HomePage_Banner
HomePage_Banner
HomePage_Banner

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಧರ್ಣಪ್ಪ ಗೌಡರಿಗೆ ಶ್ರದ್ದಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ, ಸವಣೂರು ಇಡ್ಯಾಡಿ ನಿವಾಸಿ ಧರ್ಣಪ್ಪ ಗೌಡರವರಿಗೆ ಶ್ರದ್ಧಾಂಜಲಿ ಸಭೆಯು ಅ.24ರಂದು ಇಡ್ಯಾಡಿ ಮನೆಯಲ್ಲಿ ನಡೆಯಿತು.

ನುಡಿ ನಮನ ಸಲ್ಲಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಪುಣಚ ಮಾತನಾಡಿ, ಪ್ರಗತಿಪರ ಕೃಷಿಕರರಾಗಿ ಸವಣೂರಿನ ಶಕ್ತಿಯಾಗಿ ಬೆಳೆದ ಧರ್ಣಪ್ಪ ಗೌಡರವರು ರೈತ ಸಂಘದ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದರು. ರೈತರ ಪಾಲಿನ ಆಶಾ ಕಿರಣವಾಗಿ ಬೆಳೆದ ಅವರು ಕುಮಾರಧಾರ ಆಣೆಕಟ್ಟು ನಿರ್ಮಾಣದ ವಿರುದ್ಧ ನಡೆದ ಹೋರಾಟದ ನೇತೃತ್ವ ವಹಿಸಿ ಯೋಜನೆಯನ್ನು ಹಿಮ್ಮೆಟ್ಟಿಸುವವಲ್ಲಿ ಅವರ ಪಾತ್ರ ಪ್ರಧಾನವಾದುದು. ಹೋರಾಟಗಳು ಯಾವ ರೀತಿ ಇರಬೇಕೆಂದು ಮಾರ್ಗದರ್ಶನ ನೀಡಿದ್ದರು ಎಂದರು.

ಸುದರ್ಶನ್ ನಾಕ್ ಕಂಪ ಮಾತನಾಡಿ, ಸಂಘಟನ ಚತುರನಾಗಿದ್ದ ಧರ್ಣಪ್ಪ ಗೌಡ ನಮಗೆಲ್ಲ ಶಕ್ತಿಯಾಗಿ ಬೆಳೆದವರು. ಹೋರಾಟದ ಬಗ್ಗೆ ಸದಾ ಮಾರ್ಗದರ್ಶನ ನೀಡಿದವರು. ಊರಿನ ಜನತೆ ಹಾಗೂ ತನ್ನ ಸಹೋದರರೊಂದಿಗೆ ಸೇರಿಕೊಂಡು ಕುಮಾರಧಾರ ನದಿಗೆ ನಿರ್ಮಾಣವಾಗುತ್ತಿದ್ದ ಆಣೆಕಟ್ಟಿನಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿ ಹೋರಾಟ ನಡೆಸಿ ಯಶಸ್ವಿಯಾದವರು ಧರ್ಣಪ್ಪ ಗೌಡರವರು ಎಂದರು.

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಮಾತನಾಡಿ, ಮಾದರಿ ಕೃಷಿಕರಾಗಿ ಬೆಳೆದ ಧರ್ಣಪ್ಪ ಗೌಡರವರು ಸಮಾಜದ ವಿವಿಧ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಅನೇಕ ಹೋರಾಟಗಳನ್ನು ನಡೆಸುವ ಮುಖಾಂತರ ರೈತರ ಪಾಲಿನ ಧ್ವನಿಯಾಗಿದ್ದವರು ಎಂದರು.

ವಾಸುದೇವ ಇಡ್ಯಾಡಿ ಮಾತನಾಡಿ, ಧರ್ಣಪ್ಪ ಗೌಡರವರು, ಬಾಲ್ಯ ಸ್ನೇಹಿತನಾಗಿ, ಪರಸ್ಪರ ಒಡನಾಡಿಯಾಗಿದ್ದವರು. ಸಮಾಜ ಸೇವಕನಾಗಿ ಉತ್ತಮ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು ಎಂದರು.

ಏಣೆಕಲ್ಲು ಬೆಳಿಯಪ್ಪ ಗೌಡ ಮಾತನಾಡಿ, ನುಡಿ ನಮನ ಸಲ್ಲಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೊನ್ನಪ್ಪ ಗೌಡ, ಬಡಿಲ ಈಶ್ವರ ಭಟ್, ಕುಂಬ್ರ ವಲಯಾಧ್ಯಕ್ಷ ಶೇಖರ ರೈ ಕುರಿಕ್ಕಾರ, ವಿಶ್ವನಾಥ ಪೂಜಾರಿ ಕುಂತೂರು, ಅದ್ರಾಮ ಮಣಿಲ, ರಾಧಾಕೃಷ್ಣ ಬೈತ್ತಡ್ಕ, ಜಗದೀಶ ನಡುಬೈಲು, ಗೋಪಾಲಕೃಷ್ಣ ರೈ, ಯತೀಂದ್ರ ಶೆಟ್ಟಿ ಮಠ, ರಾಜೇಂದ್ರ ಪ್ರಸಾದ್, ಬೆಳಿಯಪ್ಪ ಗೌಡ ಚೌಕಿಮಠ, ಮೃತರ ಪತ್ನಿ ಪ್ರಮೀಳಾ, ಮಕ್ಕಳಾದ ಜಯಕೃಷ್ಣ, ಶಾಲಿನಿ, ಸಹೋದರರಾದ ಶಿವಣ್ಣ ಗೌಡ ಇಡ್ಯಾಡಿ. ಕುಶಾಲಪ್ಪ ಗೌಡ ಇಡ್ಯಾಡಿ, ಸಹೋದರಿಯರಾದ ವೀರಮ್ಮ, ಲೀಲಾವತಿ ಹಾಗೂ ಮೀನಾಕ್ಷಿ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.