HomePage_Banner
HomePage_Banner
HomePage_Banner

ಕುಂಬ್ರದ ಹೊಟೇಲ್ ಅಲ್‌ರಾಯದಲ್ಲಿ `ಅಂಬರ ಮರ್ಲೆರ್’

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುದ್ದಿ ಮೀಡಿಯಾ ಮುಖ್ಯ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಾಸ್ಯ ಧಾರಾವಾಹಿ `ಅಂಬರ ಮರ್ಲೆರ್’ಗೆ ಭರದ ಚಿತ್ರೀಕರಣ ನಡೆಯುತ್ತಿದೆ. ನಟ,ನಿರ್ದೇಶಕ ಸುಂದರ್ ರೈ ಮಂದಾರ ಕಥೆ,ಚಿತ್ರಕಥೆ,ಸಂಭಾಷಣೆಯೊಂದಿಗೆ ನಿರ್ದೇಶನ ಮಾಡುತ್ತಿರುವ ಈ ಧಾರಾವಾಹಿಯು ಸುದ್ದಿ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ. ಈಗಾಗಲೇ 9 ಎಪಿಸೋಡ್‌ಗಳನ್ನು ಪೂರ್ಣಗೊಳಿಸಿದ್ದು ಕುಂಬ್ರ ಪರಿಸರದಲ್ಲಿ ಅ.21ರಂದು ಭರದ ಚಿತ್ರೀಕರಣ ನಡೆಯಿತು.

ಪ್ರಶಸ್ತಿ ಪುರಸ್ಕೃತ ನಟ, ನಿರ್ದೇಶಕ ಎಂ.ಕೆ ಮಠರವರು ಸಂಚಿಕೆ ನಿರ್ದೇಶನ ಮಾಡಿದರು. ವಿವಿಧ ಹಾಸ್ಯ ದೃಶ್ಯಗಳನ್ನು ಛಾಯಾಗ್ರಹಕ ಹರೀಶ್ ಶೆಟ್ಟಿಮಜಲು ಚಿತ್ರೀಕರಿಸಿಕೊಂಡರು. ಕುಂಬ್ರದ ಅಲ್‌ರಾಯ ಹೊಟೇಲ್, ಮೀನು ಮಾರುಕಟ್ಟೆ, ಕುಂಬ್ರ ಪರಿಸರದಲ್ಲಿ ವಿವಿಧ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು.  ಕಲಾವಿದರಾಗಿ ಸುಂದರ್ ರೈ ಮಂದಾರ, ಪುಷ್ಪರಾಜ್ ಬೊಳ್ಳಾರ್, ರವಿ ರಾಮಕುಂಜ, ಚಂದ್ರಹಾಸ ಶೆಟ್ಟಿ ಮಾಣಿ, ಪವಿತ್ರ ಅಂಚನ್ ರಾಮಕುಂಜ, ಸಿಶೇ ಕಜೆಮಾರ್, ವಿ.ಎನ್.ಕೊಳಂಬೆ ರಾಮಕುಂಜ, ಸುನೀಲ್‌ಕಾಂತ್ ಈಶ್ವರಮಂಗಲ, ವಿಕೀತ್ ಎನ್.ಕೆ ಹಳೆನೇರಂಕಿ, ವಿನಯ ಕುಮಾರ್ ಬಂಡಾಡಿ, ರಂಜಿತ್ ಆಚಾರ್ಯ ಬೂಡಿಯಾರ್, ಅಶೋಕ್ ಬನ್ನೂರು ಮತ್ತಿತರರು ಭಾಗವಹಿಸಿದ್ದರು. ಸುದ್ದಿ ಮೀಡಿಯಾ ಪ್ರಮುಖ ಪ್ರಾಯೋಜಕತ್ವ ಗಿರೀಶ್ ಕುಮಾರ್ ಕಡಬ ಸಹ ನಿರ್ಮಾಪಕತ್ವದಲ್ಲಿ ಮೂಡಿಬರಲಿರುವ ಅಂಬರ ಮರ್ಲೆರ್ ತುಳು ಹಾಸ್ಯ ಧಾರಾವಾಹಿಗೆ ರಾಜೇಶ್ ಬಂದ್ಯೋಡು ಮತ್ತು ಚಂದ್ರಹಾಸ ಶೆಟ್ಟಿ ಮಾಣಿ ಸಹ ನಿರ್ದೇಶನ ಇದೆ. ಪ್ರಸಾದ್ ಕೊಲ ಮೇಕಪ್, ಪ್ರವೀಣ್ ಕಣಿಯೂರು ಕ್ಯಾಮರ ಸಹಾಯಕ, ರಾದೇಶ್ ರೈ ಧ್ವನಿಗ್ರಹಣ ಮತ್ತು ಸಂಕಲನ ಇದೆ. ಸುದ್ದಿ ಮೀಡಿಯಾ ಪಾರ್ಟನರ್ ಸುಧಾಕರ ಪಡೀಲ್ ಉಪಸ್ಥಿತರಿದ್ದರು. ರಫೀಕ್ ಅಲ್‌ರಾಯ ಮತ್ತು ಸಿಬ್ಬಂದಿ ವರ್ಗದವರು, ರಾಜೇಶ್ ರೈ ಪರ್ಪುಂಜ ಹಾಗೂ ಮನೆಯವರು ಸಹಕಾರ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.