HomePage_Banner
HomePage_Banner
HomePage_Banner

ಸರ್ವೆ-ಮುಂಡೂರು ಸ್ಪರ್ಷ ಸಹಾಯವಾಣಿಯಿಂದ ಕಿಟ್ ವಿತರಣೆ, ಆಯುಷ್ಮಾನ್ ಕಾರ್ಡ್ ಅಭಿಯಾನ

Puttur_Advt_NewsUnder_1
Puttur_Advt_NewsUnder_1

@ಯೂಸುಫ್ ರೆಂಜಲಾಡಿ

  • ಶಿವನಾಥ ರೈ ನೇತೃತ್ವದಲ್ಲಿ ನೂರಾರು ಕುಟುಂಬಗಳಿಗೆ ನೆರವು

ಪುತ್ತೂರು: ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಶಿವನಾಥ ರೈ ಮೇಗಿನಗುತ್ತು ನೇತೃತ್ವದಲ್ಲಿ ಆರಂಭಗೊಂಡ ಸ್ಪರ್ಷ ಸಹಾಯವಾಣಿ ಮೂಲಕ ಮುಂಡೂರು ಗ್ರಾ.ಪಂ ವ್ಯಾಪ್ತಿಯ ನೂರಾರು ಕುಟುಂಬಗಳಿಗೆ ನೆರವು ನೀಡಲಾಗಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಮದ ವಿವಿಧ ಕಡೆಗಳಿಗೆ ಮನೆ ಬಾಗಿಲಿಗೆ ರೇಷನ್ ತಲುಪಿಸಲಾಗಿದ್ದು ವಾಹನ ಸೌಕರ್ಯವಿಲ್ಲದೇ ಇದ್ದವರಿಗೆ ಅಗತ್ಯ ಮೆಡಿಸಿನ್ ಹಾಗೂ ಅಂಬ್ಯುಲೆನ್ಸ್ ಸೇವೆಯನ್ನು ಒದಗಿಸಲಾಗಿದೆ.

ರೇಷನ್ ವಿತರಣೆಗೆ ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ,ಪದ್ಮಯ್ಯ ನಾಯ್ಕ ಬಂಡಿಕಾನ, ಇಬ್ರಾಹಿಂ ಮುಲಾರ್, ಅಶೋಕ್ ನಾಯ್ಕ ಸೊರಕೆ ಹಾಗೂ ಇನ್ನಿತರ ಅನೇಕರು ಸಹಕಾರ ನೀಡಿದ್ದಾರೆ ಸ್ಪರ್ಷ ಸಹಾಯವಾಣಿಯ ಮುಖ್ಯಸ್ಥರು ತಿಳಿಸಿದ್ದಾರೆ.

ಆಹಾರದ ಕಿಟ್ ವಿತರಣೆ:
ಸಂಕಷ್ಟದಲ್ಲಿದ್ದ ಕಾರ್ಮಿಕ ವರ್ಗದವರಿಗೆ, ಬಿಪಿಎಲ್ ಕಾರ್ಡ್ ಇಲ್ಲದವರಿಗೆ, ಆರೋಗ್ಯ ತೊಂದರೆ ಇರುವವರಿಗೆ ಸರ್ವೆ, ಮುಂಡೂರು, ಕೆಮ್ಮಿಂಜೆಯ ೭ ವಾರ್ಡ್‌ಗಳಲ್ಲಿ ಒಟ್ಟು ೪೨೨ ಆಹಾರದ ಮತ್ತು ತರಕಾರಿ ಕಿಟ್‌ಗಳನ್ನು ವಿತರಿಸಲಾಗಿದೆ.

ಆಹಾರದ ಕಿಟ್ ವಿತರಣೆಗೆ ಅಬುದಾಭಿಯ ಜಯರಾಮ ರೈ ಮಿತ್ರಂಪಾಡಿ ಹಾಗೂ ಸರ್ವೆ, ಮುಂಡೂರು ಸೇರಿದಂತೆ ಹಲವು ದಾನಿಗಳು, ಮುಂಡೂರು ಸಿ.ಎ ಬ್ಯಾಂಕ್ ನಿರ್ದೇಶಕರು, ಮುಂಡೂರು ಗ್ರಾ.ಪಂ ಸದಸ್ಯರು, ಸಾಮಾಜಿಕ, ರಾಜಕೀಯ, ಧಾರ್ಮಿಕ ಮುಂದಾಳುಗಳು ಸಹಕಾರ ನೀಡಿದ್ದರು.

ಉಚಿತ ಆಯುಷ್ಮಾನ್ ಕಾರ್ಡ್ ಶಿಬಿರ
ಸರ್ವೆ ಗ್ರಾಮದ ಕಲ್ಪಣೆ ಮೊಗೇರ ಸಮುದಾಯ ಭವನದಲ್ಲಿ ನಡೆದ ಶಿಬಿರದಲ್ಲಿ ೧೭೬ ಮಂದಿಗೆ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣೆ ಮಾಡಲಾಗಿದ್ದು ಮುಂಡೂರು ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ೨ ದಿನಗಳ ಶಿಬಿರದಲ್ಲಿ ೩೫೪ ಮಂದಿಗೆ ಹಾಗೂ ನರಿಮೊಗರುವಿನಲ್ಲಿ ನಡೆದ ಶಿಬಿರದಲ್ಲಿ ೧೩೧ ಮಂದಿಗೆ ಸೇರಿ ಒಟ್ಟು ೬೬೧ ಮಂದಿಗೆ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ವಿತರಣೆಯನ್ನು ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಪ್ರಾಯೋಜಕತ್ವ ಪಡೆದು ಉಚಿತವಾಗಿ ವಿತರಿಸಲಾಗಿದೆ. ಸಂಘದ ಅಧ್ಯಕ್ಷರು ಸುರೇಶ್ ಕುಮಾರ್ ಸೊರಕೆ, ಮುಂಡೂರು ಗ್ರಾ.ಪಂ ಅಧ್ಯಕ್ಷ ಎಸ್.ಡಿ ವಸಂತ, ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಮತ್ತು ನಿರ್ದೇಶಕರು, ಸಿಬ್ಬಂದಿಗಳು ಸಹಕರಿಸಿದ್ದರು.

ಆಶಾ ಕಾರ್ಯಕರ್ತೆಯರು, ಪ್ರತಿಭಾನ್ವಿತ ವಿದ್ಯಾರ್ಥಿಗಳ ಗುರುತಿಸುವಿಕೆ:
ಕೊರೋನಾ ವಾರಿಯರ್‍ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಸರ್ವೆ, ಮುಂಡೂರು ವ್ಯಾಪ್ತಿಯ ೯ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಗೌರವಿಸಲಾಗಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೫೦೦ಕ್ಕಿಂತ ಅಧಿಕ ಅಂಕಗಳಿಸಿದ ಸರ್ವೆ, ಮುಂಡೂರು, ಕೆಮ್ಮಿಂಜೆ ವ್ಯಾಪ್ತಿಯ ಸುಮಾರು ೩೫ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡಲಾಗಿದೆ.
ಒಟ್ಟಿನಲ್ಲಿ ಸಣ್ಣ ಅವಧಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಸಮಾಜಕ್ಕೆ ಅರ್ಪಿಸಿದ ಸ್ಪರ್ಷ ಸಹಾಯವಾಣಿಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಶಿವನಾಥ ರೈ ಸಾರಥ್ಯ:
ಸ್ಪರ್ಷ ಸಹಾಯವಾಣಿಯ ಮುಖ್ಯಸ್ಥರಾಗಿರುವ ಶಿವನಾಥ ರೈ ಮೇಗಿನಗುತ್ತುರವರು ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದು ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ. ಮುಂಡೂರು ಗ್ರಾ.ಪಂನ ನಿಕಟಪೂರ್ವ ಸದಸ್ಯರೂ ಆಗಿರುವ ಇವರು ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಸ್ಥಳೀಯವಾಗಿ ಹಲವು ಸಂಘ ಸಂಸ್ಥೆಗಗಳಲ್ಲೂ ಸಕ್ರಿಯರಾಗಿದ್ದಾರೆ.

ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ನೆರವಾಗುವ ಸದುದ್ದೇಶ ಇಟ್ಟುಕೊಂಡು ಪ್ರಾರಂಭಗೊಂಡ ಸ್ಪರ್ಷ ಸಹಾಯವಾಣಿ ಮೂಲಕ ನೂರಾರು ಕುಟುಂಬಗಳಿಗೆ ಸಹಾಯ ಮಾಡಲು ಸಾಧ್ಯವಾಗಿದೆ. ಕಿಟ್ ವಿತರಣೆ, ಮನೆ ಬಾಗಿಲಿಗೆ ರೇಷನ್ ವ್ಯವಸ್ಥೆ, ಉಚಿತ ಆಯುಷ್ಮಾನ್ ಶಿಬಿರ ಸೇರಿದಂತೆ ನಾನಾ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹಲವು ದಾನಿಗಳು ನಮಗೆ ಸಹಕಾರ ನೀಡಿದ್ದಾರೆ. ಸ್ಪರ್ಷ ಸಹಾಯವಾಣಿ ಮೂಲಕ ಮುಂದಕ್ಕೂ ವಿವಿಧ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬಡವರ, ಜನಸಾಮಾನ್ಯರ ಪರವಾಗಿ ಕಾರ್ಯ ನಿರ್ವಹಿಸುವುದೇ ನಮ್ಮ ಸ್ಪರ್ಷ ಸಹಾಯವಾಣಿಯ ಉದ್ದೇಶ. ಸಹಕಾರ ನೀಡಿದ ಸರ್ವರಿಗೂ ಅಭಾರಿಗಳಾಗಿದ್ದೇವೆ ಶಿವನಾಥ ರೈ ಮೇಗಿನಗುತ್ತು,  ಸಂಚಾಲಕರು ಮತ್ತು ಸಂಸ್ಥಾಪಕರು ಸ್ಪರ್ಷ ಸಹಾಯವಾಣಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.