HomePage_Banner
HomePage_Banner
HomePage_Banner

ಬೊಳುವಾರಿನಲ್ಲಿ ಹೆಲ್ತ್ ಪ್ಲಸ್ ಮೆಡಿಕಲ್ಸ್ ಆಂಡ್ ಕ್ಲಿನಿಕ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
  • ನೂತನ ಸಂಸ್ಥೆಯನ್ನು ಅಸ್ಸಯ್ಯದ್ ಅಲಿ ತಂಙಳ್ ಕುಂಬೋಲ್ ರವರು ಉದ್ಘಾಟನೆ

ಪುತ್ತೂರು: ಬೊಳುವಾರಿನಲ್ಲಿರುವ ಮೋರ್ ಸೂಪರ್ ಮಾರ್ಕೆಟ್ ಬಳಿ ಧ್ರುವ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಹೆಲ್ತ್ ಪ್ಲಸ್ ಮೆಡಿಕಲ್ಸ್ ಆಂಡ್ ಕ್ಲಿನಿಕ್ಸ್ ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಅಸ್ಸಯ್ಯದ್ ಅಲಿ ತಂಙಳ್ ಕುಂಬೋಲ್ ರವರು ಉದ್ಘಾಟಿಸಿ ಶುಭಹಾರೈಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ಭಾಗವಹಿಸಿದ ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್‌ನ ಆಡಳಿತ ನಿರ್ದೇಶಕ ಡಾ. ಸುರೇಶ್ ಪುತ್ತೂರಾಯ ಮಾತನಾಡಿ ಇಡೀ ವಿಶ್ವಕ್ಕೆ ಆವರಿಸಿದ್ದು ನಾವು ಕಾಯಿಲೆ ಬರುವ ಮೊದಲೇಢ ವೈದ್ಯರ ಸಲಹೆ ಪಡೆದುಕೊಳ್ಳುವುದು ಅವಶ್ಯಕ ಎಂದರು. ಇಂದು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆಗಳು ಊರಿನ ಸಣ್ಣ ಸಣ್ಣ ಆಸ್ಪತ್ರೆಗಳಲ್ಲಿ ದೊರೆಯುತ್ತಿದ್ದು, ಜನರು ಆರೋಗ್ಯವಂತರಾಗಿ ಹೊರ ಬರುತ್ತಿದ್ದಾರೆ ಎಂದರು.


ಪ್ರಗತಿ ಸ್ಪೆಷ್ಪಲಿಟಿ ಆಸ್ಪತ್ರೆಯ ವೈದ್ಯರಾದ ಡಾ. ಶ್ರೀಪತಿ ರಾವ್ ರವರು ಮಾತನಾಡಿ ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಸಂಸ್ಥೆಗಳು ಪೂರಕವಾಗಿದ್ದು ಜನರಿಗೆ ಗುಣಮಟ್ಟದ ಸೇವೆಗಳು ಲಭಿಸಿದಾಗ ಗ್ರಾಹಕರು ತೃಪ್ತಿ ಹೊಂದಲಿದ್ದಾರೆ ಎಂದರು.

ಜಿಲ್ಲಾ ಕ್ಷಯ ರೋಗ ನಿರ್ವಹಣಾ ಸಂಸ್ಥೆಯ ವೈದ್ಯಾಧಿಕಾರಿ ಡಾ. ಬದ್ರುದ್ದೀನ್ ಮಾತನಾಡಿ ಪುತ್ತೂರಿನ ನಗರ ಪ್ರದೇಶದಲ್ಲಿ ಉದ್ಘಾಟನೆಗೊಂಡ ಈ ಸಂಸ್ಥೆ ಜನರ ಅವಶ್ಯಕತೆಗಳನ್ನು ಪೂರೈಸುವಂತಾಗಲಿ, ಈ ಸಂಸ್ಥೆ ಯಶಸ್ವಿಯಾಗಿ ಮುಂದುವರಿಯಲಿ ಎಂದು ಅವರು ಹೇಳಿದರು.

ಮಧುಮೇಹ ಚಿಕಿತ್ಸಾ ವೈದ್ಯರಾದ ಡಾ. ನಝೀರ್ ಮಾತನಾಡಿ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಭಯಭೀತರಾಗಿದ್ದು, ಚಿಕಿತ್ಸೆಗೆ ತೆರಳಲು ಹಿಂಜರಿವಂತಹ ಪರಿಸ್ಥಿತಿ ಬಂದಿದ್ದು, ಈ ದೆಸೆಯಲ್ಲಿ ಜನರ ಆರೋಗ್ಯ ಕಾಪಾಡುವಂತಾಗಲು ಇದೀನ ವೈದ್ಯರ ಚಿಕಿತ್ಸೆ ಪದ್ಧತಿ ಅವಶ್ಯಕವಾಗಿದೆ ಎಂದರು.


ಪುತ್ತೂರು ಎಸ್ಡಿಪಿಐ ಅಧ್ಯಕ್ಷ ಸಿದ್ದೀಕ್ ಮಾತನಾಡಿ ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಸಂಸ್ಥೆಗಳು ಅವಶ್ಯಕವಾಗಿದ್ದು, ಗ್ರಾಹಕರು ಸಂಸ್ಥೆಗೆ ಪ್ರೊತ್ಸಾಹಿಸಬೇಕೆಂದರು. ಈ ಸಂದರ್ಭದಲ್ಲಿ ಸಿಟಿ ಬಝಾರ್‌ನ ಹಸನ್ ಹಾಜಿ, ನಗರಸಭಾ ಸದ್ಯಸರಾದ ಯೂಸೂಫ್ ಡ್ರೀಮ್, ಜಗನ್ನೀವಾಸ್ ರಾವ್, ಶರೀಫ್ ಕಟ್ಲೇರಿ, ಇಸ್ಮಾಯಿಲ್ ಮಠ, ಇಮ್ರಾನ್ ಕಲ್ಲಡ್ಕ, ಅಫಿನಾ ಕನ್ಯಾನ, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೂರ್ಛಾದ ಉಪಾಧ್ಯಕ್ಷ ಉಮರ್ ಸಂಪ್ಯ, ಜಿಲ್ಲಾ ವಕ್ಫ್ ಸದ್ಯಸ ಯಾಕೂಬ್ ಹಾಜಿ ದರ್ಬೆ, ಪಿ.ಎಂ ಇಬ್ರಾಹಿಂ ಕೂರ್ನಡ್ಕ, ಅಬ್ದುಲ್ ಖಾದರ್ ಬೊಳಾಯಿ, ಆಹಮ್ಮದ್ ಹಾಜಿ ಒಳತ್ತಡ್ಕ, ಮುಹಮ್ಮದ್ ನೆಹರುನಗರ, ಹಮೀದ್ ಮರೀಲ್, ಶರೀಫ್ ಮರೀಲ್, ಕೆ.ಪಿ. ನವಾಝ್, ಕೆ.ಪಿ. ಮಜೀದ್, ಕೆ.ಕಿ ನೌಫಲ್, ಕೆ.ಪಿ. ಶಾಹಿಲ್ ಮತ್ತಿತರರು ಭಾಗವಹಿಸಿ ಶುಭಹಾರೈಸಿದರು. ಹೆಲ್ತ್ ಪ್ಲಸ್ ಮೆಡಿಕಲ್ಸ್ ಆಂಡ್ ಕ್ಲಿನಿಕ್ಸ್ ಪಾಲುದಾರ ಅಕ್ಬರ್ ರವರು ವಂದಿಸಿದರು. ನಝೀರ್ ಮಠ ಕಾರ್ಯಕ್ರಮ ನಿರೂಪಿಸಿದರು.

ಬೊಳ್ವಾರಿನಲ್ಲಿ ನೂತನವಾಗಿ ಶುಭಾರಂಭಗೊಂಡ ಹೆಲ್ತ್ ಪ್ಲಸ್ ಮೆಡಿಕಲ್ ಆಂಡ್ ಕ್ಲಿನಿಕ್‌ನಲ್ಲಿ ಎಲ್ಲಾ ತರಹದ ಅಲೋಪತಿ, ಆಯುರ್ವೇದ, ವೆಟರ್ನರಿ ಹಾಗೂ ಸರ್ಜಿಕಲ್ ಐಟಮ್ಸ್‌ಗಳು ಲಭ್ಯವಿದೆ. ಹಾಗೂ ಫ್ರೀ ಹೋಮ್ ಡೆಲಿವರಿ ಕೂಡಾ ಮಾಡಲಾಗುತ್ತದೆ.
-ಆಸೀಫ್ , ಪಾಲುದಾರ, ಹೆಲ್ತ್ ಪ್ಲಸ್ ಮೆಡಿಕಲ್ಸ್ ಅಂಡ್ ಕ್ಲಿನಿಕ್ಸ್ ಬೊಳ್ವಾರು

ನಮ್ಮ ಕ್ಲಿನಿಕ್‌ನಲ್ಲಿ ಡ್ರಿಪ್ಸ್( ಐ.ವಿ. ಫ್ಲೂಯಿಡ್) ನೆಬ್ಯುಲೈಸೇಶನ್ ಸುಗರ್ ಟೆಸ್ಟ್ ಮೊದಲಾದ ಸೌಲಭ್ಯ ದೊರೆಯಲಿದೆ. ಕ್ಲಿನಿಕ್ ಬೆಳಿಗ್ಗೆ ಗಂಟೆ ೯ರಿಂದ ಸಂಜೆ ೬ ರವೆಗೆ ಚಿಕಿತ್ಸೆ ಲಭ್ಯವಿದೆ. – ಡಾ. ನಸೀಯತ್ ಶರೀಫ್ , ವೈದ್ಯೆ, ಪ್ಲಸ್ ಮೆಡಿಕಲ್ಸ್ ಅಂಡ್ ಕ್ಲಿನಿಕ್ ಬೊಳ್ವಾರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.