HomePage_Banner
HomePage_Banner
HomePage_Banner

ಕೃಷಿ ಮಸೂದೆ, ಭೂ ಸ್ವಾಧೀನ ಕಾಯ್ದೆಯ ಬಗ್ಗೆ ಮುಕ್ತ ಚರ್ಚೆಗೆ ಆಹ್ವಾನಿಸಿರುವ ನಡೆಯನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಪತ್ರಿಕಾಗೋಷ್ಠಿಯಲ್ಲಿ ಮುರಳೀಧರ ರೈ ಮಠಂತಬೆಟ್ಟು

Puttur_Advt_NewsUnder_1
Puttur_Advt_NewsUnder_1
  • ಪರ-ವಿರೋಧ ನಿಲುವಿನ ಪ್ರಮುಖರ ವಿಚಾರ ವಿನಿಮಯ ಸಭೆ ನಡೆಸಲು ಒತ್ತಾಯ
  • ದೇಶಕ್ಕೆ ಒಳ್ಳೆಯದಾಗುವ ಯೋಜನೆಗೆ ಸ್ವಾಗತವಿದೆ. ಒಂದು ಅನುಕೂಲವನ್ನು ತೋರಿಸಿ ಹಲವು ಅನಾನುಕೂಲತೆಗಳನ್ನು ಸೃಷ್ಠಿಸುವ ಯೋಜನೆಗೆ ವಿರೋಧವಿದೆ

ಉಪ್ಪಿನಂಗಡಿ: ಶಾಸಕ ಸಂಜೀವ ಮಠಂದೂರುರವರು ಕೃಷಿ ಮಸೂದೆ ಹಾಗೂ ಭೂ ಸ್ವಾಧೀನ ಕಾಯ್ದೆಯ ಬಗ್ಗೆ ಮುಕ್ತ ಚರ್ಚೆಗೆ ಆಹ್ವಾನಿಸಿರುವ ನಡೆಯನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ, ಮಸೂದೆಯ ಬಗೆಗಿನ ಪರ-ವಿರೋಧ ನಿಲುವಿನ ಪ್ರಮುಖರ ವಿಚಾರ ವಿನಿಮಯ ಸಭೆಯನ್ನು ಮಾದ್ಯಮ ಪ್ರತಿನಿಧಿಗಳ ಮಧ್ಯಸ್ಥಿಕೆಯಲ್ಲಿ ಶಾಸಕರು  ಆಯೋಜಿಸಲಿ ನಾವುಗಳು ಚರ್ಚೆಗೆ ಬರಲು ಸಿದ್ಧರಿದ್ದೇವೆ ಎಂದು ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ತಿಳಿಸಿದ್ದಾರೆ.

ಅವರು ಅ. ೨೨ರಂದು ಉಪ್ಪಿನಂಗಡಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ಕೃಷಿ ಮಸೂದೆ ಹಾಗೂ ಭೂ ಸ್ವಾಧೀನ ಕಾಯಿದೆ ರೈತರ ಪರವಾಗಿದೆ ಎಂದು ಹೇಳುವ ಬಿಜೆಪಿಗರು ಈ ಬಗ್ಗೆ ಎಲ್ಲಾ ಪಕ್ಷಗಳ ವಿಶ್ವಾಸ ಗಳಿಸಲು ಸೋತಿರುವುದೇಕೆ? ಬಹುಮತದಿಂದ ಕಾಯಿದೆ ರೂಪಿಸುವ ಬದಲು ಸುಗ್ರಿವಾಜ್ಞೆಯ  ಅಡ್ಡ ಹಾದಿ ತುಳಿದಿರುವುದೇಕೆ? ಎಂದು ಪ್ರಶ್ನಿಸಿದ ಅವರು, ಇದೇ ಕಾರಣಕ್ಕೆ ಈ ಎರಡು ಕಾಯಿದೆಗಳ ಬಗ್ಗೆ ನಮ್ಮಲ್ಲಿ ಸಂಶಯ ಮೂಡಿರುವುದು. ಈ ಸಂಶಯವನ್ನು ಶಾಸಕರು ಮುಕ್ತ ಚರ್ಚೆ ನಡೆಸುವ ಮೂಲಕ ಬಗೆಹರಿಸಿಕೊಡಬೇಕು ಎಂದು ಹೇಳಿದರು.

ಸಣ್ಣ ಹಿಡುವಳಿದಾರರು ನೆಲೆ ಕಳೆದುಕೊಳ್ಳುವ ಭೀತಿಗೆ ತುತ್ತಾಗಿರುವುದಾದರೆ, ಜನರಿಗೆ ಒಳ್ಳೆಯದಾಗುವ, ತನ್ಮೂಲಕ ದೇಶಕ್ಕೆ ಒಳ್ಳೆಯದಾಗುವ ಯಾವುದೇ ಯೋಜನೆಗೆ  ಸ್ವಾಗತವಿದೆ. ಆದರೆ ಒಂದು ಅನುಕೂಲವನ್ನು ತೋರಿಸಿ ಹಲವು ಅನಾನುಕೂಲತೆಗಳನ್ನು ಸೃಷ್ಠಿಸುವ ಯಾವುದೇ ಯೋಜನೆಗೆ ನಮ್ಮ ಪ್ರಬಲ ವಿರೋಧವಿದೆ. ಈ ಮಧ್ಯೆ ಮುಕ್ತ ಚರ್ಚೆಗೆ ಆಹ್ವಾನ ನೀಡಿರುವ ಶಾಸಕರು, ಮಸೂದೆಯ ಬಗೆಗೆ ಪೂರ್ಣ ಅರಿವುಳ್ಳ ತಜ್ಞರನ್ನು ಹಾಗೂ ಮಾದ್ಯಮ ಪ್ರತಿನಿಧಿಗಳ ಮುಂದಾಳತ್ವದ ವೇದಿಕೆಯನ್ನು ಸೃಷ್ಠಿಸಿ  ಪರ-ವಿರೋಧ ನಿಲುವಿನ ಕನಿಷ್ಠ ತಲಾ ೧೫ ಮಂದಿಯನ್ನು ಆಹ್ವಾನಿಸಿ ಆರೋಗ್ಯಪೂರ್ಣ ಚರ್ಚೆಯನ್ನು ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಡಾ| ರಾಜಾರಾಮ ಕೆ.ಬಿ. ಮಾತನಾಡಿ ತರಾತುರಿಯಲ್ಲಿ ಅನುಷ್ಠಾನಿಸಿದ ಎರಡೂ ಮಸೂದೆಗಳಿಂದ ಸಣ್ಣ ರೈತರು, ಸಣ್ಣ ಹಿಡುವಳಿದಾರರು ಸಂಕಷ್ಠಕ್ಕೆ ಸಿಲುಕುವ ಭೀತಿ ಮೂಡಿದೆ. ಕೃಷಿ ಭೂಮಿಯನ್ನು ಯಾರಿಗೂ ಖರೀದಿಸಬಹುದೆಂಬ ನಿಯಮದಿಂದ ಕೃಷಿ ಭೂಮಿಗಳೆಲ್ಲಾ ವಾಣಿಜ್ಯ ಭೂಮಿಗಳಾಗಿ ಪರಿವರ್ತನೆಯಾಗುವ ಅಪಾಯವಿದೆ. ಈ ಎಲ್ಲಾ ಸೂಕ್ಷ್ಮತೆಗೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ಮುಕ್ತ ಚರ್ಚೆ ಅತೀ ಅಗತ್ಯವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ಮಹಮ್ಮದ್ ತೌಶಿಫ್, ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡ ಕೋಡಿಂಬಾಡಿ, ಕಾರ್ಮಿಕ ಘಟಕದ ಕಾರ್‍ಯದರ್ಶಿ ನಝೀರ್ ಮಠ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.