HomePage_Banner
HomePage_Banner
HomePage_Banner

ಮಹಿಳಾ ಶಿಕ್ಷಣಕ್ಕೆ ಕುಂಬ್ರ ಮರ್ಕಝ್‌ನಿಂದ ಅಮೂಲ್ಯ ಕೊಡುಗೆ: ಉಜಿರೆ ತಂಙಳ್

Puttur_Advt_NewsUnder_1
Puttur_Advt_NewsUnder_1
  • ಕುಂಬ್ರ ಮರ್ಕಝುಲ್ ಹುದಾ ಕಾಲೇಜಿನಲ್ಲಿ ಬೋರ್ಡ್ ಕಛೇರಿ ಉದ್ಘಾಟನೆ


ಪುತ್ತೂರು: ಹೆಣ್ಣುಮಕ್ಕಳ ವಿದ್ಯಾರಂಗದಲ್ಲಿ ಆಮೂಲಾಗ್ರ ಬದಲಾವಣೆಗೆ ದಿಟ್ಟ ಹೆಜ್ಜೆ ಇಟ್ಟಿರುವ ಕುಂಬ್ರ ಮರ್ಕಝುಲ್ ಹುದಾ ರಾಜ್ಯದ ಮಾತ್ರವಲ್ಲ ಹೊರರಾಜ್ಯಗಳ ವಿದ್ಯಾರ್ಥಿನಿಯರಿಗೂ ಆಶಾ ಕೇಂದ್ರವಾಗಿದೆ.

ಮರ್‌ಹೂಂ ಮಮ್ಮುಞ್ಣಿ ಹಾಜಿ, ಮರ್‌ಹೂಂ ಉಸ್ಮಾನ್ ಹಾಜಿ ಮೊದಲಾದವರ ಉದಾತ್ತ ಸೇವೆಯಿಂದ ಈ ಸಂಸ್ಥೆ ಎತ್ತರಕ್ಕೆ ಬೆಳೆದಿದ್ದು ಸಮಾಜದ ಎಲ್ಲರೂ ನಮ್ಮೊಂದಿಗೆ ಸಹಕರಿಸಿ ಮಹಿಳಾ ವಿದ್ಯಾಕ್ರಾಂತಿಗೆ ಸಹಭಾಗಿಗಳಾಗಬೇಕೆಂದು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಸಯ್ಯದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ ಹೇಳಿದರು.

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ನಡೆದ ಬೋರ್ಡ್ ರೂಂ ಉದ್ಘಾಟನಾ ಸಮಾರಂಭದ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಸಭೆಯನ್ನು ಉದ್ಘಾಟಿಸಿದ ಸಂಸ್ಥೆಯ ಪ್ರ.ಕಾರ್ಯದರ್ಶಿ ಡಾ.ಅಬ್ದುರ್ರಶೀದ್ ಝೈನಿ ಅವರು ನೆರೆದವರನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಶರೀಅತ್ ಕಾಲೇಜು ಪ್ರಿನ್ಸಿಪಾಲ್ ಮುಹಮ್ಮದ್ ಸಅದಿ ವಳವೂರು, ಉಪ ಪ್ರಿನ್ಸಿಪಾಲ್ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು, ಪದವಿ ವಿಭಾಗದ ಪ್ರಾಂಶುಪಾಲ ಮುಹಮ್ಮದ್ ಮನ್ಸೂರ್ ಕಡಬ, ಸಂಚಾಲಕ ಅಡ್ವೊಕೇಟ್ ಶಾಕಿರ್ ಹಾಜಿ ಪುತ್ತೂರು, ಮರ್ಕಝುಲ್ ಹುದಾ ಯುಎಇ ಆರ್ಗನೈಝರ್ ಸಿದ್ದೀಕ್ ಮುಸ್ಲಿಯಾರ್ ಪುತ್ತೂರು, ಕಾರ್ಯದರ್ಶಿ ಕರೀಮ್ ಹಾಜಿ ಚೆನ್ನಾವರ, ಬದ್ರುದ್ದೀನ್ ಹಾಜಿ ಕಲ್ಲೆಗ, ಉಮರ್ ಸಖಾಫಿ ಒಮಾನ್, ಸೌದಿ ಅರೇಬಿಯಾ ನ್ಯಾಷನಲ್ ಕಮಿಟಿ ನಾಯಕರಾದ ಬಶೀರ್ ಇಂದ್ರಾಜೆ, ಮುಹಮ್ಮದ್ ಅಲಿ ಉಪ್ಪಿನಂಗಡಿ, ಅನ್ವರ್ ಸಾದಾತ್ ಗೂಡಿನಬಳಿ, ಶೈಖ್ ಬಾಯ್ ಬಳ್ಕುಂಜೆ, ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಕೋಶಾಧಿಕಾರಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಕಾರ್ಯದರ್ಶಿ ಇಬ್ರಾಹಿಮ್ ಹಾಜಿ ಅಲೆಕ್ಕಾಡಿ, ಮರ್ಕಝ್ ಕುವೈಟ್ ಕಮಿಟಿ ಅಧ್ಯಕ್ಷ ಅಬ್ದುಲ್ ಅಝೀಝ್ ತಿಂಗಳಾಡಿ, ಕಾರ್ಯದರ್ಶಿ ಎಸ್.ಪಿ ಬಶೀರ್ ಶೇಖಮಲೆ, ಅಬ್ದುಲ್ ರಝಾಖ್ ಖಾಸಿಮಿ ಮೈದಾನಿಮೂಲೆ, ಝಕರಿಯಾ ವಳವೂರು, ಅಬೂಬಕ್ಕರ್ ಸಂಪ್ಯ(ದುಬೈ) ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯದ ಪ್ರಥಮ ಸುನ್ನಿ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿರುವ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಜ.26ರಂದು ಮುನ್ನೂರಕ್ಕೂ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಅಲ್ ಮಾಹಿರ ಪದವಿ ಪ್ರದಾನ ಸಮಾರಂಭ ನಡೆಯಲಿದೆ. ಇದರ ಅಂಗವಾಗಿ ಹಲವು ಯೋಜನೆಗಳು ನಡೆಯಲಿದ್ದು ಸ್ಮಾರ್ಟ್ ಕ್ಯಾಂಪಸ್ ಮೂಲಕ ನಮ್ಮ ಸಂಸ್ಥೆ ಹೆಚ್ಚಿನ ಉನ್ನತಿಯನ್ನು ಕಾಣಲಿದೆ.

-ಡಾ.ಅಬ್ದುರ್ರಶೀದ್ ಝೈನಿ, ಪ್ರ.ಕಾರ್ಯದರ್ಶಿ ಮರ್ಹಝುಲ್ ಹುದಾ ಕುಂಬ್ರ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.