HomePage_Banner
HomePage_Banner
HomePage_Banner

ವಿಟ್ಲ: ಹಾರ್ಡ್ ವೇರ್ ಅಂಗಡಿಯಲ್ಲಿ ನಡೆದ  ಕಳವು ಪ್ರಕರಣ: ಆರೋಪಿಯ ಬಂಧನ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ವಿಟ್ಲ ಕಸಬಾ ಗ್ರಾಮದ ಮಾರ್ನಮಿಗುಡ್ಡೆ ಎಂಬಲ್ಲಿರುವ ಹಾರ್ಡ್ ವೇರ್ ಅಂಗಡಿಯಲ್ಲಿ ನಡೆದ  ಕಳವು ಪ್ರಕರಣದ ಆರೋಪಿಯನ್ನು ಘಟನೆ ನಡೆದ  ತಕ್ಷಣವೇ  ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಬಜ್ಪೆ ಕೊಂಚಾರು ನಿವಾಸಿ ಮಹಮ್ಮದ್ ರಫೀಕ್ ಬಂಧಿತ ಆರೋಪಿ.

ವಿಟ್ಲ ಕಸಬ ಗ್ರಾಮದ ಮಾರ್ನಮಿಗುಡ್ಡೆ ಚರ್ಚ ಬಳಿ ಇರುವ ರಾಕೇಶ್ ಶೆಟ್ಟಿ ಅವರ  ರಿಧ್ವಿ ಹಾರ್ಡವೇರ್‌ ಅಂಗಡಿಗೆ ದ್ವಿಚಕ್ರದಲ್ಲಿ ಬಂದ ಅಪರಿಚಿತ ವ್ಯಕ್ತಿ ಅಂಗಡಿಯ ಡ್ರಾವರ್ ನಲ್ಲಿದ್ದ 17 ಸಾವಿರ ರೂಪಾಯಿ ನಗದನ್ನು ಕಳವುಗೈದಿದ್ದ.  ಅಂಗಡಿ ಮಾಲಕರು ಸ್ಥಳಕ್ಕೆ ಬರುತ್ತಿದ್ದಂತೆ  ಆರೋಪಿ ತನ್ನ ವಾಹನದಲ್ಲಿ ಪರಾರಿಯಾಗಿದ್ದ.  ಈ ಬಗ್ಗೆ ಅಂಗಡಿ‌ಮಾಲಕರು ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ  ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ  ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದು, ಆತನ ಬಳಿ ಆ ಮಾಧ್ಯಮದ ಐಡಿ ಕಾರ್ಡ್ ಪತ್ತೆಯಾಗಿದೆ‌ ಎಂದು ಪೊಲೀಸರು‌ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.