HomePage_Banner
HomePage_Banner
HomePage_Banner

ನೇಲ್ಯಡ್ಕ: ಪರಾರಿಯಾಗುತ್ತಿದ್ದ ಕೊಲೆ ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್

Puttur_Advt_NewsUnder_1
Puttur_Advt_NewsUnder_1
  • ಓರ್ವ ಆರೋಪಿಗೆ ಗಾಯ; ಆಸ್ಪತ್ರೆಗೆ ದಾಖಲು
  • ಶಿರಾಡಿ ರಕ್ಷಿತಾರಣ್ಯದೊಳಗೆ ಪರಾರಿಯಾದ ಆರೋಪಿಗಳಿಗಾಗಿ ಶೋಧ

ನೆಲ್ಯಾಡಿ: ಬಂಟ್ವಾಳ ತಾಲೂಕಿನ ಮೆಲ್ಕಾರ್ ಬಳಿಯ ಗುಡ್ಡೆಯಂಗಡಿಯಲ್ಲಿ ಅ.23ರಂದು ರಾತ್ರಿ ಚೆನ್ನಾ ಫಾರೂಕ್ ಎಂಬವರನ್ನು ಮಾರಕಾಯುಧದಿಂದ ಇರಿದು ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳ ಮೇಲೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉದನೆ ಸಮೀಪದ ನೇಲ್ಯಡ್ಕ ಎಂಬಲ್ಲಿ ಬಂಟ್ವಾಳ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಅ.24ರಂದು ಮುಂಜಾನೆ ನಡೆದಿದೆ.

ಕೊಲೆಯಾದ‌ ಚೆನ್ನೆ ಫಾರೂಕ್
ಕೊಲೆ‌ ಆರೋಪಿ ಇಬ್ರಾಹಿಂ ಖಲೀಲ್

ಪೊಲೀಸ್ ಫೈರಿಂಗ್‌ನಲ್ಲಿ ನಂದಾವರ ನಿವಾಸಿ ಖಲೀಲ್ ಎಂಬಾತನ ಕಾಲಿಗೆ ಗಾಯವಾಗಿದ್ದು ಆತನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ಪೊಲೀಸ್ ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಎಸ್‌ಐ ಪ್ರಸನ್ನರವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಲೆ ಆರೋಪಿ ಖಲೀಲ್ ಹಾಗೂ ಮತ್ತಿಬ್ಬರು ಆರೋಪಿಗಳು ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾಹಿತಿ ಆಧರಿಸಿ ಬಂಟ್ವಾಳದಿಂದ ಬೆನ್ನಟ್ಟಿ ಹೋದ ಪೊಲೀಸರು ನೇಲ್ಯಡ್ಕ ಸಮೀಪ ಅಡ್ಡಗಟ್ಟಿದ್ದರು. ಆದರೆ ಈ ವೇಳೆ ಆರೋಪಿ ಖಲೀಲ್ ಪೊಲೀಸರ ಮೇಲೆ ತಲವಾರು ದಾಳಿ ನಡೆಸಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಪಿಎಸ್‌ಐ ಅವಿನಾಶ್‌ರವರು ಗುಂಡಿನ ದಾಳಿ ನಡೆಸಿದ್ದು ಖಲೀಲ್ ಕಾಲಿಗೆ ಗುಂಡು ಹೊಕ್ಕಿದೆ ಎಂದು ವರದಿಯಾಗಿದೆ.

‌ಕಾರ್ಯಾಚರಣೆಯಲ್ಲಿ ಗಾಯಗೊಂಡ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್

ಆರೋಪಿಗಳಿಗೆ ಶೋಧ:
ಪೊಲೀಸ್ ಫೈರಿಂಗ್ ವೇಳೆ ತಪ್ಪಿಸಿಕೊಂಡಿರುವ ಇಬ್ಬರು ಆರೋಪಿಗಳು ನೇಲ್ಯಡ್ಕದಲ್ಲಿ ಶಿರಾಡಿ ರಕ್ಷಿತಾರಣ್ಯದೊಳಗೆ ಪರಾರಿಯಾಗಿರುವುದಾಗಿ ವರದಿಯಾಗಿದೆ. ಇವರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಎಎಸ್‌ಪಿಯವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್, ಬಂಟ್ವಾಳ ಠಾಣಾ ಎಸ್‌ಐ ಅವಿನಾಶ್, ಉಪ್ಪಿನಂಗಡಿ ಎಸ್‌ಐ ಈರಯ್ಯ, ಧರ್ಮಸ್ಥಳ ಎಸ್‌ಐ ಪವನ್‌ಕುಮಾರ್‌ರವರ ನೇತೃತ್ವದಲ್ಲಿ ಪೊಲೀಸರು ಶೋಧ ನಡೆಸುತ್ತಿರುವುದಾಗಿ ವರದಿಯಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.