿದ್ದ ಕಸಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿರುವ ಗ್ರಾ.ಪಂ. ಆಡಳಿತಾಧಿಕಾರಿ ಸಿ.ಲೋಕೇಶ್ ಮತ್ತು ಪಿಡಿಓ ಚಿತ್ರಾವತಿರವರು ಇನ್ನು ಮುಂದೆ ಇಂತಹ ಕೃತ್ಯ ಎಸಗುವವರ ಬಗ್ಗೆ ನಿಗಾ ಇರಿಸಿ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಸ್ವಚ್ಛ ಮಾಡಿರುವುದು

ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿ ಪಕ್ಕದಲ್ಲಿಯೇ ಇರುವ ಬಾರಿಕೆ, ಅರ್ಬಿ, ಕಾಪು ಮತ್ತು ಸೇಡಿಯಾಪು ಪರಿಸರದಲ್ಲಿ ರಸ್ತೆ ಪಕ್ಕ ಹಲವು ದಿನಗಳಿಂದ ಹೊರ ಪ್ರದೇಶದಿಂದ ಬಂದವರು ತ್ಯಾಜ್ಯ ಎಸೆದು ಪರಾರಿಯಾಗುತ್ತಿದ್ದಾರೆ. ಕೋಳಿ, ತರಕಾರಿ ತ್ಯಾಜ್ಯ, ಕಸ ಕಡ್ಡಿಗಳನ್ನು ಇಲ್ಲಿ ಎಸೆಯಲಾಗುತ್ತಿದ್ದು ಸ್ವಚ್ಛತಾ ಆಂದೋಲನವನ್ನು ಅಣಕಿಸುವಂತಾಗಿದೆ. ಈ ರೀತಿ ಕಸ ಎಸೆಯಲಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಎದುರಾಗಿದೆ. ನಿರಂತರವಾಗಿ ಕಸ ಎಸೆಯುತ್ತಿರುವುದರ ಬಗ್ಗೆ ಬೇಸತ್ತಿರುವ ಸ್ಥಳೀಯ ನಿವಾಸಿ ರಮೇಶ್ ನಾಯಕ್ ಕಾಪುರವರು ರಸ್ತೆ ಬದಿಯಲ್ಲಿ ಕಸ ಎಸೆಯಬೇಡಿ ಎಂದು ರಸ್ತೆಯ ಬದಿ ಬೋರ್ಡ್ ಅಳವಡಿಸಿದ್ದಾರೆ. ಆದರೂ ಕಸ ಎಸೆಯುವವರು ತಮ್ಮ ಕಾನೂನು ಬಾಹಿರ ಕಾಯಕ ಮುಂದುವರಿಸಿದ್ದಾರೆ. ಆದ್ದರಿಂದ ಸ್ಥಳೀಯಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ವ್ಯಕ್ತವಾಗಿದೆ‌ ಎಂದು ಸುದ್ದಿ ವೆಬ್ ಸೈಟ್ ನಲ್ಲಿ ವರದಿ ಪ್ರಕಟಗೊಂಡಿತ್ತು.‌ತಕ್ಷಣವೇ ಗ್ರಾಮ‌ ಪಂಚಾಯತ್ ಸ್ಪಂದಿಸಿದ್ದು ಪರಿಸರವನ್ನು ಸ್ವಚ್ಛಗೊಳಿಸಿದೆ. ಆಡಳಿತಾಧಿಕಾರಿ, ಪಿಡಿಓ ಮತ್ತು ಸಿಬ್ಬಂದಿಗಳ ಸಕಾಲಿಕ ಸ್ಪಂದನಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮೊದಲು ಇದ್ದ ಕಸದ ರಾಶಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.