HomePage_Banner
HomePage_Banner
HomePage_Banner

ಜಾಗದ ವಿಚಾರಕ್ಕೆ ಸಂಬಂಧಿಸಿ ಹಲ್ಲೆ ಇತ್ತಂಡದ ಮೂವರು ಆಸ್ಪತ್ರೆಗೆ ದಾಖಲು

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಚಿಕ್ಕಮುಡ್ನೂರು ಗ್ರಾಮದ ಊರಮಾಲ್ ಎಂಬಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿ ಹಲ್ಲೆ ನಡೆದು ಇತ್ತಂಡದ ಮೂವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿಟಾಚಿಯ ಮಾಲಕ ಕೆ.ಗೋವಿಂದ ನಾಯಕ್ ಮತ್ತು ಆಪರೇಟರ್ ತನುರಾಜ್ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ನಾಟಿ ವೈದ್ಯ ಸಂಶುದ್ದೀನ್ ಸಾಲ್ಮರ ಅವರು ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ಊರಮಾಲ್ ಎಂಬಲ್ಲಿ ಅನಿತಾ ಭಂಡಾರಿ ಅವರಿಗೆ ಸಂಬಂಧಪಟ್ಟ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಂಶುದ್ದೀನ್ ಸಾಲ್ಮರ ಎಂಬವರು ಅಲ್ಲಿಗೆ ಬಂದು ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು, ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿಟಾಚಿ ಮಾಲಕ ಕೆ.ಗೋವಿಂದ ನಾಯಕ್ ಮತ್ತು ಆಪರೇಟರ್ ಅರಕಲಗೂಡಿನ ತನುರಾಜ್ ಅವರು ಆರೋಪಿಸಿದ್ದಾರೆ.ಅವರ ದೂರಿನ ಮೇರೆಗೆ ಸಂಶುದ್ದೀನ್ ಸಾಲ್ಮರ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವ ನಾಟಿವೈದ್ಯ ಸಂಶುದ್ದೀನ್ ಸಾಲ್ಮರ ಅವರು ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜೆಸಿಬಿಯಿಂದ ಲೆವೆಲ್ ಮಾಡಿಸುತ್ತಿರುವುದನ್ನು ಅಲ್ಲಿದ್ದ ಅನಿತಾ ಬಾಲಕೃಷ್ಣ ಭಂಡಾರಿ ಅವರಲ್ಲಿ ವಿಚಾರಿಸಿzನೆ.ಈಗಾಗಲೇ ಜಮೀನಿನ ವಿಚಾರ ಕೋರ್ಟ್‌ನಲ್ಲಿ ಇರುವುದರಿಂದ ಯಾವುದೇ ಕೆಲಸ ಮಾಡಿಸುವಂತಿಲ್ಲ ಎಂದಿದ್ದೆ.ಆದರೆ ಜೆಸಿಬಿ ಮಾಲಕ ಗೋವಿಂದ ನಾಯಕ್ ಮತ್ತು ಆಪರೇಟರ್ ಹಾಗೂ ಅನಿತಾ ಬಾಲಕೃಷ್ಣ ಅವರು ನನಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.ಪೊಲೀಸರು ಅವರ ಹೇಳಿಕೆಯನ್ನು ಪಡೆದು ಕೊಂಡಿದ್ದಾರೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.