HomePage_Banner
HomePage_Banner
HomePage_Banner

ಕೋರಂ ಕೊರತೆ: ಬಡಗನ್ನೂರು ಗ್ರಾಪಂ ಜಮಾಬಂಧಿ ಸಭೆ ಮುಂದೂಡಿಕೆ ನ.05ಕ್ಕೆ ಸಭೆ ನಡೆಸಲು ನಿರ್ಣಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಡಗನ್ನೂರು ಗ್ರಾಮ ಪಂಚಾಯತ್ ಜಮಾಬಂಧಿ ಸಭೆಯನ್ನು ಕೋರಂ ಕೊರತೆಯಿಂದ ಮುಂದೂಡಲಾಯಿತು. ಸಭೆಯು ಅ. 22ರಂದು ಗ್ರಾಪಂ ಸಭಾಂಗಣದಲ್ಲಿ ಕರೆಯಲಾಗಿತ್ತು. ಆದರೆ ಬೆರಳಣಿಕೆಯಷ್ಟು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು. ಸಭೆ ಆರಂಭಿಸಲು ಗ್ರಾಮಸ್ಥರು ನಿರಾಕರಿಸಿದರು. ಕೋರಂ ಕೊರತೆ ಇದ್ದು ಸಭೆ ಮುಂದೂಡುವಂತೆ ತಿಳಿಸಿದರು. ಈ ಬಗ್ಗೆ ಮಾತನಾಡಿದ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಸೀಮ ಗಂಧದರವರು , ಸಭೆಯ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ಮತ್ತು ಕರಪತ್ರ ಹಂಚಿದೆ ಇದಲ್ಲದೆ ಸಭೆಯ ಬಗ್ಗೆ ಗ್ರಾಮಸ್ಥರಿಗೆ ತೀಸಲಾಗಿದ್ದು ಗ್ರಾಮಸ್ಥರು ಸಭೆಗೆ ಬರುವುದು ತೀರಾ ವಿರಳ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಮಾಬಂಧಿ ಅಧಿಕಾರಿ ಸಮಗ್ರ ಶಿಕ್ಷಣ ಕರ್ನಾಟಕ ಸಮನ್ವಯಧಿಕಾರಿ ಮಂಜುಳಾ ಕೆ. ಎಲ್ ರವರು ಸಭೆಯಲ್ಲಿ ಸೇರಿದ ಗ್ರಾಮಸ್ಥರ ತೀರ್ಮಾನವೇ ಅಂತಿಮ. ಗ್ರಾಮಸ್ಥರು ತಿಳಿಸಿದಂತೆ ಈ ದಿನ ಸಭೆ ನಡೆಸುವುದು ಬೇಡ ಮುಂದೆ ನ.05 ಕ್ಕೆ ಸಭೆ ನಡೆಸುವ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ಗ್ರಾ.ಪಂ ಕಾರ್ಯದರ್ಶಿ ಶಾರದಾ ಕೆ ವಂದಿಸಿದರು. ಸಿಬ್ಬಂದಿಗಳಾದ ಗುಮಾಸ್ತ ಜಯಪ್ರಸಾದ್, ಸುಕನ್ಯ, ಹೇಮಾವತಿ, ಶೀಲಾವತಿ,ಶಾರದಾ, ಗ್ರಂಥಪಾಲಕಿ ಪ್ರಿಯಾ, ಹೇಮಾವತಿ ಬಿ.ಕೆ ,ಅಬ್ದುಲ್ ರಹೀಮಾನ್ ಸಹಕರಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.