HomePage_Banner
HomePage_Banner
HomePage_Banner

ರೋಟರಿ ಕ್ಲಬ್ ನಿಂದ ವಿಶ್ವ ಪೋಲಿಯೊ ದಿನ,‌ ವಿವಿಧ ಸವಲತ್ತುಗಳ ವಿತರಣೆ

Puttur_Advt_NewsUnder_1
Puttur_Advt_NewsUnder_1

 
ಪುತ್ತೂರು: ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಪೂರ್ವ, ಪುತ್ತೂರು ಸಿಟಿ, ಪುತ್ತೂರು ಸೆಂಟ್ರಲ್, ಪುತ್ತೂರು ಸ್ವರ್ಣ, ಪುತ್ತೂರು ಯುವ, ಪುತ್ತೂರು ಎಲೈಟ್ ಹಾಗೂ ಇನ್ನರ್ ವ್ಹೀಲ್‌ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ದಲ್ಲಿ ವಿಶ್ವ ಪೋಲಿಯೊ ದಿನ ಹಾಗೂ ಸರಕಾರಿ ಆಸ್ಪತ್ರೆಗೆ ವಿವಿಧ ಕೊಡುಗೆ ಕಾರ್ಯಕ್ರಮ ಗಳು ಅ.24ರಂದು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ,ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ಸಕರಾರಿ ಆಸ್ಪತ್ರೆಯನ್ನಾಗಿಸಲು ನೀಲ ನಕಾಶೆ ಸಿದ್ದವಾಗಿದೆ. ಕೋವಿಡ್ ನಿಂದಾಗಿ ಸ್ವಲ್ಪ ಹಿನ್ನಡೆಯಾಗಿದೆ. ಪುತ್ತೂರು ಉಪವಿಭಾಗಕ್ಕೆ ಸಂಬಂದಿಸಿದ ಎಲ್ಲಾ ತಾಲೂಕುಗಳಿಗೆ ಸಂಬಂಧಿಸಿ ಆಸ್ಪತ್ರೆಗಳಿಗೆ ಬರುವಂತೆ ರೋಗಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು. ಶೇ.80ರಷ್ಟು ಈಗಾಗಲೇ ವೈದ್ಯರ ಹುದ್ದೆ ಭರ್ತಿಯಾಗಿದೆ. ಆಕ್ಸಿಜನ್ ಬೆಡ್ ಗಳು, ಡಯಾಲಿಸಿಸ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಸಾಕಷ್ಟು ಬೇಡಿಕೆಗಳಿದ್ದು ಶೇ.100ರಷ್ಟು ಡಯಾಲಿಸಿಸ್ ಒದಗಿಸಲು ಬದ್ದರಾಗಿದ್ದೇವೆ. ಕೊರತೆಯಿರುವ ಸಿಬಂದಿಗಳನ್ನು ಭರ್ತಿಮಾಡಿ ಮುಂದಿನ ದಿನಗಳಲ್ಲಿ ಸುಸಜ್ಜಿತವಾದ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಬದ್ದರಾಗಿರುವುದಾಗಿ ಶಾಸಕರು ಹೇಳಿದರು.

ಸಿಟಿ ಆಸ್ಪತ್ರೆಯ ಡಾ. ಭಾಸ್ಕರ್ ರಾವ್ ಮಾತನಾಡಿ, ವಿಶ್ಚದಲ್ಲಿ ಪೋಲಿಯೋ ವು ಶೇ.99.9ರಷ್ಟು‌ನಿಯಂತ್ರಣಗೊಂಡಿದೆ. 2020ರಲ್ಲಿ ವಿಶ್ವದಲ್ಲಿ 117 ಪ್ರಕರಣಗಳು ಪತ್ತೆಯಾಗಿದೆ. ಈಗ ಎರಡು ರಾಷ್ಟ್ರದಲ್ಲಿ ಮಾತ್ರ ಸ್ಥಳಿಯ ಗಳಿಂದಾಗಿ ಕೆಲವು ಪ್ರಕರಣಗಳು ಕಂಡುಬರುತ್ತಿದೆ. ಪೋಲಿಯೊ ನಿಯಂತ್ರಣಕ್ಕೆ ರೋಟರಿ ಕ್ಲಬ್ ವಿಶ್ವದಲ್ಲೇ ಪ್ರಯತ್ನಿಸುತ್ತಿದ್ದು ವಾರ್ಷಿಕವಾಗಿ 50 ಮಿಲಿಯನ್ ಯು.ಎಸ್ ಡಾಲರ್ ಬಂಡವಾಳ ಹೂಡುತ್ತಿದೆ ಎಂದರು. ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ಮಾತನಾಡಿ, ಆಸ್ಪತ್ರೆಯ ಆವಶ್ಯಕತೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಉಂಟಾದಾಗ ರೋಟರಿ ಗಮನಕ್ಕೆ ತಂದಾಗ ಶೀಘ್ರವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಟ್ಟಿರುತ್ತಾರೆ ಎಂದರು.

ವಿವಿಧ ಕೊಡುಗೆಗಳು;
ಪುತ್ತೂರಿನ ಏಳು ರೋಟರಿ ಕ್ಲಬ್ ಗಳಿಂದ ಏಳು ಫ್ಯಾನ್, ಡಯಾಲಿಸಿಸ್ ಕೇಂದ್ರಕ್ಕೆ ಸ್ಟ್ರಕ್ಚರ್ ಹಾಗೂ ರೋಟರಿ ಕ್ಲಬ್ ಪುತ್ತೂರು ಸಿಟಿ ಮೂಲಕ ಮಿತ್ರಂಪಾಡಿ ಜಯರಾಮ ರೈಯವರು ವ್ಹೀಲ್ ಚೆಯರ್ ಕೊಡುಗೆಯಾಗಿ ನೀಡಿದರು.

ಗೌರವಾರ್ಪಣೆ:
ಕಳೆದ 100ದಿನಗಳ್ಲಿ ಆಸ್ಪತ್ರೆ ರೋಗಿಗಳಿಗೆ 1500ಕ್ಕೂ ಅಧಿಕ ಕಿಟ್ ವಿತರಿಸಿದ ಇ ಫ್ರಂಡ್ಸ್ ನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ರೋಟರಿ ಕ್ಲಬ್ ಸಹಾಯಕ ಗವರ್ನರ್ ಗಳಾದ ಸಚ್ಚಿದಾನಂದ ಹಾಗೂ ರತ್ನಾಕರ ರೈ ಕೆದಂಬಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಶ್ವಿನಿ ಕೃಷ್ಣ ಪ್ರಾರ್ಥಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಕ್ಸೇವಿಯರ್ ಡಿ.ಸೋಜ ಸ್ವಾಗತಿಸಿದರು. ಆಸ್ಪತ್ರೆಯ ಸಲಹಾ‌ ಸಮಿತಿ ಸದಸ್ಯ‌ ರಫೀಕ್ ಕಾರ್ಯಕ್ರಮ ನಿರೂಪಿಸಿ ರೋಟರಿ ಯುವದ ಕಾರ್ಯದರ್ಶಿ ಉಮೇಶ್ ನಾಯಕ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.