HomePage_Banner
HomePage_Banner
HomePage_Banner

ಪೆರಾಬೆ ಕಾಲೋನಿ ರಸ್ತೆಗೆ ಬಿಡುಗಡೆಯಾದ ಅನುದಾನ ಬೇರೆಡೆಗೆ – ದಲಿತ ಸೇವಾ ಸಮಿತಿ ಆಕ್ಷೇಪ

Puttur_Advt_NewsUnder_1
Puttur_Advt_NewsUnder_1

ಕಡಬ:- ಕಡಬ ತಾಲೂಕಿನ ಪೆರಾಬೆ ಗ್ರಾಮದ ಅತ್ರಿಜಾಲು ಕದಿರಡ್ಕ ಪ.ಜಾತಿ ಕಾಲೋನಿ ಹಾಗೂ ಅಗತ್ತಾಡಿ ಕಾಲೋನಿ ರಸ್ತೆ ಅಭಿವೃದ್ಧಿ ಮಂಜೂರಾದ ಅನುದಾನವನ್ನು ಇಲ್ಲಿ ಹಾದು ಹೋಗುವ ಮುಖ್ಯ ರಸ್ತೆಗೆ ಬಳಸಲು ಹುನ್ನಾರ ನಡೆಸಲಾಗುತ್ತಿದೆ ಇದು ದಲಿತರಿಗೆ ಮಾಡುವ ಅನ್ಯಾಯ ಎಂದು ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಆರೋಪಿಸಿದರು.

ಅವರು ಅ. ೨೩ರಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪೆರಾಬೆ ಕಾಲೋನಿ ರಸ್ತೆಗೆ ಮಂಜೂರಾದ ಎಂಬತ್ತು ಲಕ್ಷ ರೂ ಅನುದಾನವನ್ನು ಸುಳ್ಯ ಶಾಸಕ ಎಸ್.ಅಂಗಾರ ಅವರು ಮುಖ್ಯ ರಸ್ತೆಗೆ ಬಳಸಲು ಷಡ್ಯಂತರ ನಡೆಸಿದಾಗ ದಲಿತ್ ಸೇವಾ ಸಮಿತಿ ನೇತೃದಲ್ಲಿ ಇಲ್ಲಿನ ನಾಗರೀಕರು ಪ್ರತಿಭಟನೆ ನಡೆಸಿ ಕಾಮಗಾರಿಯನ್ನು ತಡೆಹಿಡಿಯಲಾಗಿದೆ. ಈ ಬಗ್ಗೆ ಶಾಸಕರು ಹೇಳಿಕೆ ನೀಡಿ ಕಾಲೋನಿ ನಿವಾಸಿಗಳಲ್ಲಿ ಕೇಳಿ ಅನುದಾನ ಇಡುವುದಿಲ್ಲ, ಕ್ಷೇತ್ರದ ಆಯಾ ಪ್ರದೇಶದ ಎಲ್ಲಾ ಜನರಿಗೆ ಅನುಕೂಲವಾಗುವಂತೆ ಅನುದಾನವಿಟ್ಟು ಅಭಿವೃದ್ಧಿ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ವೃಥಾ ರಾಜಕೀಯ ಮಾಡದೆ ಗೊಂದಲ ಸೃಷ್ಠಿ ಮಾಡಬಾರದು ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಶಾಕರಿಗೆ ದಲಿತರ ಮತಗಳು ಬೇಕು ಆದರೆ ದಲಿತರ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿ ಬೇಡ ಎನ್ನುವಂತಾಗಿದೆ ಇದು ಖಂಡನೀಯ ಎಂದು ಹೇಳಿದ ಶೇಷಪ್ಪ ಬೆದ್ರಕಾಡು ರವರು. ಶಾಸಕರು ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಪ.ಜಾತಿ ಪಂಗಡದ ಅಭಿವೃದ್ಧಿಗೆ ಸಿಗುವ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿರುವ ಅನುಮಾನ ಇದೆ, ಇವರು ಶಾಸಕರಾಗಿ ೩೦ ವರ್ಷವಾದರೂ ವಿಧಾನ ಸಭಾ ಕ್ಷೇತ್ರದ ಹಲವಾರು ದಲಿತ ಕಾಲೋನಿಗಳು ಅಭಿವೃದ್ಧಿ ಕಂಡಿಲ್ಲ. ಅವರಿಗೆ ಸುಳ್ಯದಲ್ಲಿ ಒಂದು ಅಂಬೇಡ್ಕರ ಭವನ ನಿರ್ಮಿಸಬೇಕಾದರೆ ಇಷ್ಟು ವರ್ಷಗಳು ಬೇಕಾಯ್ತು ಇದರಿಂದ ರಾಜಕೀಯ ಇಚ್ಚಾ ಶಕ್ತಿ ಏನು ಎಂದು ತಿಳಿಯುತ್ತದೆ. ಅವರದೇ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರ ಮಾತಿಗೂ ಬೆಲೆ ಕೊಡದೆ ಅನುದಾನವನ್ನು ಮುಖ್ಯ ರಸ್ತೆಗೆ ಬಳಸಲು ಶಾಸಕರಿಗೆ ಬೇರೆಯವರು ಕುಮ್ಮುಕ್ಕು ನೀಡುತ್ತಿರುವುದು ಗೊತ್ತಾಗುತ್ತಿದೆ. ಸರಕಾರದ ಆದೇಶವನ್ನು ಉಲ್ಲಂಘಿಸಿ ಅನುದಾನ ಬೇರೆಡೆಗೆ ವರ್ಗಾಯಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸೇಸಪ್ಪ ಬೆದ್ರಕಾಡು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿಯ ಕಡಬ ತಾಲೂಕು ಸಂಚಾಲಕ ಸುರೇಶ ತೋಟಂತಿಲ, ಕಾರ್ಯದರ್ಶಿ ತಾರನಾಥ ಕಡೀರಡ್ಕ, ಮಹಿಳಾ ಘಟಕದ ಉಪಾಧ್ಯಕ್ಷೆ ಗಿರಿಜಾ, ಪೆರಾಬೆ ಗ್ರಾಮ ಪಂ ಮಾಜಿ ಸದಸ್ಯ ದಿನೇಶ್ ಕುಮಾರ್ ಅಗತ್ತಾಡಿ, ಮುಖಂಡರಾದ ಲೋಕೇಶ್ ಕದಿರಡ್ಕ, ಪ್ರಸಾದ ಅನಂತಾಡಿ, ಉಮೇಶ್ ಅಲೆಕ್ಕಾಡಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.