HomePage_Banner
HomePage_Banner
HomePage_Banner

ಶಿರಾಡಿ ಸುರಂಗ ನಿರ್ಮಾಣಕ್ಕೆ 12 ಸಾವಿರ ಕೋಟಿ ರೂಪಾಯಿಯ ಕ್ರಿಯಾ ಯೋಜನೆ ಸಲ್ಲಿಕೆ

Puttur_Advt_NewsUnder_1
Puttur_Advt_NewsUnder_1
  •  ಡಿ.ವಿ.ಸದಾನಂದ ಗೌಡರ ಕನಸು ನನಸಾಗುವತ್ತ
    ಪುತ್ತೂರು: ಶಿರಾಡಿ ಘಾಟಿಯಲ್ಲಿ ಕೈಗೊಂಡಿರುವ ಸುರಂಗ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ 12 ಸಾವಿರ ಕೋಟಿ ರೂಪಾಯಿ ವೆಚ್ಚದ ಕ್ರಿಯಾ ಯೋಜನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ದಶಕಗಳ ಕನಸು ನನಸಾಗುವ ಆಸೆ ಮತ್ತೆ ಗರಿಗೆದರಿದೆ. ಬಂದರು ನಾಡು ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು ರೈಲ್ವೆ ಮಾರ್ಗಕ್ಕೆ ಪರ್ಯಾಯವಾಗಿ ಸುಮಾರು ೨೩.೦೪ ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲು 2010-11ರಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ನಿರ್ಧರಿಸಿದ್ದರು.

ಅದರಂತೆ ಸುರಂಗ ಮಾರ್ಗ ಯೋಜನೆಗೆ ನೀಲ ನಕ್ಷೆ ಸಿದ್ಧಪಡಿಸಲು ಜಪಾನಿನ ಜಿಯ್ಕಾ ಕಂಪನಿಗೆ ೫ ಕೋಟಿ ರೂ.ಗೆ ಟೆಂಡರ್ ನೀಡಲಾಗಿತ್ತು. ೮ ವರ್ಷಗಳ ಸರ್ವೇ ನಂತರ ತಾಲೂಕಿನ ಮಾರನಹಳ್ಳಿ ಗ್ರಾಮದಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆವರೆಗೆ ೨೩.೪ ಕಿ.ಮೀ ಉದ್ದದ ಸುರಂಗ ಮಾರ್ಗ ಹಾಗೂ ಬೆಟ್ಟಗಳ ನಡುವಿನ ಕಣಿವೆಗೆ ಸೇತುವೆ ನಿರ್ಮಾಣ ಮಾಡುವ ನೀಲಿ ನಕ್ಷೆ ಸಿದ್ಧವಾಗಿದೆ. ಶಿರಾಡಿ ಘಾಟಿಯಲ್ಲಿ ಹಾದು ಹೋಗಿರುವ ರೈಲ್ವೆ ಮಾರ್ಗಕ್ಕೆ ಪರ್ಯಾಯವಾಗಿ ಸುರಂಗಮಾರ್ಗ ನಿರ್ಮಾಣಕ್ಕೆ ಅಂದಾಜು 12 ಸಾವಿರ ಕೋ.ರೂ ಬೇಕಾಗುತ್ತದೆ ಎಂಬ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ.

ಮಂಗಳೂರಿಗೆ ವರದಾನ:
ಸುರಂಗ ಮಾರ್ಗ ಯೋಜನೆ ಸಾಕಾರದೊಂದಿಗೆ ಬಂದರು ನಾಡು ಮಂಗಳೂರು ಆರ್ಥಿಕ ಕೇಂದ್ರವಾಗಿ ಬೆಳವಣಿಗೆ ಸಾಧಿಸಲಿದೆ. ಮಂಗಳೂರಿನಲ್ಲಿ ಬಂದರು ಇದ್ದರೂ ರಸ್ತೆ ಮಾರ್ಗ ಸರಿ ಇಲ್ಲದ ಕಾರಣ ಚೆನ್ನೈನಂತಹ ಮಹಾನಗರಗಳಿಗೆ ಸರಿಸಾಟಿಯಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ. ಪ್ರಮುಖ ಪ್ರವಾಸಿ ಕೇಂದ್ರವಾಗಿಯೂ ಸುರಂಗ ಮಾರ್ಗ ದೇಶದ ಗಮನ ಸೆಳೆಯಲಿದೆ.

ಏಕಮುಖ ರಸ್ತೆ: ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆ ಸುರಿಯುವ ಕಾರಣದಿಂದ ಶಿರಾಡಿ ಘಾಟಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಅದು ಸದ್ಯ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದೆ. ಎಲ್ಲವೂ ಅಂದುಕೊಂಡಂತೆ ನಡೆದು ಕೇಂದ್ರ ಸರಕಾರ ಸುರಂಗ ಮಾರ್ಗಕ್ಕೆ ಅಸ್ತು ಎಂದರೆ ಘಾಟಿಯ ೨೭ ಕಿ.ಮೀ. ಕಾಂಕ್ರೀಟ್ ರಸ್ತೆ ಏಕಮುಖವಾಗಿ ಪರಿವರ್ತನೆಯಾಗಲಿದೆ ಎಂದು ತಿಳಿದು ಬಂದಿದೆ.
ಮಾರನಹಳ್ಳಿ ಗ್ರಾಮದಿಂದ ಅಡ್ಡಹೊಳೆವರೆಗಿನ ೨೩.೦೪ ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ೧೨ ಸಾವಿರ ಕೋಟಿ ರೂ. ವೆಚ್ಚದ ಡಿಪಿಆರ್ ಅನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ.

ಬಹುಕಾಲದ ಪ್ರಯತ್ನ ಈಡೇರುತ್ತಿದೆ: ಡಿ.ವಿ.ಎಸ್

ಬಹುಕಾಲದ ಪ್ರಯತ್ನ ಇದೀಗ ಈಡೇರುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಈ ಕಾಮಗಾರಿಗೆ 5 ಕೋಟಿ ರೂ ಮೀಸಲಿಟ್ಟಿದ್ದೆ. ಕರಾವಳಿ ಭಾಗದಲ್ಲಿ ಸುಗಮ ಹಾಗೂ ಸುರಕ್ಷಿತ ಸಂಚಾರ ವ್ಯವಸ್ಥೆ ಆಗಬೇಕೆಂಬುದು ನಮ್ಮ ಅಭಿಲಾಷೆಯಾಗಿದೆ. ಈ ಭಾಗದಲ್ಲಿ ಯಾವಾಗಲೂ ಸಮಸ್ಯೆ ಆಗುತ್ತಿತ್ತು. ಅದರ ಪರಿಹಾರಕ್ಕೆ ಸತತ ಪ್ರಯತ್ನ ನಡೆಸಲಾಗಿದೆ. ಮುಂದೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಅಲ್ಲಿನ ಎಲ್ಲಾ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕಾಮಗಾರಿಗೆ ವೇಗ ನೀಡಲಾಗುವುದು, ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಶೀಘ್ರದಲ್ಲಿ ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರವರು ‘ಸುದ್ದಿ’ಗೆ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.