HomePage_Banner
HomePage_Banner
HomePage_Banner

ಕಡಬ ಬಸ್ ನಿಲ್ದಾಣದಲ್ಲಿ ಯುವತಿಯ ಮೊಬೈಲ್ ಎಗರಿಸಿದ ಅಪರಿಚಿತ!! ಸಿಸಿ ಟಿವಿಯಲ್ಲಿ ಸೆರೆ..

Puttur_Advt_NewsUnder_1
Puttur_Advt_NewsUnder_1

ಕಡಬ :ಅಪರಿಚಿತನೊಬ್ಬ ಮೊಬೈಲ್ ಎಗರಿಸಿ ಎಸ್ಕೇಪ್ ಆಗಿದ್ದು ಈ ದೃಶ್ಯ ಸಮೀಪದ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕಡಬ ಪೇಟೆಯ ಪಂಜ ಕ್ರಾಸ್ ಬಳಿಯಿರುವ ಟಿ.ಸಿ ಪಾಯಿಂಟ್ ಬಳಿ ಯುವತಿಯೊಬ್ಬಳ ಮೊಬೈಲ್ ಸೆಟ್ ಎಗರಿಸಿ ಹೋಗಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪುತ್ತೂರು ನಿವಾಸಿ ಯುವತಿಯೋರ್ವಳು ಅ.22 ರಂದು ತನ್ನ ಸಂಬಂಧಿಕರ ಮನೆಗೆ ಬಂದು ವಾಪಸ್ ಹೋಗುವ ಸಮಯದಲ್ಲಿ ಉಪ್ಪಿನಂಗಡಿಯತ್ತ ಹೋಗುವ ಸರ್ಕಾರಿ ಬಸ್ ಏರಿದ್ದಾಳೆ. ಇದೇ ವೇಳೆ ಖದೀಮನೊಬ್ಬ ಬಸ್ ಏರಿದ್ದು ಯುವತಿಯ ಬ್ಯಾಗ್ನಿಂದ ಬೆಲೆ ಬಾಳುವ ಮೊಬೈಲ್ ಸೆಟ್ ಎಗರಿಸಿ ಬಸ್ ನಿಂದ ಇಳಿದು ಹೋಗಿದ್ದಾನೆ.

ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದರೂ ಪ್ರಯೋಜನವಾಗಿಲ್ಲ. ಕಡಬ ಪೇಟೆಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ ಅಳವಡಿಸಿದರೂ ಈ ಕ್ಯಾಮರಾಗಳು ಸಮರ್ಪಕವಾಗಿ ಕಾರ್ಯಾಚರಿಸದೆ ಅಕ್ರಮಗಳನ್ನು ಪತ್ತೆ ಹಚ್ಚಲು ಯೋಗ್ಯವಲ್ಲದ ರೀತಿಯಲ್ಲಿ ಇರುವುದು ವಿಪರ್ಯಾಸವಾಗಿದೆ.

22 ರ ಗುರುವಾರ ಮಧ್ಯಾಹ್ನ 12.45ರ ಸುಮಾರಿಗೆ ಈ ಘಟನೆ ನಡೆದಿದ್ದು ಸದ್ಯ ಪಕ್ಕದ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯಗಳು ಸೆರೆಯಾಗಿದೆ. ಆದರೆ ಗುರುತು ಮಾತ್ರ ಇನ್ನೂ ಅಸ್ಪಷ್ಟವಾಗಿದೆ..

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.