HomePage_Banner
HomePage_Banner
HomePage_Banner

ಇಪ್ಪತ್ತೇಳು ಕೋಟಿ ರೂಪಾಯಿಗೂ ಮಿಕ್ಕಿದ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ, ಕಾಮಗಾರಿಗಳ ವೀಕ್ಷಣೆ

Puttur_Advt_NewsUnder_1
Puttur_Advt_NewsUnder_1
  • ಸರಕಾರದ ಯೋಜನೆಗಳು ಸಮರ್ಪಕವಾಗಿ  ಬಳಕೆಯಾದರೆ ಗ್ರಾಮದ ಅಭಿವೃದ್ಧಿ ಸಾಧ್ಯ:  ರಾಜೇಶ್ ನಾಯ್ಕ್


ವಿಟ್ಲ:  ಸರಕಾರದ ಯೋಜನೆಗಳು ಸಮರ್ಪಕವಾಗಿ  ಬಳಕೆಯಾದರೆ ಗ್ರಾಮದ ಅಭಿವೃದ್ಧಿ ಸಾಧ್ಯ, ಆ ನಿಟ್ಟಿನಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗ್ರಾಮದ ಅಭಿವೃದ್ಧಿಗಾಗಿ ಅನುದಾನದ ಜೊತೆ ಉತ್ತಮ ಯೋಜನೆಗಳನ್ನು ಜಾರಿಮಾಡುತ್ತಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ಹೇಳಿದರು.

ಅವರು  ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಟ್ಲಪಡ್ನೂರು, ಕೊಳ್ನಾಡು ಹಾಗೂ ಸಾಲೆತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 27 ಕೋಟಿ ರೂಪಾಯಿಗೂ ಮಿಕ್ಕಿದ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಹಾಗೂ ಕಾಮಗಾರಿಗಳ ವೀಕ್ಷಣೆ ನಡೆಸಿ  ಮಾತನಾಡಿದರು.
ಗ್ರಾಮದ ಅಭಿವೃದ್ಧಿಯೇ ಮುಖ್ಯಮಂತ್ರಿಯವರ ಮೂಲ ಧ್ಯೇಯ ವಾಕ್ಯವಾಗಿದ್ದು ನಾವು ಅವರ ಯೋಜನೆಗೆ ಪೂರಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಕೈಗೊಂಡು ಮೂಲಭೂತ ಸೌಕರ್ಯಗಳನ್ನು ಮತ್ತು   ಅಭಿವೃದ್ಧಿ ಕಾರ್ಯಗಳನ್ನು ಹಂತಹಂತವಾಗಿ ಮಾಡಲಾಗುವುದು ಎಂದು ಅವರು ಹೇಳಿದರು.

ಈ‌ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ.  ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಉಪಾಧ್ಯಕ್ಷ ಜಯರಾಮ್ ನಾಯ್ಕ್ ಕುಂಟ್ರಕಲ, ಪ್ರಮುಖರಾದ ರಾಜಾರಾಮ್ ಭಟ್ ಬಲಿಪಗುಳಿ, ರೇಶ್ಮಾ ಶಂಕರಿ, ಸತೀಶ್ ಭಟ್, ಮುರಳಿ ಭಟ್, ಸುಂದರ ಶೆಟ್ಟಿ, ನಾಗೇಶ್ ಶೆಟ್ಟಿ, ಅಭಿಷೇಕ್ ರೈ, ಅರವಿಂದ ರೈ, ವಿಶ್ವನಾಥ ಅಡಪ, ನಾರಾಯಣ ಪೂಜಾರಿ, ನಾಗೇಶ್ ಗೌಡ ಬಣ, ಲೋಕಪ್ಪ ಗೌಡ ಬಣ, ಪ್ರೇಮಲತಾ, ಮಜಿ ರಾಮ್ ಭಟ್, ದಿವಾಣ ಶಂಕರ ಭಟ್, ಶಿವರಾಂ ನಾಯ್ಕ ದಿವಾಣ, ಸೀತಾರಾಮ ಗೌಡ, ಆನಂತ್ ಭಟ್, ಮಾಧವ ರೈ, ಬಾಲಕೃಷ್ಣ ರೈ, ಶಿವಪ್ರಸಾದ್ ಶೆಟ್ಟಿ ಅನೆಯಾಲ,ವಿಠಲ್ ಶೆಟ್ಟಿ ಅಗರಿ, ಲೋಹಿತ್ ಕೆಳಗಿನ ಅಗರಿ, ನಾರಾಯಣ ಶೆಟ್ಟಿ ಕುಲ್ಯಾರ್, ರಾಜಾರಾಮ್ ಹೆಗ್ಡೆ, ವಿಶ್ವನಾಥ್ ಪೂಜಾರಿ ಕಟ್ಟತ್ತಿಲಕೋಡಿ, ಬಾಲಕೃಷ್ಣ ಸೆರ್ಕಳ, ಪ್ರಶಾಂತ್ ಕುಮಾರ್ ಶೆಟ್ಟಿ ಅಗರಿ, ಸತೀಶ್ ನಾಯ್ಕ್ ಮಂಕುಡೆ, ವೇಣುಗೋಪಾಲ್ ಆಚಾರಿ ಮಂಕುಡೆ, ಹರೀಶ್ ಟೈಲರ್ ಮಂಕುಡೆ, ದೇವಿದಾಸ್ ಶೆಟ್ಟಿ ಪಾಲ್ತಾಜೆ, ವಿದ್ಯೆಶ್ ರೈ, ರಾಮ ನಾಯ್ಕ್ ಕುಕ್ಕಿನಾರು, ಚಂದ್ರಾವತಿ ಮೇಗಿನಮಲಾರು, ಶಂಕರ್ ಶೆಟ್ಟಿಗಾರ್, ರಾಮಕೃಷ್ಣ ಚೌಟ, ಆನಂದ ಪೂಜಾರಿ, ನಾಗರಾಜ್ ಆಳ್ವ, ಶಶಿಧರ್ ರೈ ಕುಳಾಲು, ಚಿನ್ನಪ್ಪ ಗೌಡ ಬಂಡಮುಗೇರು, ಹರೀಶ್ ಶೆಟ್ಟಿ ಕೊಡಂಗೆ, ಸುಧಾಕರ್ ಪೂಜಾರಿ ಕೋಡಿ, ಹರೀಶ್ ಕಾಡುಮಠ, ಗಿರಿಧರ್ ಶೆಟ್ಟಿ, ಶರತ್, ಅಮರೇಶ್ ಶೆಟ್ಟಿ, ಗಣೇಶ್ ಬಾರೆಬೆಟ್ಟು, ಸುಜಿತ್ ಪೂಜಾರಿ ಕುದ್ರಿಯ, ನಟೇಶ್ ಬೊಳ್ಳೆಚ್ಚರ್ ಮೊದಲಾದವರು ಉಪಸ್ಥಿತರಿದ್ದರು.


ಕಾಮಗಾರಿಗಳ ವಿವರ: 

 5 ಲಕ್ಷ ರೂಪಾಯಿ ವೆಚ್ಚದಲ್ಲಿ ಕೊಳ್ನಾಡು ಗ್ರಾಮದ ಬೊಳ್ಳೆಚ್ಚಾರು ರಸ್ತೆ ಅಭಿವೃದ್ಧಿ, 7 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಕುಡೆ – ಪರ್ತಿಪ್ಪಾಡಿ – ಕೆಮರಡ್ಕ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿ, 5 ಲಕ್ಷ ರೂಪಾಯಿ ವೆಚ್ಚದಲ್ಲಿ  ಮಂಕುಡೆ ವಿಷ್ಣುಮೂರ್ತಿ  ದೇವಸ್ಥಾನ ರಸ್ತೆ ಅಭಿವೃದ್ಧಿ,  10.52ಲಕ್ಷ ರೂಪಾಯಿ ವೆಚ್ಚದಲ್ಲಿ  ಕುಂಟ್ರಕಲ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ, ಕುಂಟ್ರಕಲ ವಿದ್ಯುತ್ ಪರಿವರ್ತಕ, ೫ಲಕ್ಷ ರೂಪಾಯಿ ವೆಚ್ಚದಲ್ಲಿ  ಸೆರ್ಕಳ – ಪೀಲ್ಯಡ್ಕ ರಸ್ತೆ ಅಭಿವೃದ್ಧಿ, ೫ಲಕ್ಷ ರೂಪಾಯಿ  ಸಾಲೆತ್ತೂರು – ಪೀಲ್ಯಡ್ಕ – ಮಂಚಿ ರಸ್ತೆ ಅಭಿವೃದ್ಧಿ, ೧೦ಲಕ್ಷ ರೂಪಾಯಿ   ಕಾಡುಮಠ – ಕಡೆಪಿಕೇರಿ ರಸ್ತೆ ಅಭಿವೃದ್ಧಿ, ೧೫ ಲಕ್ಷ  ರೂಪಾಯಿ ವೆಚ್ಚದಲ್ಲಿ ಪೆರ್ಲದಬೈಲು – ಬರ್ಕಳ ಮಾರಿಗುಡಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ , ೫ ಲಕ್ಷ ರೂಪಾಯಿ ವೆಚ್ಚದಲ್ಲಿ ಸಾಲೆತ್ತೂರು – ತಾಮರಾಜೆ ದೈವಸ್ಥಾನ ರಸ್ತೆ ಅಭಿವೃದ್ಧಿ,  ೨೦ಲಕ್ಷ ರೂಪಾಯಿ ವೆಚ್ಚದಲ್ಲಿ ಸಾಲೆತ್ತೂರು ಸದಾಶಿವ ದೇವಸ್ಥಾನ ರಸ್ತೆ ಅಭಿವೃದ್ಧಿ, ೫ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟತ್ತಿಲ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ, ೨೫ ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟತ್ತಿಲ ಮಠ  ರಸ್ತೆ ಅಭಿವೃದ್ಧಿ, ೨೦ಲಕ್ಷ ರೂಪಾಯಿ‌ ವೆಚ್ಚ ದಲ್ಲಿ ಕಟ್ಟತ್ತಿಲಕೋಡಿ – ನಂದ್ರಬೈಲು ರಸ್ತೆ ಅಭಿವೃದ್ಧಿ, ೫ ಲಕ್ಷ ರೂಪಾಯಿ ವೆಚ್ಚದಲ್ಲಿ ಕೋಕಳ – ಭಂಡಾರದಮನೆ ರಸ್ತೆ ಅಭಿವೃದ್ಧಿ, ೧೦ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡ್ತಮುಗೇರು – ಪಾದೇರಪಡ್ಪು  -ಕುದ್ರಿಯ ರಸ್ತೆ ಅಭಿವೃದ್ಧಿ,‌ ೫ಲಕ್ಷ ರೂಪಾಯಿ ವೆಚ್ಚದಲ್ಲಿ  ಕೊಡಂಗೆ – ಕುದ್ರಿಯ ರಸ್ತೆ ಅಭಿವೃದ್ದಿ, ೧೦ ಲಕ್ಷ ರೂಪಾಯಿ ವೆಚ್ಚದಲ್ಲಿ  ಚೌಕ ಮಲರಾಯ ದೈವಸ್ಥಾನ ರಸ್ತೆ ಅಭಿವೃದ್ಧಿ,  ೧೦ ಲಕ್ಷ ರೂಪಾಯಿ ವೆಚ್ಚದಲ್ಲಿ ಸೆರ್ಕಳ – ಪೀಲ್ಯಡ್ಕ – ಸಾಗು ರಸ್ತೆ ಅಭಿವೃದ್ಧಿ, ೨೦ಲಕ್ಷ ರೂಪಾಯಿ ವೆಚ್ಚದಲ್ಲಿ, ಸಾಲೆತ್ತೂರು ಗ್ರಾಮದ   ಬೊಳ್ಮಾರು ಶಾಲಾ ಬಳಿಯಿಂದ ಉಳಿಯತ್ತಡ್ಕ ಅಣೆಕಟ್ಟು ರಸ್ತೆ ಅಭಿವೃದ್ಧಿ, ೧೦ಲಕ್ಷ ರೂಪಾಯಿ ವೆಚ್ಚದಲ್ಲಿ ಕಿಲ್ಲಂಬರೆಪಡ್ಪು ರಸ್ತೆ ಅಭಿವೃದ್ಧಿ , ೪ ಲಕ್ಷ ರೂಪಾಯಿ ವೆಚ್ಚದಲ್ಲಿ ಬೊಳ್ಮಾರು ಮಸೀದಿ ಬಳಿ ರಸ್ತೆ ಅಭಿವೃದ್ಧಿ ,೪೫ ಲಕ್ಷ ರೂಪಾಯಿ ವೆಚ್ಚದಲ್ಲಿ ಉಳಿಯತ್ತಡ್ಕ ಕಿಂಡಿ ಅಣೆಕಟ್ಟು ಅಭಿವೃದ್ಧಿ, ೫ ಲಕ್ಷ ರೂಪಾಯಿ ವೆಚ್ಚದಲ್ಲಿ ಬೊಳ್ಮಾರು ಸ.ಹಿ.ಪ್ರಾ.ಶಾಲಾ ಕಟ್ಟಡ ದುರಸ್ತಿ, ೭ಲಕ್ಷ ರೂಪಾಯಿ ವೆಚ್ಚದಲ್ಲಿ ಬ್ರಹ್ಮ ಶ್ರೀ ಗುರು ನಾರಾಯಣ ಮಂದಿರ ರಸ್ತೆ ಅಭಿವೃದ್ಧಿ, ೨೫ಲಕ್ಷ ರೂಪಾಯಿ ವೆಚ್ಚದಲ್ಲಿ ವಿಟ್ಲ ಪಡ್ನೂರು ಗ್ರಾಮದ  ಕೋಡಪದವು ದಿವಾಣ ಮಜಿ ರಸ್ತೆ ಕಾಂಕ್ರೀಟಿಕರಣ, ೨ಕೋಟಿ ರೂಪಾಯಿ ವೆಚ್ಚದಲ್ಲಿ ಎರ್ಮನಿಲೆ ಎಂಬಲ್ಲಿ ಕಿಂಡಿ ಅಣೆಕಟ್ಟು ಶಿಲಾನ್ಯಾಸ ಸೇರಿದಂತೆ ಒಟ್ಟು 6.25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.